ಲೋಕದರ್ಶನ ವರದಿ
ತಾಳಿಕೋಟೆ 29:ವಿಜಯನಗರ ಸಾಮ್ರಾಜ್ಯದಲ್ಲಿ ಈ ನಮ್ಮ ನಾಡು ಇಡೀ ವಿಶ್ವದಲ್ಲಿಯ ದೇಶಗಳಲ್ಲಿಯೇ ಅತ್ಯಂತ ಶ್ರೀಮಂತವಾದುದ್ದಾಗಿದೆ ಅಂತಹ ಐತಿಹಾಸಿಕ ಪಟ್ಟಣದಲ್ಲಿ 16 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವದು ಸಂತೋಷವೆನಿಸುತ್ತಿದೆ ಈ ದೇಶವನ್ನು ಉಳಿಸುವದಕ್ಕಾಗಿ ಈ ಕನ್ನಡ ನಾಡಿನ ಕಿತ್ತೂರಿನ ನೆಲದಿಂದ ಹೋರಾಟ ಪ್ರಾರಂಭವಾದುದ್ದಾಗಿದೆ ವೆಂಬುದನ್ನು ನಾವೇಲ್ಲರೂ ತಿಳಿದುಕೊಳ್ಳಬೇಕಾಗಿದೆ ಕಿತ್ತೂರ ಚೆನ್ನಮ್ಮ, ಸಂಗೋಳ್ಳಿರಾಯಣ್ಣ, ಒಳಗೊಂಡಂತೆ ಅನೇಕ ಮಹಾ ಪುರುಷರು ಹೋರಾಟಗಳನ್ನು ಮಾಡಿದವರಾಗಿದ್ದಾರೆ ಬಸವಣ್ಣನವರಿಗೆ ಜನ್ಮ ನೀಡಿದ ಈ ಪುಣ್ಯಭೂಮಿಯಲ್ಲಿ ಕನ್ನಡದ ಕಲರವ ಹೆಚ್ಚಿಸುವಂತಹ ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸಲು ಎಲ್ಲರೂ ಈಗಲೂ ಉತ್ಸಕರಾಗಿ ಕಂಕಣಬದ್ದರಾಗಿರುವದು ಹೆಮ್ಮೆ ಎನಿಸುತ್ತದೆ ಎಂದು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ನುಡಿದರು.
ಈ ವಿಜಯನಗರ ಸಾಮ್ರಾಜ್ಯದೊಂದಿಗೆ ಮೇರೆದ ಈ ನಾಡು ಹಾಳು ಹಂಪೆ ಎಂದು ಏನು ಕರಿತೇವೆ ಅಲ್ಲಿ 5 ಲಕ್ಷ ಮನೆಗಳು ಇದ್ದವು ಎಂಬುದು ಇನ್ನೂ ಕಂಡುಬರುತ್ತವೆ ಬೀದಿ ಬೀದಿಯಲ್ಲಿ ಮುತ್ತು ರತ್ನಗಳು ಮಾರಾಟವಾಗಿರುವದು ಇತಿಹಾಸದಲ್ಲಿಯೇ ಉಲ್ಲೇಖವಾಗಿದೆ ವೀರರು, ಹೋರಾಟಗಾರರು ಈ ನಾಡಿನಲ್ಲಿ ಜನಿಸಿಹೋಗಿದ್ದಾರೆ ಮಕ್ಕಳಿಗೆ ಈ ನಾಡಿನ ಸಂಸ್ಕೃತಿ ಬಿತ್ತುವಂತಹ ಕಾರ್ಯ ಪಾಲಕರು ಮಾಡಬೇಕಿದೆ ರೈತನಮಗನಾಗಿ ಬೆಳೆದು ಬಂದ ಪ್ರೋ.ಬಿ.ಆರ್.ಪೋಲೀಸ್ಪಾಟೀಲರು ಲಾವಣಿ ಪಧಗಳ ಮೂಲಕ ರಾಜ್ಯಪ್ರಶಸ್ತಿಗಳನ್ನು ಪಡೆದುಕೊಂಡು ಮುಂದೆ ಸಾಗಿದ ಅವರಿಗೆ ಈ ನಾಡಿನ ಜನ ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಅವರಿಗೆ ಗೌರವಿಸುವಂತಹ ಕಾರ್ಯ ಮಾಡಿರುವದು ಮೆಚ್ಚುವಂತಹದ್ದಾಗಿದೆ ಎಂದರು.
ನಿಕಟಪೂರ್ವ ಅಧ್ಯಕ್ಷ ಎನ್.ಜಿ.ಕರೂರ ಅವರು ಸಮ್ಮೇಳನದ ಸವರ್ಾಧ್ಯಕ್ಷರಿಗೆ ದ್ವಜವನ್ನು ಹಸ್ತಾಂತರಿಸಿದರು. ಸಮ್ಮೇಳದಲ್ಲಿ ಸಚಿವರಾದ ಎಂ.ಸಿ.ಮನಗೂಳಿ, ರಮೇಶ ಜಿಗಜಿಣಗಿ ಅವರು ಪ್ರವೀಣ್ ಯಾಳವಾರ ಅವರ ಆಶಯ ನುಡಿಗಳು ಎಂಬ ಕೃತಿಯನ್ನು ಹಾಗೂ ಚಂದ್ರೇಗೌಡ ಕುಲಕಣರ್ಿ ಅವರು ದ್ವನಿಸೂರುಳಿ ಮೂಲಕ ರಚಿಸಿದ ಚಿಲಿಪಿಲಿ ಸಿಡಿಯನ್ನು ಬಿಡುಗಡೆಗೊಳಿಸಿದರು.