ವೆಂಕಟೇಶ ಇನಾಮದಾರ ವಾಸುದೇವ ಮಹಾಲೆಗೆ ದಿ.ಟಂಕಸಾಲಿ ಪ್ರಶಸ್ತಿ

ಲೋಕದರ್ಶನ ವರದಿ

ಮುಧೋಳ: ಎಲ್ಲ ಭಾಷೆಗಳನ್ನು ಪ್ರೀತಿಸಿ, ಆದರೆ ಮಾತೃಭಾಷೆಯನ್ನು ಮರೆಯದಿರಿ. ನಾವು ದೇಶದ ಪ್ರತಿಯೊಂದು ಭಾಷೆಯನ್ನು ಪ್ರೀತಿಸಿ ಗೌರವಿಸಬೇಕು. ಆದರೆ ನಮ್ಮ ಮಾತೃ ಭಾಷೆಯನ್ನು ಎಂದೂ ಮರೆಯಬಾರದು ಎಂದು ವಿಜಯಪೂರದ ನಿವೃತ್ತ ಪ್ರಾಚಾರ್ಯ ಪ್ರೊ.ಜಿ. ಆರ್. ಕುಲಕಣರ್ಿ ಹೇಳಿದರು. 

     ಅವರು ದಿ.ಟಂಕಸಾಲಿ ಪ್ರತಿಷ್ಠಾನ ಹಾಗೂ ಹಿಂದಿ ಪ್ರಚಾರ ಸಂಘ ಮುಧೋಳ ಸಂಯುಕ್ತ ಆಶ್ರಯದಲ್ಲಿ ಟಂಕಸಾಲಿ ಭವನದಲ್ಲಿ ಜರುಗಿದ ದಿ.ಜಗನ್ನಾಥರಾವ ಟಂಕಸಾಲಿ ಸ್ಮರಣಾರ್ಥ 18ನೇ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಭಾಷೆಯಲ್ಲಿ ಶಕ್ತಿತುಂಬೇಕಾದರೆ ನಿರಂತರ ಓದಬೇಕು. ಯಾವದೇ ಒಬ್ಬ ವ್ಯಕ್ತಿಯಿಂದ ಸಂಸ್ಥೆ ಬೆಳೆಯದು. ಸಂಸ್ಥೆ ಸದಸ್ಯರ ಸಾಂಘೀಕ ಪ್ರಯತ್ನದಿಂದ ಅಭಿವೃದ್ಧಿಪಡಿಸ ಬಹುದಾಗಿದೆ. ಇಂದಿನ ದಿನಗಳಲ್ಲಿ ಮಾಧ್ಯಮಗಳು ಅತ್ಯಂತ ಜವಾಬ್ದಾರಿಯುತ ಕೆಲಸವನ್ನು ಮಾಡಬೇಕಾಗಿದ್ದು, ನಕಾರಾತ್ಮಕ ಸುದ್ದಿಗಳನ್ನು ಮುಖ ಪುಟಗಳಲ್ಲಿ ಪ್ರಕಟಿಸದೇ ಸಕಾರಾತ್ಮಕ ಸುದ್ದಿಗಳನ್ನು ಪ್ರಕಟಿಸುವದರಿಂದ ಓದುಗರಲ್ಲಿ ಸಕಾರಾತ್ಮಕ ಚಿಂತನೆ ಮೂಡಿಬರು ತ್ತವೆ. ನಕಾರಾತ್ಮಕ ಸುದ್ದಿಗಳಿಂದ ಯುವ ಪೀಳಿಗೆಯ ಮೇಲೆ ವಿಪರೀತ ಪರಿಣಾಮ ಉಂಟಾಗಲಿದೆ ಎಂದು ಅವರು ಆತಂಕವನ್ನು ವ್ಯಕ್ತಪಡಿಸಿ,ದಿ.ಟಂಕಸಾಲಿಯವರ ಪತ್ರಿಕಾರಂಗ ಹಾಗೂ ಹಿಂದಿ ಪ್ರಚಾರಕ್ಕಾಗಿ ಮಾಡಿದ ಕಾರ್ಯವನ್ನು ಅವರು ಶ್ಲಾಘಿಸಿದರು.

