ಲೋಕದರ್ಶನ ವರದಿ
ಶಿಗ್ಗಾವಿ 02: ರಾಷ್ಟ್ರೀಯ ಸೇವಾ ಯೋಜನೆ ಮಾಡುತ್ತಿರುವುದು ಪ್ರೇರಣಾತ್ಮಕ ಕಾರ್ಯಕ್ರಮದ ಜೊತೆಗೆ ಸೇವಾ ಮನೋಭಾವದಿಂದ ಕೂಡಿದ ಕಾರ್ಯಕ್ರಮವೆಂದು ರಂಭಾಪುರಿ ಪೀಠದ ಆಡಳಿತ ಅಧಿಕಾರಿ ಹಾಗೂ ಸಂಸ್ಥೆಯ ಕಾರ್ಯದಶರ್ಿ ಎಸ್ ಬಿ ಹಿರೇಮಠ ಹೇಳಿದರು.
ಪಟ್ಟಣದ ರಂಭಾಪುರಿ ಕಾಲೇಜಿನಲ್ಲಿ ರಂಭಾಪುರಿ ಜಗದ್ಗುರು ವೀರಗಂಗಾಧರ ಸ್ವತಂತ್ರ್ಯ ಪದವಿಪೂರ್ವ ಮಹಾವಿದ್ಯಾಲಯ ಶಿಗ್ಗಾವಿ, ರಾಷ್ಟ್ರೀಯ ಸೇವಾ ಯೋಜನೆಯ ವಾಷರ್ಿಕ ವಿಶೇಷ ಶಿಬಿರದ ಅಭಿನಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಇದಕ್ಕೆ ಆಯ್ಕೆಮಾಡಿಕೊಂಡ ಗ್ರಾಮದ ಸಹಾಯ ಸಹಕಾರ ಮುಖ್ಯವಾಗಿದ್ದು ಆ ನಿಟ್ಟಿನಲ್ಲಿ ಅಂತಹ ಸಹಕಾರವನ್ನು ಯಶಸ್ವಿಯಾಗಿ ವನಹಳ್ಳಿ ಗ್ರಾಮ ನಮ್ಮ ವಿದ್ಯಾಥರ್ಿಗಳಿಗೆ ನೀಡಿದೆ ಅವರಿಗೆ ಕಾಲೇಜಿನ ಪರವಾಗಿ ಅಭಿನಂದನೆಗಳು ಎಂದ ಅವರು ನಮ್ಮ ಮುಂದಿನ ಪೀಳಿಗೆಯ ದೃಷ್ಟಿಯಿಂದ ನಮ್ಮ ಬದುಕಿಗೆ ಮೂಲ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದ್ದು ಮುಂದಿನ ದಿನಗಳಲ್ಲಿ ತಾಲೂಕಿನ ರೈತರ ಸಲುವಾಗಿ ಕೃಷಿ ವಿಶ್ವವಿದ್ಯಾಲಯದ ಸಿಬ್ಬಂದಿಗಳೋಂದಿಗೆ ಚಚರ್ಿಸಿದ್ದು ಆಧುನಿಕ ಸಾವಯವ ಕೃಷಿ ಪದ್ದತಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ಒಂದೊಂದು ಗ್ರಾಮಗಳಿಂದ 50-50 ಜನ ರೈತರೊಂದಿಗೆ ಒಂದು ಮತ್ತು ಯುವಕರ ಸಹಕಾರದೊಂದಿಗೆ ಒಂದು ಕೃಷಿ ಮೇಳ ಮಾಡುವ ಇಂಗಿತ ವ್ಯಕ್ತಪಡಿಸಿದರು.
ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಪ್ರೋ ಎಸ್ ಬಿ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿ ವನಹಳ್ಳಿ ಗ್ರಾಮದ ಜನತೆ ಶಿಭಿರಾಥರ್ಿಗಳನ್ನು ಬಹಳ ಆತ್ಮೀಯವಾಗಿ ನೋಡಿಕೊಂಡರು ಗ್ರಾಮದ ಗ್ರಾಪಂ ಅದ್ಯಕ್ಷರು ಮತ್ತು ಸದಸ್ಯರು ಹಾಗೂ ಗ್ರಾಮದ ಜನತೆಗೆ ಕಾಲೇಜಿನ ವತಿಯಿಂದ ಧನ್ಯವಾದಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ವನಹಳ್ಳಿ ಗ್ರಾಪಂ ಅದ್ಯಕ್ಷ ಸಂಗಮೇಶ ದೊಡ್ಡಮನಿ, ಶಿಗ್ಗಾವಿ ಹಡಪದ ಅಪ್ಪಣ್ಣ ಕ್ರೆಡಿಟ್ ಕೋಆಫ್ ಸೋಸೈಟಿಯ ಅದ್ಯಕ್ಷ ಮುತ್ತುರಾಜ ಕ್ಷೌರದ, ಗ್ರಾಪಂ ಸದಸ್ಯರಾದ ಹನುಮಂತಪ್ಪ ಬಡ್ನಿ, ಧರ್ಮಣ್ಣ ಸಾತಣ್ಣವರ, ಮೌಲಾಸಾಬ್ ನಧಾಫ್, ಮಂಜುನಾಥ ದೊಡ್ಡಮನಿ, ಮೆಹಬೂಬಸಾಬ್ ಮುಲ್ಲಾ, ಬಸವರಾಜ, ಮಹರಾಜಪೇಟೆ ಸೇರಿದಂತೆ ಕಾಲೇಜಿನ ಪ್ರಾದ್ಯಾಪಕವೃಂದ ಹಾಗೂ ವನಹಳ್ಳಿ ಗ್ರಾಮದ ಮುಖಂಡರು ಹಾಗೂ ಕಾಲೇಜಿನ ಸಿಬ್ಬಂದಿ ಹಾಜರಿದ್ದರು, ಪ್ರೋ ಎಸ್ ವಿ ಬಳಿಗಾರ ಸ್ವಾಗತಿಸಿದರು, ಪ್ರೋ ಎಸ್ ಎನ್ ತೀರ್ಥ ವಂದಿಸಿದರು, ಕವನಾ ಬಿಂದಲಗಿ ನಿರೂಪಿಸಿದಳು.