ಲೋಕದರ್ಶನ ವರದಿ
ಕೂಡ್ಲಿಗಿ 1:ದೇಶದಲ್ಲಿ ರಾಮನ ಬಗ್ಗೆ ಚಚರ್ೆಯಾಗುತ್ತಿದೆ ಆದರೆ ರಾಮಾಯಣ ರಚಿಸಿದ ವಾಲ್ಮೀಕಿ ಬಗ್ಗೆ ಯಾಕೆ ದೇಶದಲ್ಲಿ ಜಪ ಮಾಡುತ್ತಿಲ್ಲ ಎಂದು ಸಂಸದ ಉಗ್ರಪ್ಪ ನುಡಿದರು. ಅವರು ಕೂಡ್ಲಿಗಿ ತಾಲೂಕಿನ ವಿವಿಧ ವಾಲ್ಮೀಕಿ ಸಂಘಟನೆಗಳು ಆಯೋಜಿಸಿದ್ದ ತಾಲೂಕು ಮಟ್ಟದ ವಾಲ್ಮೀಕಿ ಜಯಂತ್ಯುತ್ಸವದ ಎನ್. ಮುದ್ದಪ್ಪ ವೇದಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತದ ಮೂಲ ನಿವಾಸಿಗಳಲ್ಲಿ ವಾಲ್ಮೀಕಿ ಸಮುದಾಯ ಅಗ್ರಗಣ್ಯವಾಗಿದ್ದು ಪುರಾತನ ಕಾಲದಿಂದಲೂ ವಾಲ್ಮೀಕಿ ಸಮುದಾಯಕ್ಕೆ ತನ್ನದೇಯಾದ ಚರಿತ್ರೆ ಇದೆ ಇಂತಹ ಚರಿತ್ರೆಯನ್ನು ಎಲ್ಲರೂ ಓದುವುದರ ಮೂಲಕ ವಾಲ್ಮೀಕಿ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕೆಂದರು. ವಾಲ್ಮೀಕಿ ಸಮುದಾಯಕ್ಕೆ ಐತಿಹಾಸಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಬಹುದೊಡ್ಡ ಇತಿಹಾಸವಿದ್ದು ವಿಜಯನಗರ ಕಾಲ ಹಾಗೂ ಪಾಳೇಗಾರರ ಕಾಲದಲ್ಲಿ ಐತಿಹಾಸಿಕ ದೇವಸ್ಥಾನಗಳನ್ನು ನಿಮರ್ಿಸಿದ ಕೀತರ್ಿ ಅಲ್ಲದೇ ಈ ನಾಡನ್ನು ಆಳಿದ ಕೀತರ್ಿ ಇದೆ ದೇಶದಲ್ಲಿ ಮೊದಲು ವೈಚಾರಿಕ ಪ್ರಜ್ಞೆ ಮೂಡಿಸಿದವರು ವಾಲ್ಮೀಕಿ ಮಹಷರ್ಿಗಳಾಗಿದ್ದು ವಾಲ್ಮೀಕಿ ಜಯಂತ್ಯೋತ್ಸವ ನಿತ್ಯೋತ್ಸವವಾಗಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಸತೀಶ ಜಾರಕಿಹೊಳಿ ಎಸ್.ಟಿ. ಸಮುದಾಯಕ್ಕೆ 7.5 ಮೀಸಲಾತಿ ಬೇಕು, ಎಸ್ಸಿ,ಎಸ್ಟಿ ನೌಕರರ ಹಿಂಬಡ್ತಿ ವಿಚಾರವಾಗಿ ನೌಕರರಿಗೆ ನ್ಯಾಯ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ರಾಜನಹಳ್ಳಿಯ ವಾಲ್ಮೀಕಿ ಪೀಠದಲ್ಲಿ ಪೆಬ್ರುವರಿ ತಿಂಗಳಲ್ಲಿ ವಾಲ್ಮೀಕಿ ಜಾತ್ರೆ ಆಯೋಜಿಸಿದ್ದು ಈ ಜಾತ್ರೆಗೆ ಕೂಡ್ಲಿಗಿಯಿಂದ 35 ಕ್ವಿಂಟಾಲ್ ಅಕ್ಕಿ ನೀಡಿರುವುದು ಉತ್ತಮ ಬೆಳವಣಿಗೆಯಾಗಿದ್ದು ಎಲ್ಲಾ ಸಮಾಜ ಬಾಂಧವರು ಈ ಜಾತ್ರೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.
