ಕುರಿಗಾರರಿಗೆ ತರಬೇತಿ ಕಾಯರ್ಾಗಾರ: ಔಷಧಿ ವಿತರಣೆ

ಗೋಕಾಕ 26: ಕುರಿಗಾರರು ಸಕರ್ಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆಥರ್ಿಕವಾಗಿ ಸಬಲರಾಗಬೇಕು ಅಲ್ಲದೇ ಶೈಕ್ಷಣಿಕವಾಗಿ ಎಲ್ಲರೂ ಮುಂದೆ ಬರಬೇಕು ಎಂದು ಕನರ್ಾಟಕ ಕುರಿ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿದರ್ೇಶಕ ಡಾ. ಬಿ.ಎಸ್.ಜಂಬಗಿ ಹೇಳಿದರು.

ಅವರು ಮಂಗಳವಾರದಂದು ಇಲ್ಲಿಯ ಪಶುಪಾಲನೆ ಇಲಾಖೆ ಕಛೇರಿಯ ಆವರಣದಲ್ಲಿ ಕುರಿಗಾರರಿಗೆ ತರಬೇತಿ ಕಾಯರ್ಾಗಾರದಲ್ಲಿ ಕುರಿಗಾರರಿಗೆ ಔಷಧಿ ವಿತರಿಸಿ ಮಾತನಾಡಿದರು.

ಕುರಿಗಾರರು ಮಳೆ,ಬಿಸಿಲು,ಚಳಿ ಎನ್ನದೇ ಎಲ್ಲ ಕಾಲದಲ್ಲಿಯೂ ತಮ್ಮ ಕುರಿಗಳನ್ನು ಮೇಯಿಸುವ ಮೂಲಕ ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಬಂದ ಆದಾಯದಲ್ಲಿಯೇ ಜೀವನ ಸಾಗಿಸುವ ಮುಖಾಂತರ ಮಕ್ಕಳನ್ನು ಶೈಕ್ಷಣಿಕವಾಗಿ ಬೆಳೆಸಿ ಅವರನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. ಕುರಿ ಸಾಕಾಣಿಕೆಯು ಒಂದು ಕಸಬು ಆಗಿದ್ದು ಕುರಿಗಳ ಆರೋಗ್ಯ ಬಗ್ಗೆ ಕಾಳಜಿ ವಹಿಸಿಬೇಕು. ಸರಿಯಾದ ಸಮಯಕ್ಕೆ ಔಷಧ ಉಪಚಾರ ಮಾಡುವುದು ಪ್ರತಿಯೊಬ್ಬ ಕುರಿಗಾರರ ಕರ್ತವ್ಯವಾಗಿದೆ ಎಂದರು.

ಕೇಂದ್ರದ ಉಣ್ಣಿ ಅಭಿವೃದ್ಧಿ ಮಂಡಳಿಯ ಉಪ ವ್ಯವಸ್ಥಾಪಕ ರಾಜಸ್ಥಾನದ ದೇವಿಸಿಂಗ್ ಅಧ್ಯಕ್ಷತೆ ವಹಿಸಿದ್ದರು.

ಇಲ್ಲಿಯ  ಪಶುಪಾಲನೆ ಇಲಾಖೆಯ ಸಹಾಯಕ ನಿದರ್ೇಶಕ ಡಾ| ಮೋಹನ ಕಮತ ಮಾತನಾಡಿ ಈ ಭಾಗದ ಶಾಸಕರು ಹಾಗೂ ಜನಪ್ರತಿನಿಧಿಗಳ ಸಹಕಾರದ ಮೂಲಕ ಹಲವಾರು ಯೋಜನೆಗಳನ್ನು ಕುರಿಗಾರರಿಗೆ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರಲ್ಲದೇ ಹಲವಾರು ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ ಎಂದರು.

 ಕುರಿ ಅಭಿವೃದ್ಧಿ ಮಂಡಳಿಯ ಸಹಾಯಕ ನಿದರ್ೇಶಕ ಡಾ. ಚಂದ್ರಶೇಖರ ಕುರಿ, ರವಿ ಮಳಲಿ, ಬಾಳಗೌಡ ಪಾಟೀಲ, ನಿರ್ಮಲಾ ಜೋಗಳೆ, ವಿದ್ಯಾ ಬಡವಣ್ಣಿ ಸೇರಿದಂತೆ ಪಶು ಪಾಲನೆ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.

ಸುಮಾರು 50 ಜನ ಕುರಿಗಾರರು ಪಾಲ್ಗೊಂಡು ಕಾಯರ್ಾಗಾರದ ಸದುಪಯೋಗ ಪಡೆದುಕೊಂಡರು.

ಫೋಟೋ: 26 ಜಿಕೆಕೆ-4

ಗೋಕಾಕ: ಇಲ್ಲಿಯ ಪಶುಪಾಲನೆ ಇಲಾಖೆ ಕಛೇರಿಯ ಆವರಣದಲ್ಲಿ ಕುರಿಗಾರರಿಗೆ ತರಬೇತಿ ಕಾಯರ್ಾಗಾರದಲ್ಲಿ ಕುರಿಗಾರರಿಗೆ ಔಷಧಿ ವಿತರಿಸಲಾಯಿತು.