ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಈ ನಿರ್ಮಲ ತುಂಗಭದ್ರಾ ಅಭಿಯಾನದಲ್ಲಿ ಭಾಗವಹಿಸಲು ಕರೆ

Various organizations are invited to participate in this Nirmala Tungabhadra Abhiyan

 ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಈ ನಿರ್ಮಲ ತುಂಗಭದ್ರಾ ಅಭಿಯಾನದಲ್ಲಿ ಭಾಗವಹಿಸಲು ಕರೆ 

ಹೊಸಪೇಟೆ 25: ನವಂಬರ್ 06 ರಿಂದ ಕ್ಷೇತ್ರ ಶೃಂಗೇರಿಯಿಂದ ಪ್ರಾರಂಭಗೊಂಡ ಪಾದಯಾತ್ರೆಯೂ ಮೊದಲ ಹಂತದಲ್ಲಿ ಹರಿಹರದವರೆಗೆ ಯಶಸ್ವಿಯಾಗಿ ಬಂದು ತಲುಪಿದೆ. ಎರಡನೇ ಹಂತದ ಜಲಜಾಗೃತಿ-ಜನಜಾಗೃತಿ ಪಾದಯಾತ್ರೆಯೂ ಇದೇ 22 ಡಿಸೆಂಬರ್‌-2024 ಹರಿಹರದಿಂದ ಪ್ರಾರಂಭಗೊಂಡು ಕಿಷ್ಕಿಂದಾ ತಲುಪಿ, ಗಂಗಾವತಿಯ ವಿವಿಧ ಸಂಘಟನೆಗಳು, ಸರ್ವ ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ 30 ಡಿಸೆಂಬರ್ 2024 ರಂದು ಬೆಳಿಗ್ಗೆ 9.00 ಗಂಟೆಗೆ ನಗರದ ಸಿ.ಬಿ.ಎಸ್‌. ವೃತ್ತದಿಂದ ಜಲಜಾಗೃತಿ ಜಾಥಾ ಚಾಲನೆಗೊಂಡು ಗಾಂಧಿ ವೃತ್ತ ಮಾರ್ಗವಾಗಿ ಜೂನಿಯರ್ ಕಾಲೇಜು ಆವರಣದಲ್ಲಿ ಪಾದಯಾತ್ರೆಯ ಸಮಾರೋಪ ಸಮಾವೇಶ ನಡೆಯಲಿದೆ. 


ಶ್ರೀ ಕ್ಷೇತ್ರ ಶೃಂಗೇರಿ ಬಳಿಯ ಗಂಗಡಿಕಲ್ಲು ಪ್ರದೇಶದಲ್ಲಿ ಹುಟ್ಟುವ ತುಂಗಾ ನದಿ ಮತ್ತು ಭದ್ರಾ ನದಿಗಳು ಶ್ರೀ ಕ್ಷೇತ್ರ ಕೂಡಲಿಯಲ್ಲಿ ಸಂಗಮವಾಗಿ ತುಂಗಭದ್ರಾ ನದಿಯಾಗಿ ಸುಮಾರು 400  ಕಿಲೋ ಮೀಟರ್ ಹರಿದು, ಮಲೆನಾಡು ಹಾಗೂ ಬಯಲು ಸೀಮೆಯ ಐದು ಜಿಲ್ಲೆಗಳ ಕೋಟ್ಯಂತರ ಜನಸಮುದಾಯಗಳು ಹಾಗೂ ಜೀವಸಂಕುಲದ ಜೀವನದಿಯಾಗಿದೆ. 


ಅಪರೂಪದ ಓಷಧೀಯ ಗುಣಗಳನ್ನು ಹೊಂದಿರುವ ಪಶ್ಚಿಮ ಘಟ್ಟದ ಸಸ್ಯ ಸಂಕುಲಗಳ ನಡುವೆ ಹರಿದು ಬರುವ ನದಿಯು ಅಮೃತಕ್ಕೆ ಸಮಾನ, ಆದರೆ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಕಲುಷಿತಗೊಂಡು ಕುಡಿಯಲು ಯೋಗ್ಯವಲ್ಲದ ದುಸ್ಥಿತಿಗೆ ತಲುಪಿದ್ದು, ನಗರ, ಪಟ್ಟಣಗಳ ತ್ಯಾಜ್ಯ ನೀರು ಯಾವುದೇ ಶುದ್ಧೀಕರಣಗೊಳ್ಳದೇ ನೇರವಾಗಿ ನದಿಗೆ ಸೇರುತ್ತಿದೆ. ಕೃಷಿಯಲ್ಲಿ ಅವೈಜ್ಞಾನಿಕ ಹೆಚ್ಚು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಕೆ, ಸಾರ್ವಜನಿಕರು ಸಮರ​‍್ಕ ತ್ಯಾಜ್ಯ ವಿಲೇವಾರರಿ ಮಾಡದೆ ನದಿಗೆ ಎಸೆಯುವುದು, ಜಲಾನಯನ ಪ್ರದೇಶಗಳಲ್ಲಿ ಅರಣ್ಯ ನಾಶ ಹೀಗೆ ಹತ್ತು ಹಲವು ಕಾರಣಗಳಿಂದ ನಮ್ಮ ತುಂಗಭದ್ರೆಯು ಕಲುಷಿತಗೊಂಡಿದೆ. ನಮ್ಮೆಲ್ಲರ ಜೀವನದಿ ತುಂಗಭದ್ರೆಯ ಸಂರಕ್ಷಣೆಯನ್ನು ನಾವೆಲ್ಲರೂ ಸೇರಿ ಮಾಡಬೇಕಾಗಿರುವುದು ಈ ಹೊತ್ತಿನ ತುರ್ತು ಮತ್ತು ಅನಿವಾರ್ಯವಾಗಿದೆ. 