ಮೊಳಕಾಲ್ಮೂರು ಶಾಸಕ ಶ್ರೀ ರಾಮುಲು ಮಾತನಾಡಿ ನಾವು ಚುನಾವಣೆಯಲ್ಲಿ ರಾಜಕಾರಣ ಮಾಡ್ತೀವಿ ಆದರೆ ಸಮಾಜದ ವಿಚಾರ ಬಂದಾಗ ಪಕ್ಷ ಬೇಧ ಮರೆತು ಸಮಾಜದ ಅಭಿವೃದ್ಧಿಗೆ ಕೈ ಜೋಡಿಸುತ್ತೇವೆ, ಬಿಜೆಪಿ ಅಧಿಕಾರದಲ್ಲಿ ಇಲ್ಲದಿದ್ದರೂ ಕಾಂಗ್ರೆಸ್ ಸಕರ್ಾರದಲ್ಲಿ ನಮ್ಮ ಸಮಾಜಕ್ಕೆ ಇಬ್ಬರು ಸಚಿವರನ್ನು ನೀಡಿರುವುದಕ್ಕೆ ಸಂತಸವಾಗಿದೆ, ರಾಜ್ಯದಲ್ಲಿ ಯಾವುದೇ ಸಕರ್ಾರ ಬರಲೀ ವಾಲ್ಮೀಕಿ ಸಮಾಜದವರು ಕನಿಷ್ಠ 4 ಸಚಿವರನ್ನು ಮಾಡಲೇಬೇಕು ಅಂತಹ ವಾತಾವರಣ ಬರುತ್ತದೆ ಎಂದರು. ರಾಜನಹಳ್ಳಿ ವಾಲ್ಮೀಕಿ ಪೀಠವನ್ನು ಇಡೀ ರಾಜ್ಯದ ಶಕ್ತಿಕೇಂದ್ರವನ್ನಾಗಿ ಮಾಡಲಾಗುತ್ತಿದ್ದು ಇದಕ್ಕೆಲ್ಲಾ ಸಮಾಜಬಾಂಧವರ ಸಹಕಾರ ಮುಖ್ಯ ಎಂದರು. ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅಧ್ಯಕ್ಷತೆವಹಿಸಿಮಾತನಾಡಿ ತಾಲೂಕನ್ನು ನೀರಾವರಿಯನ್ನಾಗಿಸಬೇಕು ಈ ನಿಟ್ಟಿನಲ್ಲಿ ಎಲ್ಲಾ ಜನಪ್ರತಿನಿಧಿಗಳು ರಾಜಕಾರಣಿಗಳು ರಾಜಕೀಯ ಬದಿಗೊತ್ತಿ ಇಚ್ಚಾಶಕ್ತಿ ತೋರಿ ಪ್ರಾಮಾಣಿಕ ಪ್ರಯತ್ನ ಮಾಬೇಕಿದೆ ಎಂದರು,ವಾಲ್ಮೀಕಿ ಸಮುದಾಯವು ಶಿಕ್ಷಣದೊಂದಿಗೆ ಸುಸಂಸೃತರೂ ಆಗಬೇಕಿದೆ ಅದಕ್ಕಾಗಿ ಪೊಷಕರು ಮಕ್ಕಳಿಗಾಗಿ ಯಾವ ಆಸ್ಥಿಯನ್ನು ಮಾಡಬೇಡಿ ಬದಲಿಗೆ ಅವರನ್ನೇ ಸಮಾಜದ ಬಹುದೊಡ್ಡ ಆಸ್ಥಿಗಳನ್ನಾಗಿ ಮಾಡಿ ಅಂದಾಗ ಮಾತ್ರ ಸಮಾಜದ ಉದ್ದಾರ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಸ್ವಾಮಿಗಳು ಸಾನಿಧ್ಯವಹಿಸಿ ಮಾತನಾಡಿ ಎಲ್ಲಾ ಸಮುದಾಯಗಳನ್ನು ಗೌರವಿಸಬೇಕು ನಮ್ಮ ಸಮುದಾಯವನ್ನು ಆರಾಧಿಸಬೇಕು,ಯಾರೇ ಆಗಲಿ ಯಾವುದೇ ಕಾರಣಕ್ಕೂ ಯಾವುದೇ ಸಮುದಾಯಕ್ಕೆ ಅಗೌರವಿಸುವ ತೋರುವ ರೀತಿ ಅವಹೇಲನಕಾರಿ ಹೇಳಿಕೆಗಳನ್ನು ಕೊಡುವುದಾಗಲೀ,ಜಾಲತಾಣಗಳಲ್ಲಿ,ಸಾಮಾಜಿಕಜಾಲ ತಾಣಗಳಲ್ಲಿ ಹರಿಬಿಡುವ ಮೂಲಕ ದುರುಳ ತನವನ್ನು ತೋರಬಾರದು, ಬೇರೆ ಸಮುದಾಯದವರು ಕೃತ್ಯ ಎಸಗಿ ಸಮಾಜದ ಮುಗ್ದ ಯುವಕರನ್ನು ಇಂತಹ ಪ್ರಕರಣಗಳಲ್ಲಿ ಸಿಲುಕಿಸಿ ಬಲಿಪಶು ಮಾಡುವ ಸಾದ್ಯತೆಗಳಿದ್ದು, ಪ್ರತಿಯೊಬ್ಬರೂ ಜಾಗೃತಿಯಿಂದಿರಬೇಕಿದೆ, ಸಾಮಾಜಿಕ ಲಾಲತಾಣಗಳ ದುರ್ಬಳಕೆ ಕಾನೂನು ಭಾಹಿರಮಾತ್ರವಲ್ಲ, ಅಮಾನವೀಯತೆಯೂ ಕೂಡ. ಇದನ್ನು ವಾಲ್ಮೀಕಿ ಸಮುದಾಯ ಖಠುವಾಗಿ ಖಂಡಿಸುತ್ತದೆ, ಅಂತಹ ದುಷ್ಠರ ವಿರುಧ್ದ ನಿಧರ್ಾಕ್ಷಿಣ್ಯ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಬೇಕು, ಈ ನಿಟ್ಟಿನಲ್ಲಿ ಸಮುದಾಯದ ಪ್ರಮುಕರು,ಮುಖಂಡರು ಯುವಕರ ಚಟುಚಟಿಕೆಗಳ ಮೇಲೆ ತೀವ್ರ ನಿಗಾವಹಿಸಬೇಕಿದೆ ಎಂದರು.
