ಲೋಕದರ್ಶನ ವರದಿ
ಮಹಾಲಿಂಗಪುರ 14:ಸಮೀಪದ ಢವಳೇಶ್ವರ ಗ್ರಾಮದ ವಿವೇಕಾನಂದ ಬ್ರಿಗೇಡ್ ಕಾರ್ಯಕರ್ತರು ಊರಿನ ಎಲ್ಲ ಶಾಲೆಗಳ ವಿದ್ಯಾಥರ್ಿಗಳನ್ನು ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಸೇರಿಸಿ ಅರ್ಥಪೂರ್ಣವಾಗಿ ವಿವೇಕಾನಂದ ಜಯಂತಿ ಆಚರಿಸಿದರು. ಇಲ್ಲಿನ ಸರಕಾರಿ ಎಂಎಪಿಎಸ್ ಶಾಲೆ, ಸರಕಾರಿ ಅನುದಾನಿತ ಢವಳನಾಥ ಶಾಲೆ, ಸರಕಾರಿ ಪ್ರೌಢಶಾಲೆಯ ಅಂದಾಜು 800 ಕ್ಕೂ ಹೆಚ್ಚು ವಿದ್ಯಾಥರ್ಿಗಳನ್ನು ಒಂದೇ ಅಂಗಳದಲ್ಲಿ ಸೇರಿಸಿ, ವಿವೇಕಾನಂದರ ಕುರಿತ ಭಾಷಣ, ಪ್ರಬಂಧ, ಚಿತ್ರಕಲೆ, ನುಡಿಮುತ್ತುಗಳ ಸಂಗ್ರಹ, ಛದ್ಮವೇಷ ಸೇರಿದಂತೆ ನಾನಾ ಸ್ಪಧರ್ೆಗಳನ್ನು ಏರ್ಪಡಿಸಿದರು. ವಿಜೇತ ಸ್ಪಧರ್ಾಥರ್ಿಗಳಿಗೆ ಪುಸ್ತಕ ಬಹುಮಾನ ಹಾಗೂ ಎಲ್ಲ ವಿದ್ಯಾಥರ್ಿಗಳಿಗೆ ವಿವೇಕಾನಂದರ ಕಿರು ಹೊತ್ತಿಗೆಗಳನ್ನು ಉಚಿತವಾಗಿ ವಿತರಿಸಿದರು. ಇಬ್ಬರು ಬಾಲಕಿಯರು ಸೇರಿದಂತೆ 11 ವಿದ್ಯಾಥರ್ಿಗಳು ವಿವೇಕಾನಂದರ ಛದ್ಮವೇಷದಲ್ಲಿ ಕಂಗೊಳಿಸಿ ಸ್ಪೂತರ್ಿ ತುಂಬಿದರು. ಬಾಲಕಿಯರೇ ಹೆಚ್ಚಾಗಿ ವಿವೇಕಾನಂದರ ಬಗ್ಗೆ ವೀರಾವೇಶದಿಂದ ಭಾಷಣ ಮಾಡಿದ್ದು ವಿಶೇಷವಾಗಿತ್ತು.
ಹಾರ, ತುರಾಯಿ, ಪುಷ್ಪಾರ್ಪಣೆಗಳಂಥ ಯಾವ ಔಪಚಾರಿಕತೆಯೂ ಇಲ್ಲದೇ ಕೇಸರಿ ಶಾಲು, ಕೇಸರಿ ನಾಮ, ಕೈಯಲ್ಲಿ ಪುಸ್ತಕಗಳೇ ಕಾರ್ಯಕ್ರಮದಲ್ಲಿ ಕಂಗೊಳಿಸಿದ್ದು, ಔಪಚಾರಿಕ ಭಾಷಣಕ್ಕಿಂತ ಮಕ್ಕಳಲ್ಲಿ ವಿವೇಕಾನಂದರ ಜೀವನದ ಪ್ರಾತ್ಯಕ್ಷಿಕೆಯ ದರ್ಶನವೇ ಪ್ರಧಾನ ಪಾತ್ರ ವಹಿಸಿತು. ಶಿಸ್ತಿಗೆ ಹೆಚ್ಚು ಆದ್ಯತೆಯಿದ್ದ ಕಾರ್ಯಕ್ರಮದಲ್ಲಿ ಎಲ್ಲ ಮಕ್ಕಳಲ್ಲಿ ಧ್ಯಾನಸ್ಥ ಸ್ಥಿತಿ, ಮೌನ ಮನಸ್ಥಿತಿ ಕಂಡು ಬಂದಿತು. ಪ್ರತಿ ವರ್ಷದಂತೆ ಈ ವರ್ಷವೂ ಸಾಧಕ ವಿದ್ಯಾಥರ್ಿನಿ ಸವಿತಾ ದಲಾಲಗಿ ಮತ್ತು ಸಾಧಕ ಶಿಕ್ಷಕ ಎಂ.ಬಿ.ಮನ್ನಿಕೇರಿ ಅವರಿಗೆ ವಿವೇಕ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿವೇಕ ಬ್ರಿಗೇಡ್ನ ಯುವಕ ಮಹಾಲಿಂಗ ಪಟ್ಟಣಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ವಿವೇಕಾನಂದರು ಸರ್ವಕಾಲಿಕ ಚೇತನ ಎಂದರು. ವಕ್ತಾರ ಪಿ.ಎಸ್.ದೊಡಮನಿ ಮಾತನಾಡಿ ಮಕ್ಕಳು ವಿವೇಕಾನಂದರ ಆದರ್ಶ ಪಾಲಿಸಲಿ ಎಂದರು. ಎಸ್.ವಿ.ಸಿದ್ನಾಳ ಮಾತನಾಡಿ ಢವಳೇಶ್ವರ ಗ್ರಾಮ ಘಟಪ್ರಭಾ ತೀರದಲ್ಲಿ ರಾಷ್ಟ್ರೀಯತೆಯ ಕಹಳೆ ಮೊಳಗಿಸುತ್ತಿರುವುದು ಶ್ಲಾಘನೀಯ ಎಂದರು. ಕಾವ್ಯಾ ಮಠದ ಸಂಗಡಿಗರು ಪ್ರಾರ್ಥನೆ ಹಾಡಿದರು. ಭೀಮವ್ವ ಹವಾಲ್ದಾರ ಸಂಘಡಿಗರು ಸ್ವಾಗತ ಗೀತೆ ಹಾಡಿದರು. ಸತೀಶ ಪಟ್ಟಣಶೆಟ್ಟಿ, ಆನಂದ ಪಟ್ಟಣಶೆಟ್ಟಿ, ಶ್ರೀಕಾಂತ ಹಿರೇಮಠ, ಮಹಾಂತೇಶ ನಾವಿ, ಪೂಣರ್ೇಶ ಮಠಪತಿ, ಮಲ್ಲಯ್ಯ ಮಠದ ಸದಾಶಿವ ಪಟ್ಟೇದ, ಮಹಾಂತೇಶ ಪಟ್ಟಣಶೆಟ್ಟಿ, ಶ್ರೀಮಂತ ಪಟ್ಟಣಶೆಟ್ಟಿ, ಮಹಾಲಿಂಗ ಚಿಂಚಲಿ, ವೆಂಕಟೇಶ ಕಿಲಾರಿ, ಮಹಾದೇವ ಲೋಕುರಿ ಇದ್ದರು.