ಲೋಕದರ್ಶನ ವರದಿ
ಶೇಡಬಾಳ: ಪ್ರಕೃತಿ ವಿಕೋಪದಿಂದ ಮನೆ, ಮಠ, ಬೆಳೆಹಾನಿ ಎಲ್ಲವನ್ನು ಕಳೆದುಕೊಂಡಿರುವ ಸಂತ್ರಸ್ತರು ದೃತಿಗೇಡದೇ ಧೈರ್ಯದಿಂದ ಮತ್ತೇ ಬದುಕನ್ನು ಕಟ್ಟಿಕೊಳ್ಳುವಂತೆ ಶ್ರವಣಬೆಳಗೊಳದ ಪ.ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕರು ಹೇಳಿದರು.
ಅವರು ಶುಕ್ರವಾರ ಸಮೀಪದ ಉಗಾರ ಬುದ್ರುಕ ಗ್ರಾಮದ ಶ್ರೀ ಪದ್ಮಾವತಿ ಏಜ್ಯುಕೇಶನ್ ಟ್ರಸ್ಟ್ನ ಶಾಲೆಯಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರಿಗೆ ಶ್ರೀಕ್ಷೇತ್ರ ಶ್ರವಣಬೆಳಗೊಳದ ಮಠದ ವತಿಯಿಂದ ದವಸಧಾನ್ಯ, ಬಟ್ಟೆ-ಬರೆ, ಇನ್ನಿತರ ನಿತ್ಯೋಪಯೋಗಿ ವಸ್ತುಗಳನ್ನು ವಿತರಿಸಿ ಮಾತನಾಡುತ್ತಿದ್ದರು. ಶ್ರೀಗಳು ಮುಂದೆ ಮಾತನಾಡುತ್ತಾ ಮಹಾರಾಷ್ಟ್ರ ಹಾಗೂ ಕನರ್ಾಟಕ ಕೃಷ್ಣಾ ನದಿ ತೀರದ ಜನರಿಗೆ ಒದಗಿ ಬಂದಿರುವ ಸಂಕಷ್ಟ ಮತ್ತೇ ಯಾರಿಗೂ ಬಾರದಿರಲಿ ಎಂದು ದೇವರಲ್ಲಿ ಬೇಡಿಕೊಂಡ ಅವರು ಸಂತ್ರಸ್ತರು ಧೃತಿಗೇಡದೇ ಧೈರ್ಯದಿಂದ ಮತ್ತೇ ಬದುಕನ್ನು ಕಟ್ಟಿಕೊಳ್ಳುವಂತೆ ಸಲಹೆ ನೀಡಿದರು.
ಸಕರ್ಾರ, ಸಂಘ ಸಂಸ್ಥೆಗಳು, ಮಠ-ಮಾನ್ಯಗಳು, ಕೊಡುಗೈ ದಾನಿಗಳು ಹೆಚ್ಚಿನ ಪ್ರಮಾಣದಲ್ಲಿ ಸಂತ್ರಸ್ತರಿಗೆ ಸಹಾಯ ಹಸ್ತವನ್ನು ನೀಡಿ ಮತ್ತೇ ಅವರ ಬದುಕು ಕಟ್ಟಿಕೊಳ್ಳಲು ಸಹಕರಿಸುವಂತೆ ಕರೆ ನೀಡಿದರು.
ಅದರಂತೆ ಸೋಂದಾ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕರು ನಿರಾಶ್ರತರನ್ನು ಉದ್ದೇಶಿಸಿ ಮಾತನಾಡಿದರು. ಶ್ರೀಕ್ಷೇತ್ರ ಶ್ರವಣಬೆಳಗೊಳದ ವತಿಯಿಂದ 4 ಲಾರಿಗಳ ಮೂಲಕ ಆಹಾರ ಧಾನ್ಯ, ಬಟ್ಟೆ-ಬರೆ, ನಿತ್ಯೋಪಯೋಗಿ ವಸ್ತುಗಳನ್ನು ನೀಡಿದ್ದಾರೆ.
ಅದರಂತೆ ಬೆಂಗಳೂರಿನ ವಿಶ್ವವಿದ್ಯಾಲಯ ಕುಲಪತಿಗಳಾದ ಕೆ.ಆರ್. ವೇಣುಗೋಪಾಲ, ಕುಲ ಸಚಿವರು ಪ್ರೋ. ಬಿ.ಕೆ.ರವಿ, ಎನ್.ಎಸ್.ಎಸ್. ಸಂಯೋಜಕರ ಅಧಿಕಾರಿಗಳಾದ ಸತೀಶಗೌಡ, ಹಾಗೂ ಕಾರ್ಯ ಅಧಿಕಾರಿಗಳು ಸೇರಿದಂತೆ ಶ್ರೀ ಪ್ರತಿಷ್ಠಾನ ಬೆಂಗಳೂರುಪದಾಧಿಕಾರಿಗಳಾದ ಬಿಂದು ಮೂತರ್ಿ ಎಸ್.ಪಿ. ಶ್ರೀಧರ, ಸಿಂಹಘರ್ಜನೆ ಬೆಂಗಳೂರು, ಪ್ರವೀಣ, ಭರತ, ಗಿರೀಶ, ಕನ್ನಡ ಸಾಹಿತ್ಯ ಪರಿಷತ್ತ ಮಲ್ಲೇಶ್ವರಂ 2 ಲಾರಿಗಳ ಮೂಲಕ ಆಹಾರ ಧಾನ್ಯ ವಸ್ತುಗಳನ್ನು ಕಳುಹಿಸಿಕೊಟ್ಟಿದ್ದಾರೆ.
ಈ ಸಮಯದಲ್ಲಿ ಶ್ರೀ ಪದ್ಮಾವತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶೀತಲಗೌಡ ಪಾಟೀಲ, ಕೆಪಿಸಿಸಿ ಸದಸ್ಯ ಕಿರಣಕುಮಾರ ಪಾಟೀಲ, ಸಾಂಗಲಿ ಮಾಜಿ ನಗರಾಧ್ಯಕ್ಷ ಸುರೇಶ ಪಾಟೀಲ, ಅಭಿಯಂತರರಾದ ಅರುಣಕುಮಾರ ಯಲಗುದ್ರಿ, ವಿನೋದ ದೊಡ್ಡನ್ನವರ, ಅಮರ ದುರ್ಗನ್ನವರ, ಶಿರಹಟ್ಟಿಯ ಬಿ.ಸಿ.ಪಾಟೀಲ,
ಜಿನ್ನಪ್ಪ ಅಸ್ಕಿ(ಹಾರೂಗೇರಿ), ವಜ್ರಕುಮಾರ ಮಗದುಮ, ಅಪ್ಪಾಸಾಬ ಚೌಗಲಾ, ಭರತೇಶ ಖಂಡೇರಾಜುರಿ, ದೀಪಕ ಪಾಟೀಲ, ಅಣ್ಣಾ ಪಾಟೀಲ, ಪದ್ಮಣ್ಣಾ ಚೌಗಲೆ,
ಅಭಿಷೇಕ ಚೌಗಲೆ, ಪ್ರವೀಣ ಆಳಪ್ಪನವರ, ಜೀತೇಂದ್ರ ಪಾಟೀಲ, ಸುಭಾಷ ಖಂಡೇರಾಜುರಿ, ಪ್ರಮೋದ ಹೊಸುರೆ, ರಾವಸಾಬ ಘಾಳಿಮಟ್ಟಿ ಸೇರಿದಂತೆ ಅನೇಕರು ಇದ್ದರು.