ಅಥಣಿ 04: ರೈತರ ಪಂಪಸೆಟ್ಟಗಳ ಸಕ್ರಮಗೊಳಿಸುವ ಯೋಜನೆಯಲ್ಲಿ ದಲ್ಲಾಳಿಗಳು ರೈತರಿಂದ ಅಕ್ರಮ ಹಣ ಪಡೆಯುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಕೃಷ್ಣಾ ಸ್ವಚ್ಛ ಹೋರಾಟ ಸಮಿತಿ ಪದಾಧಿಕಾರಿಗಳೊಂದಿಗೆ ಹೆಸ್ಕಾಂ ಅಥಣಿ ವಿಭಾಗದ ಕಾರ್ಯಪಾಲಕ ಅಭಿಯಂತರ (ಇಇ) ಶೇಖರ ಬಹುರೂಪಿ ಸಭೆ ನಡೆಸಿ ಚಚರ್ಿಸಿದರು. ಹೆಸ್ಕಾಂನ ಯಾವುದೇ ಲೈನ್ ಮನ್ ಅಥವಾ ಸಿಬ್ಬಂದಿಯಾಗಲಿ ರೈತರಿಂದ ಅಕ್ರಮ ಸಕ್ರಮ ಯೋಜನೆಯಡಿ ಅಕ್ರಮ ಹಣ ಪಡೆದುಕೊಂಡಿರುವ ವಿಷಯ ತಮ್ಮ ಗಮನಕ್ಕೆ ಲಿಖಿತ ರೂಪದಲ್ಲಿ ತಂದಿದ್ದಾದಲ್ಲಿ ತಕ್ಷಣ ಅಂತಹ ಸಿಬ್ಬಂದಿ ಮೇಲೆ ಕ್ರಮ ಜರುಗಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಐಗಳಿ ಉಪ ವಿಭಾಗದಲ್ಲಿ ರೈತರಿಂದ ಅಕ್ರಮ ಹಣ ಪಡೆದ ಹೆಸ್ಕಾಂ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಹೀಗಾಗಿ ಇಲ್ಲಿಯೂ ಸಹ ತಮ್ಮಿಂದ ಹಣ ಪಡೆದುಕೊಂಡವರ ವಿರುದ್ಧ ಲಿಖಿತವಾಗಿ ನನ್ನ ಬಳಿ ದೂರು ನೀಡಿ ಎಂದು ಮನವಿ ಮಾಡಿದ ಅವರು ಸಕ್ರಮ ಯೋಜನೆ ಡಿಸೆಂಬರ 15 ರವರೆಗೆ ಸರಕಾರ ಮುಂದೂಡಿದೆ. ಹೀಗಾಗಿ ಇನ್ನುಳಿದ ಅವಧಿಯಲ್ಲಿ ಸಕ್ರಮ ಯೋಜನೆಯಡಿ ಸರಕಾರ ನಿಗದಿಪಡಿಸಿದ ಶುಲ್ಕವನ್ನೇ ಪಾವತಿಸಿ ಮತ್ತು ಈ ಸಂಬಂಧದಲ್ಲಿ ಯಾವುದೇ ದೂರು ಇದ್ದಲ್ಲಿ ಅಥವಾ ಹೆಸ್ಕಾಂ ಸಿಬ್ಬಂದಿ ತಮ್ಮಿಂದ ಹಣ ಕೇಳಿದ್ದಾದಲ್ಲಿ ನೇರವಾಗಿ ಹೆಸ್ಕಾಂನ ಮೇಲಾಧಿಕಾರಿಗಳನ್ನು ಸಂಪಕರ್ಿಸಬೇಕು ಎನ್ನುವ ವಿಷಯ ಹೊಂದಿದ ಜಾಹಿರಾತು ಫಲಕಗಳನ್ನು ಹೆಸ್ಕಾಂ ಕಛೇರಿಯಲ್ಲಿ ಹಾಕಲಾಗುವುದು ಎಂದು ಶೇಖರ ಬಹುರೂಪಿ ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಹೋರಾಟ ಸಮಿತಿ ಅಧ್ಯಕ್ಷ ಅಪ್ಪಾಸಾಹೇಬ ಮಳಮಳಸಿ ಮಾತನಾಡಿ, ಐನಾಪೂರ ಭಾಗದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ರೈತರಿಂದ ಅಕ್ರಮ ಹಣ ಪಡೆದುಕೊಳ್ಳಲಾಗುತ್ತಿದೆ ಅಲ್ಲದೆ ಇಲ್ಲಿ ಹೆಸ್ಕಾಂ ಸಿಬ್ಬಂದಿಗಳ ಸಂಬಂಧಿಕರೇ ದಲ್ಲಾಳಿಗಳಂತೆ ಕೆಲಸ ಮಾಡುತ್ತಿದ್ದು, ಇವರು ರೈತರಿಂದ ಫೈಲಗಳ ಜೊತೆಗೆ 3 ರಿಂದ 5 ಸಾವಿರ ಹಣ ಪಡೆಯುತ್ತಿದ್ದಾರೆ ಈ ಸಂಬಂಧದಲ್ಲಿ ತಮ್ಮ ನಿಯೋಗದಲ್ಲಿ ಬಂದ ಅನೇಕ ರೈತರು ಬರೆದುಕೊಡಲು ಸಿದ್ಧರಿದ್ದಾರೆ. ಮೇಲ್ನೋಟಕ್ಕೆ ದಲ್ಲಾಳಿಗಳ ಮೂಲಕ ಈ ಕೆಲಸ ನಡೆದಿದ್ದರೂ ಕೂಡ ಈ ಅವ್ಯವಹಾರದಲ್ಲಿ ನೇರವಾಗಿ ಹೆಸ್ಕಾಂ ಸಿಬ್ಬಂದಿಗಳೇ ಶಾಮಿಲಾಗಿದ್ದಾರೆ ಎಂದು ದೂರಿದರು. ಈ ಅಕ್ರಮ ವ್ಯವಹಾರ ನಿಲ್ಲದೇ ಹೋದಲ್ಲಿ ಅನಿವಾರ್ಯವಾಗಿ ಐನಾಪುರ ಹಾಗೂ ಅಥಣಿ ವಿಭಾಗೀಯ ಕಛೇರಿಗೆ ಬೀಗ ಜಡಿಯುತ್ತೇವೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಅನೇಕ ರೈತರು ಹೆಸ್ಕಾಂ ಅಧಿಕಾರಿಗಳಿಗೆ ಲಿಖಿತ ದೂರು ಕೂಡ ನೀಡಿದರು. ಈ ಸಭೆಯಲ್ಲಿ ಗ್ರಾ.ಪಂ ಸದಸ್ಯ ಪಿಂಟು ಮುಂಜೆ, ಹೋರಾಟ ಸಮಿತಿಯ ಸಿದರಾಯ ಕಾಳೇಲಿ, ಮದಪ್ಪ ಮದಪ್ಪಗೋಳ, ನಿಶಾಂತ ದಳವಾಯಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಗುತ್ತಿಗೆದಾರರ ಸಂಘದ ಸ್ಪಷ್ಟನೆ-ಸರಕಾರದ ಸಕ್ರಮ ಯೋಜನೆಯಡಿ ಸರಕಾರದಿಂದ ಅಧಿಕೃತ ಲೈಸೆನ್ಸ ಪಡೆದುಕೊಂಡ ಗುತ್ತಿಗೆದಾರರಾದ ನಾವು ಟೆಸ್ಟ ರಿಪೋರ್ಟ, ವೈರಿಂಗ, ಡೈಗ್ರಾಮ, ವೈರಮನ್ ಹಾಗೂ ಮೇಲ್ವಿಚಾರಣೆಯ ಶುಲ್ಕವನ್ನು ಪಡೆದುಕೊಂಡು ರೈತರಿಗೆ ಅಧಿಕೃತ ರಸೀದಿಯನ್ನು ಕೂಡ ನೀಡುತ್ತೇವೆ ಅಧಿಕೃತ ಗುತ್ತಿಗೆದಾರರಾದ ನಾವು ರೈತರಿಂದ ಯಾವುದೇ ಅಕ್ರಮ ಹಣ ಪಡೆದುಕೊಂಡಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ ಆದರೆ ಸರಕಾರದ ಈ ಯೋಜನೆಯಲ್ಲಿ ಕೆಲ ದಲ್ಲಾಳಿಗಳು ಅಥವಾ ಎಜಂಟರು ಗುತ್ತಿಗೆದಾರರ ಹೆಸರು ಹೇಳಿಕೊಂಡು ರೈತರಿಂದ ಅಕ್ರಮ ಹಣ ಪಡೆದುಕೊಳ್ಳುತ್ತಿದ್ದಾರೆ ಇಂತಹ ದಲ್ಲಾಳಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.