ಲೋಕದರ್ಶನ ವರದಿ
ಬೆಳಗಾವಿ: ದೀನದಯಾಳು ಉಪಾದ್ಯಯ ಅವರ 102 ನೇ ಜಯಂತಿ ನಿಮಿತ್ತವಾಗಿ ಬಿ, ಎಸ್ ವೈ ಯಡಿಯೂರಪ್ಪ ಅಭಿಮಾನಿಗಳ ಬಳಗದ ಕಾರ್ಯಕರ್ತರಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತ್ತು.
ಮಂಗಳವಾರ ತಾಲೂಕಿನ ಬೆಳಗಾವಿ ಸುಳೇಬಾವಿಯಲ್ಲಿ ರಕ್ತದಾನ ಶಿಬಿರವನ್ನು ಲೋಕಸಭಾ ಸದಸ್ಯ ಸುರೇಶ ಅಂಗಡಿ ಅವರು ದೀಪ ಬೆಳಗುವುದರ ಮೂಲಕ ಚಾಲನೆಯನ್ನು ನೀಡಲಾಯಿತು. ದೀನದಯಾಳು ಉಪಾಧ್ಯಾಯ ಅವರ ಜೀವನದ ಕುರಿತು ಮಾತನಾಡಿ ದೇಶದ ಚಿಂತನೆಯನ್ನು ಮೈಗೂಡಿಸಿಕೊಂಡು ಹೊಗಬೇಕು ಎಂದರು. ಕಾರ್ಯಕ್ರಮದಲ್ಲಿ ನೂರಾರು ಜನರು ರಕ್ತ ದಾನ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಮೆರಗೂ ತದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಯಾಗಿ ಆಗಮಿಸಿದ ಬಿಜೆಪಿ ಜಿಲ್ಲಾ ಕಾರ್ಯದಶರ್ಿ ಧನಂಜಯ ಜಾದವ, ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಸವಂತ ಪಾಟೀಲ ಹಾಗೂ ಕಾರ್ಯಕ್ರಮದ ದಿವ್ಯ ಸಾನಿದ್ಯೆವನ್ನು ವಹಿಸಿದ ಪೂಜ ಗಂಗಾಧರ ಮಹಾಸ್ವಾಮಿಗಳು ಸಿದ್ದನಕೊಳ್ಳ ಹಾಗೂ ಮಾಜಿ ಶಾಸಕರಾದ ಮುನೋಹರ ಕಡೋಲಕರ್ ಮಾಜಿ ಮಾಹಾ ಪೌರ ಶಿವಾಜಿ ಸುಂಠಕರ, ಮತ್ತು ಸಾಂಬ್ರಾ ಗ್ರಾಮದ ಮುಖಂಡರು ಹಾಗೂ ಸುಳೇಬಾವಿ ಗ್ರಾಮಸ್ಥರ ರಕ್ತ ದಾನ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು.