ಮತದಾನ ಅರಿವು: ವಿವಿ ಪ್ಯಾಟ ಮತಯಂತ್ರದ ಪ್ರಾತ್ಯಕ್ಷಿಕೆ

ಅಥಣಿ 08: ಪ್ರತಿಯೊಂದು ಮತವೂ ಅಮೂಲ್ಯವಾದದ್ದು, ಯಾವುದೇ ಆಸೆ ಆಮಿಷಗಳಿಗೆ ಒಳಗಾಗಿ ಮತವನ್ನು ಮಾರಿಕೊಳ್ಳಬಾರದು ಎಂದು ತಾ.ಪಂ ನಿವರ್ಾಹಕ ಅಧಿಕಾರಿ ಹಾಗೂ ತಾಲೂಕಾ ಸ್ವೀಪ್ ಸಮಿತಿ ಅಧ್ಯಕ್ಷ ರವಿ ಬಂಗಾರೆಪ್ಪನವರ ಹೇಳಿದರು.

 ಅವರು  ಪಟ್ಟಣದ  ಜೆ.ಇ ಶಿಕ್ಷಣ ಸಂಸ್ಥೆಯ ಕೆ.ಎ.ಲೋಕಾಪೂರ ಮಹಾವಿದ್ಯಾಲಯದಲ್ಲಿ ತಾಲೂಕಾಡಳಿತ, ತಾಲೂಕಾ ಸ್ವೀಪ್ ಸಮಿತಿ ಮತ್ತು ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ಯುವ ಮತದಾರರಿಗೆ  ಮತದಾನ ಅರಿವು ಮೂಡಿಸುವ ಮತ್ತು ವಿವಿ ಪ್ಯಾಟ ಯಂತ್ರ ಬಳಕೆಯ ಪ್ರಾತ್ಯಕ್ಷತೆ ನೀಡಿ ಮಾತನಾಡುತ್ತಿದ್ದರು.   

          ದೇಶದ ಸವರ್ಾಂಗೀಣ ಅಭಿವೃದ್ಧಿಗಾಗಿ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು.  ಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನ  ಮಾಡುವುದರ ಮೂಲಕ ನಮ್ಮ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂದರು.

        ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ಎಂ.ಎನ್ ಬಳಿಗಾರ ಮಾತನಾಡಿ ಪ್ರಥಮ ಬಾರಿ ಮತ ಚಲಾಯಿಸುವ ಯುವಕ ಯುವತಿಯರಿಗೆ ಸಾಕಷ್ಟು ಕುತೂಹಲಗಳಿರುತ್ತವೆ, ಅದಕ್ಕಾಗಿಯೇ ಪ್ರತಿಯೊಂದು ವಿದ್ಯಾಲಯಗಳಲ್ಲಿ ಪದವಿ ವಿದ್ಯಾಥರ್ಿಗಳಿಗೆ ಮತ ಚಲಾವಣೆಯ ಕುರಿತಾಗಿ ಹಾಗೂ ಮತಯಂತ್ರದ ಬಳಕೆಯ ಕುರಿತಾಗಿ ಮಾಹಿತಿ ನೀಡಲಾಗುತ್ತಿದೆ, ಇದರಿಂದ ಯುವಕರಿಗೆ ಮತ ಚಲಾವಣೆಯ ಸಮಯದಲ್ಲಿ ಆಗುವಂತಹ ಗೊಂದಲಗಳನ್ನು ಈಗಲೇ ನಿವಾರಿಸಿಕೊಳ್ಳಬಹುದು ಎಂದ ಅವರು ನಿಮ್ಮ ಮತ ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ದೇಶದ ಹಿತದೃಷ್ಟಿಯಿಂದ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡುವ ಮೂಲಕ ಉತ್ತಮ ಪ್ರಜಾಪ್ರಭುತ್ವ ಆಡಳಿತ ಜಾರಿಗೆ ತರಬೇಕು. ಅದಕ್ಕಾಗಿ ಪ್ರತಿಯೊಬ್ಬ ಮತದಾರ ಕಡ್ಡಾಯವಾಗಿ ಮತದಾನ ಮಾಡಬೇಕು. ಈ ಬಗ್ಗೆ ನಿಮ್ಮ ಕುಟುಂಬ ಸದಸ್ಯರಿಗೆ ಅರಿವು ಮೂಡಿಸಬೇಕು ಎಂದು ವಿದ್ಯಾಥರ್ಿಗಳಿಗೆ ಕರೆ ನೀಡಿದರು.

       ಅರುಣ ಯಲಗುದ್ರಿ, ಎಲ್ ವಿ ಕುಲಕಣರ್ಿ,  ಪ್ರಾಚಾರ್ಯ ಆರ್.ಎಂ ದೇವರೆಡ್ಡಿ  ಇನ್ನಿತರರು ಉಪಸ್ಥಿತರಿದ್ದರು.