   ಪ್ರಸಕ್ತ ವರ್ಷದ ಪ್ರಶಸ್ತಿಗೆ ಭಾಜನರಾದ ಖ್ಯಾತ ಬರಹಗಾರ, ವ್ಯಂಗಚಿತ್ರಗಾರ ವೆಂಕಟೇಶ ಇನಾಮದಾರ ಮಾತನಾಡಿ, ದೊಡ್ಡವರು ದೊಡ್ಡವರನ್ನು ಸನ್ಮಾನಿಸಿ ದೊಡ್ಡವರಾಗುವದಕ್ಕಿಂತ ಸಣ್ಣವರನ್ನು ಸನ್ಮಾನಿಸಿ ದೊಡ್ಡವರಾಗುವದು ಯೋಗ್ಯ. ಅಜರ್ಿ ಹಾಕಿ ಪ್ರಶಸ್ತಿಗೆ ಭಾಜನರಾಗುವ ಇಂದಿನ ದಿನಗಳಲ್ಲಿ ಯಾವದೇ ಅಜರ್ಿ ಹಾಕದೇ ಹಿರಿಯ ಸಾಧಕರ ಹೆಸರಿನ ಪ್ರಶಸ್ತಿ ನನಗೆ ಲಭಿಸಿದ್ದು ಹೆಮ್ಮೆಯ ಸಂಗತಿ ಆಗಿದೆ. ನನ್ನ ಸಾಧನೆಯ ಶ್ರೇಯ ನನ್ನ ಬರಹ ಹಾಗೂ ವ್ಯಂಗ್ಯ ಚಿತ್ರ ಕಲೆಗೆ ಬೆಳೆಸಿದ ಕೀತರ್ಿ ಸಂ.ಕ. ಪತ್ರಿಕೆಗೆ ಸಲ್ಲುತ್ತದೆ. ಇದು ಬಯಸದೇ ಬಂದ ಭಾಗ್ಯ ಎಂದರು.

      ಹಿಂದಿ ಕ್ಷೇತ್ರದಲ್ಲಿ ಗಣನೀಯ ಸಾಧನೆಗಾಗಿ ಈ ಪ್ರಶಸ್ತಿಗೆ ಭಾಜನರಾದ ಅಂಕೋಲಾದ ವಾಸುದೇವ ಮಹಾಲೆ ಮಾತನಾಡಿ, ವೃತ್ತಿಯಲ್ಲಿ ಇಂಜಿನೀಯರ್ ಆದ ನಾನು ಹಿಂದಿ ಕ್ಷೇತ್ರದಲ್ಲಿ ಏನಾದರೂ ಸಾಧನೆ ಗೈದಿದ್ದರೆ ಅದು ನನ್ನ ಪರಿವಾರದ ಕೊಡುಗೆ. ಹಿಂದಿ ರಾಷ್ಟ್ರಭಾಷೆಯನ್ನು ಗೌರವಿಸುವದರ ಜತೆ ಮಾತೃಭಾಷೆಯನ್ನು ಪ್ರೀತಿಸೋಣ ಎಂದು ಅವರು ಕರೆ ನೀಡಿದರು.

   ಹಿರಿಯ ಪತ್ರಕರ್ತ ಜಗನ್ನಾಥ ಟಂಕಸಾಲಿ ಅವರ ಒಡನಾಡಿ ಸಾಹಿತಿ, ಎಸ್.ಎಸ್. ಉಕ್ಕಲಿ ಅವರು ಮಾತನಾಡಿ, ದಿ.ಟಂಕಸಾಲಿ ಅವರ ಸಾಹಿತ್ಯ, ಪತ್ರಿಕಾರಂಗದ ಸೇವೆ, ರಾಷ್ಟ್ರದ ಬಗ್ಗೆ ಇರುವ ಅಪಾರ ಭಕ್ತಿಯನ್ನು ಅವರು ಸ್ಮರಿಸಿದರು. ಅವರ ಸಾಹಿತ್ಯ ಸೇವೆಗಾಗಿ ಅವರನ್ನು ಕೂಡಾ ಸನ್ಮಾನಿಸಲಾಯಿತು.

   ಹಿರಿಯ ಸಾಹಿತಿ ಬಿ.ಪಿ. ಹಿರೇಸೋಮಣ್ಣವರ, ಗುರುರಾಜ ಪೋತ್ನೀಸ್ ಸನ್ಮಾನಿತರನ್ನು ಪರಿಚಯಿಸಿದರು, ಸ್ವಾಗತ ಹಾಗೂ ಪ್ರಾಸ್ತಾವಿವಾಗಿ ಕಾರ್ಯದಶರ್ಿ ಟಿ.ಪಿ. ಬುದ್ನಿ ಮಾತನಾಡಿದರು. ಗುರುರಾಜ ವಾಳ್ವೇಕರ ನಿರುಪಿಸಿದರು. ಅಶೋಕ ಕುಲಕಣರ್ಿ ಅಭಿನಂದನಾಪರ ಮಾತನಾಡಿದರು. ಟಿ.ಕೆ. ಹಂಚಾಟೆ ವಂದಿಸಿದರು. 

   ಸಮಾರಂಭದಲ್ಲಿ ಗಣ್ಯರಾದ ಶಂಕರ ಉತ್ತೂರ, ಎಂ.ವಿ. ದಾಸರಡ್ಡಿ, ಎಚ್.ಎಸ್. ತೆಗ್ಗಳ್ಳಿ, ವಿಜಯ ದೇಶಪಾಂಡೆ, ಮಲ್ಲಿಕಾಜರ್ುನ್ ಹೆಗ್ಗಳಗಿ, ಅನುಸೂಯಾ ಉತ್ತೂರ, ಸಿದ್ದು ದಿವಾಣ, ಮಂಜುಳಾ ಕಲ್ಯಾಣಿ, ಚಂದ್ರಶೇಖರ ದೇಸಾಯಿ ಇತರರಿದ್ದರು.