ಪತ್ರಕರ್ತ ಹನುಮಾನಸಿಂಗ್ ಜಮಾದಾರ ಅವರಿಗೆ ಸನ್ಮಾನ
ಗದಗ 3: ಹಿರಿಯ ಪತ್ರಕರ್ತ ಹನುಮಾನ ಸಿಂಗ್ ಜಮಾದಾರ ಅವರಿಗೆ 2023 ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿದ್ದಕ್ಕಾಗಿ ಸನ್ಮಾನಿಸಲಾಯಿತು.
1990 ರಿಂದ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ ಅವರು ಹಲವಾರು ಪತ್ರಿಕಾ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು ಪತ್ರಿಕಾ ರಂಗದಲ್ಲಿಯೇ 34 ವರ್ಷಗಳ ಅನುಭವ ಹೊಂದಿರುವ ಇವರು ಪ್ರಸ್ತುತ ಗದಗ ಜಿಲ್ಲೆಯಿಂದ ಪ್ರಕಟವಾಗುತ್ತಿರುವ ನವೋದಯ ಕನ್ನಡ ಪ್ರಾದೇಶಿಕ ಪತ್ರಿಕೆಯ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಈ ಹಿಂದೆ ಗದಗ ಜಿಲ್ಲಾಡಳಿತದಿಂದ ಪತ್ರಿಕಾ ರಂಗದ ಸೇವೆ ಗುರುತಿಸಿ ಸನ್ಮಾನಿಸಲಾಗಿತ್ತು.
ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಗದಗ ಕಚೇರಿಯಲ್ಲಿ ಶುಕ್ರವಾರ ಪ್ರಾಧಿಕಾರದ ಆಯುಕ್ತರಾದ ಡಾ. ಶರಣು ಗೋಗೇರಿ ಸೇರಿದಂತೆ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ವರ ವಿಭೂತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ, ವಾರ್ತಾಧಿಕಾರಿ ವಸಂತ ಮಡ್ಲೂರ, ವಯಸ್ಕರ ಶಿಕ್ಷಣಾಧಿಕಾರಿ ಶಿವಕುಮಾರ ಕುರಿಯವರ ಸೇರಿದಂತೆ ಶಿವಶಂಕರ ಯಳವತ್ತಿ, ಸಂತೋಷ ಕುರಿ , ಪ್ರತೀಕ ಮೇಳನವರ, ಫಯಾಜ ನದಾಫ್ ಅವರುಗಳು ಸನ್ಮಾನಿಸಿ ಶುಭ ಕೋರಿದರು.