ಲೋಕದರ್ಶನ
ವರದಿ
ಅಂಕೋಲಾ 20
: ಬೋಳೆ ಹೊಸಗದ್ದೆ ಗೌಡರಕೇರಿಯಲ್ಲಿ ಶ್ರೀ ಕೃಷ್ಣ ಉತ್ಸವ
ಸಮಿತಿಯವರು ಆಯೋಜಿಸಿದ್ದ 17ನೇ ವರ್ಷದ ವಾಲಿಬಾಲ್
ಪಂದ್ಯಾವಳಿಯನ್ನು ಪುರಸಭಾ ಸದಸ್ಯ ಕಾತರ್ಿಕ ಎಸ್. ನಾಯ್ಕ ಲಕ್ಷ್ಮೇಶ್ವರ
ಇವರು ಉದ್ಘಾಟಿಸಿ ಈ ಹಿಂದಿನಿಂದಲೂ ಗ್ರಾಮೀಣ
ಭಾಗದ ಇಲ್ಲಿಯ ಜನತೆ ಹಲವು ವಿದಾಯಕ
ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದ್ದನ್ನು ಹತ್ತಿರದಿಂದ ಕಂಡಿದ್ದೇನೆ. ನನ್ನ ಅನೇಕ ಮಿತ್ರರು
ಊರ ಹಿರಿಯರ ಮಾರ್ಗದರ್ಶನದಲ್ಲಿ ಶ್ರೀ ಕೃಷ್ಣ ಉತ್ಸವದ
ನಿಮಿತ್ತ ಹಮ್ಮಿಕೊಂಡಿರುವ ವಾಲಿಬಾಲ್ ಪಂದ್ಯಾವಳಿ ಊರಿನ ಒಗ್ಗಟ್ಟಿಗೆ ಸಾಕ್ಷಿಯಾಗಿ
ಯಶಸ್ವಿಯಾಗಲಿ ಎಂದರು.
ಶಿಕ್ಷಕರು ಮತ್ತು ಹಿರಿಯ ಕ್ರೀಡಾಪಟುಗಳಾದ ಕೆ.ಜಿ.ಗೌಡ
ಬೆಳಸೆ ಇವರು ಅಧ್ಯಕ್ಷತೆ ವಹಿಸಿ
ಮಾತನಾಡಿ ಚಿಕ್ಕಂದಿನಿಂದಲೇ ಸತತ ಅಭ್ಯಾಸದ ಮೂಲಕ
ಗುರುತಿಸಿಕೊಂಡು ಸಾಧನೆ ಮಾಡಬೇಕು. ಗ್ರಾಮೀಣ ಭಾಗದಲ್ಲಿಯೂ ಹಲವು ಉತ್ತಮ ಸೌಲಭ್ಯಗಳನ್ನು
ಒದಗಿಸಿದರೆ ಉತ್ತಮ ಕ್ರೀಡಾ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯ ಎಂದರು.
ಉತ್ಸವ ಸಮಿತಿಯ ಅಧ್ಯಕ್ಷ ಜೆ.ಆರ್.ರವಿ
ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗ್ರಾ.ಪಂ ಸದಸ್ಯ
ವಿಘ್ನೇಶ ಗೌಡ, ಮಾಜಿ ಸದಸ್ಯ
ಸೋಮೇಶ್ವರ ಗೌಡ, ನಿಣರ್ಾಯಕರಾದ ಶಂಕರ
ಗೌಡ ಅಂಬಾರಕೊಡ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಾಗವಹಿಸಿದ ಒಟ್ಟೂ 8 ತಂಡಗಳಲ್ಲಿ ಅಂತಿಮವಾಗಿ ಬಾಲಗೋಪಾಲ
ಎ ತಂಡ (ಪ್ರಥಮ) ಮಾಹಾಸತಿ
ಯಂಗ್ ಬಾಯ್ಸ್ ತಂಡ (ದ್ವೀತಿಯ)
ಬಹುಮಾನ ಪಡೆದುಕೊಂಡರು. ಶ್ರೀ ಕೃಷ್ಣ ಉತ್ಸವ
ಸಮಿತಿಯ ಪದಾಧಿಕಾರಿಗಳು,ಸದಸ್ಯರು ಮತ್ತು ಊರ ನಾಗರಿಕರು ಸಹಕರಿಸಿದರು.