ಲೋಕದರ್ಶನ ವರದಿ
ಯಲಬುರ್ಗಾ 13: ತಾಲೂಕಿನ ಕರಮುಡಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಂಡಿಹಾಳ ಇವರ ವತಿಯಿಂದ ಶಾಂತಮ್ಮ ಶರಣಪ್ಪ ಕಂಪಗೌಡ್ರ ಸರಕಾರಿ ಪ್ರೌಢ ಶಾಲೆ ಶಾಲಾ ಮಕ್ಕಳಿಂದ ಗ್ರಾಮದಲ್ಲಿ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮ ಜರುಗಿತು.
ಕ್ಷಯ ರೋಗ ಬ್ಯಾಕ್ಟೇರಿಯಾದಿಂದ ಬರುವಂತಹ ಒಂದು ಸಾಂಕ್ರಾಮಿಕ ರೋಗವಾಗಿದ್ದು ಕ್ಷಯರೋಗಿ ಕೆಮ್ಮುವದರಿಂದ ಸೀನುವದರಿಂದ ಮತ್ತೊಬ್ಬರಿಗೆ ಹರಡಿಸುತ್ತಾನೆ. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಸಾಯಂಕಾಲ ಜ್ವರ ಬರುವದು, ಹಸಿವಾಗದೆಯಿರುವದು, ತೂಕ ಕಡಿಮೆ ಯಾಗುವದು, ಕತ್ತು ಮತ್ತು ಕಂಕುಳಲ್ಲಿ ಗಡ್ಡೆ ಕಾಣಿಸುವದು, ಇವು ಕ್ಷಯ ರೋಗದ ಮುಖ್ಯ ಲಕ್ಷಣಗಳಾಗಿವೆ ಇಂತಹ ಲಕ್ಷಣ ಇರುವವರನ್ನು ಗುರುತಿಸಿ ಚಿಕಿತ್ಸೆಗೆ ಒಳಪಡಿಸುವದು ಇಲಾಖೆಯ ಕರ್ತವ್ಯವಾಗಿದೆ ಆದ್ದರಿಂದ ದಿ. 15ರಿಂದ 27ರ ವರೆಗೆ ಕ್ಷಯರೋಗ ಪತ್ತೆ ಸಮೀಕ್ಷಾ ಕಾರ್ಯದಲ್ಲಿ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ ಎಂದು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಜಾಥಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಜಾಥಾ ಕಾರ್ಯಕ್ರಮವನ್ನು ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ವಿಜಯಕುಮಾರ ರಂಗ್ರೇಜಿ ಚಾಲನೆ ನೀಡಿದರು. ಸಹ ಶಿಕ್ಷಕರುಗಳಾದ ಶರಣಪ್ಪ ಮೂಗನೂರ, ನಾಗಪ್ಪ ತಳವಾರ, ಬಸವರಾಜ ಕೊಂಡಗುರಿ,ಮೊಮ್ಮದ್ ಇಕ್ಬಾಲ್ ಕೋಮಿನ, ರಾಜು ಸೋಲಾಪುರ, ಜಿ ಸಜ್ಜನ್, ಜಯಪ್ರಕಾಶ ತಳವಾರ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಶೋಭಾಬಾಯಿ ನಾಯಕ, ಎಮ್.ಎಲ್.ಹೆಚ್.ಪಿ. ರಾಕೇಶ ಬಡಿಗೇರ ಆಶಾ ಕಾರ್ಯಕತರ್ೆಯರಾದ ರಾಚಮ್ಮ ಕೆ, ಶರಣಮ್ಮ ಬಿ, ಅಕ್ಕಮಹಾದೇವಿ ಬಿ, ಕಳಕಮ್ಮ ಇತರರು ಇದ್ದರು.