ಈ ನಿಟ್ಟಿನಲ್ಲಿ ನಡೆಯುತ್ತಿರುವ “ನಿರ್ಮಲ ತುಂಗಭದ್ರಾ ಅಭಿಯಾನ” ಬೃಹತ್ ಜಲ ಜಾಗೃತಿ ಜನಜಾಗೃತಿ ಪಾದಯಾತ್ರೆಯಲ್ಲಿ ನಾವೆಲ್ಲರೂ ತನು ಮನದಿಂದ ಹೆಜ್ಜೆ ಹಾಕೋಣ, ಜೀವನದಿಯನ್ನು ಸಂರಕ್ಷಿಸೋಣ, ಈ ಹಿಂದೆ ಗಂಗಾ ಪಾದಯಾತ್ರೆಯ ಸ್ಫೂರ್ತಿಯಿಂದ ಶಿವಮೊಗ್ಗ ನಗರದಲ್ಲಿ ನಮ್ಮ ನಿರ್ಮಲ ತುಂಗಭದ್ರ ಅಭಿಯಾನ ತಂಡ 2023ರ ಜನವರಿಯಲ್ಲಿ ಗಾಜನೂರಿನಿಂದ ಶ್ರೀ ಕ್ಷೇತ್ರ ಕೂಡಲಿ ತನಕ ಬೃಹತ್ ಪಾದಯಾತ್ರೆ ನಡೆಸಿ ಸರ್ಕಾರದ ಮತ್ತು ಸಾರ್ವಜನಿಕರ ಗಮನ ಸೆಳೆದ ಫಲವಾಗಿ ನಗರದ ತ್ಯಾಜ್ಯ ನೀರು ನದಿಗೆ ನೇರವಾಗಿ ಸೇರುವ ಬದಲು ಅದನ್ನು ಶುದ್ಧೀಕರಣ ಕ್ರಿಯೆಗೆ ಒಳಪಡಿಸುವಂತೆ ಮಾಡಿರುವ ಪ್ರಯತ್ನ ಯಶಸ್ವಿಯಾಗಿರುವುದು ಸಮಾಧಾನ ತಂದಿದೆ. ಅಲ್ಲದೇ ಇತ್ತೀಚಿಗೆ ಕರ್ನಾಟಕ ರಾಜ್ಯ ಸರ್ಕಾರ ತುಂಗಾ ನದಿ ಜೀರ್ಣೋದ್ಧಾರ ಹಾಗೂ ಅದನ್ನು ಮತ್ತೆ ಜೀವಂತ ಗೊಳಿಸುವ ಕುರಿತಂತೆ ಅಧ್ಯಯನಕ್ಕೆ 15 ಜನರ ಸಮಿತಿ ರಚಿಸಿರುವುದು ಅಭಿಯಾನದ ಫಲವಾಗಿದೆ. 


ಈಗ ನಿರ್ಮಲ ತುಂಗಭದ್ರಾ ಅಭಿಯಾನದ ಮೂಲಕ ಶೃಂಗೇರಿಯಿಂದ ಕಿಷ್ಕಿಂದಾ ತನಕ ನದಿಯ ಶುದ್ಧತೆ ಮತ್ತು ಪವಿತ್ರತೆ ಕಾಪಾಡಲು ನಿಶ್ಚಿಯಿಸಿದ್ದು ಇದರ ಅಂಗವಾಗಿ ನವೆಂಬರ್ 6ರ ಬುಧವಾರದಿಂದ ಬೃಹತ್ ಜಲಜಾಗೃತಿ-ಜನಜಾಗೃತಿ ಪಾದಯಾತ್ರೆ ಪ್ರಾರಂಭಗೊಂಡಿದ್ದು, ತುಂಗಭದ್ರಾ ನದಿ ಪಾತ್ರದ ಪರಿಸರಾಸಕ್ತರು, ಸಾಧು-ಸಂತರು, ವಿದ್ಯಾರ್ಥಿಗಳು, ರೈತರು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲರೂ ಈ ನಿರ್ಮಲ ತುಂಗಭದ್ರಾ ಅಭಿಯಾನದಲ್ಲಿ ಭಾಗವಹಿಸಿ. 


ಹೊಸಪೇಟೆಗೆ 27.12.2024ರಂದು ಪಾದಯಾತ್ರೆ ಮೂಲಕ ಬರುತ್ತಾರೆ. 


ಈ ಸಂದರ್ಭದಲ್ಲಿ ಪಿ.ವೆಂಕಟೇಶ್, ಗುಜ್ಜಲ್ ಗಣೇಶ್, ಗಂಟೆ ಸೋಮಶೇಖರ್, ಮಂಜುನಾಥ, ಗುಂಡಿ ರಾಘವೇಂದ್ರ, ಗುಂಡಿ ರಮೇಶ್, ದಾದಾಖಲಂದರ್ (ಗುಜ್ಜಲ್), ಮಲ್ಲಿಕಾರ್ಜುನ ಮೇಟಿ, ಷಣ್ಮುಖ, ಕಾಜಾಸಾಹೇಬ್, ದಿನೇಶ್, ಅಶ್ವಿನ್ ಕೊತ್ತೊಂಬರಿ, ಮದುರ ಚಂದ್ರಶಾಸ್ತ್ರಿ, ಎಲ್‌.ಬಸವರಾಜ್, ವೈ.ಯಮುನೇಶ್, ಪಾಂಡುರಂಗ, ಇನ್ನಿತರರು ಉಪಸ್ಥಿತರಿದ್ದರು.