ವಾಲ್ಮೀಕಿ ಜಾತ್ರೆ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು, ಮುಖ್ಯ ಅತಿಥಿಗಳಾಗಿ ಕೂಡ್ಲಿಗಿ ತಹಶೀಲ್ದಾರ್ ಎಲ್.ಕೃಷ್ಣಮೂತರ್ಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಪಿ.ರಜನೀಕಾಂತ್, ವಾಲ್ಮೀಕಿ ಸಮಾಜದ ಮುಖಂಡರಾದ ಗುಜ್ಜಲ ರಘು, ವಿ.ಲೋಕೇಶ್ ನಾಯಕ, ನರಸಿಂಹಗಿರಿ ವೆಂಕಟೇಶ್, ದೀನಾ ಮಂಜುನಾಥ, ಡಿ.ವೈ.ಎಸ್.ಪಿ. ಬಸವೇಶ್ವರ, ಸಿಪಿಐ ನಹೀಂ ಅಹಮದ್, ಪಿ.ಎಸ್.ಐ. ಹಾಲೇಶ್, ಓಬಣ್ಣ, ಗುಜ್ಜಲ ರಾಘವೇಂದ್ರ, ಸಣ್ಣ ಕೊತ್ಲಪ್ಪ, ಹೆಚ್.ವೀರನಗೌಡ, ಕೆ.ಎಂ.ತಿಪ್ಪೇಸ್ವಾಮಿ, ಜಿ.ಟಿ.ಮಲ್ಲಿಕಾಜರ್ುನ, ಮಲ್ಲಾಪುರ ಭರಮಪ್ಪ, ಶಿವಣ್ಣ ಸಾಲುಮನಿ, ಎಸ್.ದುರುಗೇಶ್ ನಾಗಮಣಿ, ಬಿ.ಕೆ.ಜಯಮ್ಮ,ಸಿ.ಬಿ.ಜಯರಾಂ ನಾಯಕ, ಕಾವಲ್ಲಿ ಶಿವಪ್ಪನಾಯಕ, ಎಸ್.ಸುರೇಶ್, ಭೀಮೇಶ್, ಕಾಟೇರ್ ಹಾಲೇಶ್, ಮಂಜುನಾಥ ನಾಯಕ, ಡಿಕೆಬಿ ರಾಜು, ಕೆಇಬಿ ಬಸವಾರಾಜ, ಆದಿಮನಿ ಕೊಟ್ರೇಸ್, ಸೂರ್ಯಪಾಪಣ್ಣ, ಫಸಲು ಪಾಪಯ್ಯ, ಹೂಡೇಂ ಪಾಪನಾಯಕ, ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಜಪ್ಪ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರುಸ್ಕ್ರುತರಾದ ವಿರುಪಾಪುರ ಅಂಜಿನಮ್ಮ, ಕೋಗಳಿ ಪಂಪಣ್ಣ, ನಿವೃತ್ತ ಎಸ್.ಟಿ.ಅಧಿಕಾರಿ ಸಿ.ಪೊಲಯ್ಯ, ನಿವೃತ್ತ ಸೈನಿಕ ಡಿ.ಅಜ್ಜಣ್ಣ, ಮುಂತಾವದರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದ ನಂತರ ಶ್ರೀ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಗುಪ್ಪಾಲ ಕೊಟ್ರೇಶ್ ನಿರೂಪಿಸಿದರು. ಕೆ.ಶಿವಪ್ಪನಾಯಕ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಅಪಾರ ವಾಲ್ಮೀಕಿ ಸಮಾಜ ಬಾಂಧವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಾಲ್ಮೀಕಿ ಪೀಠದ ಜಾತ್ರೆಗೆ 35 ಕ್ವಿಂಟಾಲ್ ಅಕ್ಕಿಯನ್ನು ಕೂಡ್ಲಿಗಿ ತಾಲೂಕಿನಿಂದ ನೀಡಲಾಯಿತು. ಶ್ರೀ ರಾಮುಲು ಹಾಗೂ ನೂತನ ಸಚಿವ ಸತೀಶ್ ಜಾರಕಿಹೊಳಿ ಇವರನ್ನು ಸನ್ಮಾನಿಸಲಾಯಿತು