ರಾಜಸ್ಥಾನಿಗಳ ವಿರುದ್ಧ ವರ್ತಕರ ಅಸೋಶಿಯೇಶನ್ ಪ್ರತಿಭಟನೆ

ಮೂಡಲಗಿ 05:  ಹೊರ ರಾಜ್ಯದ ರಾಜಸ್ಥಾನಿ ವ್ಯಾಪಾರಸ್ಥರಿಂದ ಸ್ಥಳೀಯ ಸಣ್ಣಪುಟ್ಟ ವ್ಯಾಪರಸ್ಥರಿಗೆ ತೊಂದರೆಯಾಗುತ್ತಿದೆ. ಅದ್ದರಿಂದ ಹೊಸದಾಗಿ ಬರುವ ರಾಜಸ್ಥಾನಿಗರಿಗೆ ಪುರಸಭೆ ಅಧಿಕಾರಿಗಳು ಪರವಾನಿಗೆ ನೀಡಬಾರದು ಎಂದು ಆಗ್ರಹಿಸಿ ಶನಿವಾರ ಸ್ಥಳೀಯ ವರ್ತಕರ ಅಸೋಶಿಯೇಶನ್ ಸ್ವಯಂಪ್ರೇರಿತವಾಗಿ ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳನ್ನು  ಬಂದ್ ಮಾಡಿ ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮೂಡಲಗಿ ಉಪ ತಹಶೀಲ್ದಾರ ಎಲ್.ಎಚ್. ಭೋವಿ ಮತ್ತು ಪುರಸಭೆಯ ಮುಖ್ಯಾಧಿಕಾರಿಗೆ  ಮನವಿ ಸಲ್ಲಿಸಿದರು.  

 ವರ್ತಕ ರಾಚಯ್ಯ ನಿವರ್ಾಣಿ ಮಾತನಾಡಿ, ರಾಜಸ್ಥಾನಿ ವ್ಯಾಪಾರಸ್ಥರಿಂದಾಗಿ ಪಟ್ಟಣದ ಸಣ್ಣ ಪುಟ್ಟ ವ್ಯಾಪಾರಸ್ಥರು ತೀವ್ರ ನಷ್ಟ ಅನುಭವಿಸುವಂತಾಗಿದೆ. ಇವರು ನಡೆಸುವ ಕಾಂಪಿಟೇಶನ್ ವ್ಯಾಪಾರದಿಂದಾಗಿ ಕಟ್ಟಡದ ಬಾಡಿಗೆಯೂ ದುಬಾರಿಯಾಗುತ್ತಿದ್ದು ಸ್ಥಳೀಯರು ಕಟ್ಟಡ ಬಾಡಿಗೆ ಪಡೆಯಲು ಹಾಗೂ ನೀಡಲು ಪರದಾಡುವ ಸ್ಥಿತಿ ನಿಮರ್ಾಣವಾಗಿದೆ. ಅಲ್ಲದೇ ದರದಲ್ಲಿಯೂ ವ್ಯತ್ಯಾಸ ಮಾಡುತ್ತಿರುವುದರಿಂದ ನಷ್ಟದ ಹಾದಿಗೆ ಸಿಲುಕುತ್ತಿದ್ದಾರೆ. ಆ ಕಾರಣಕ್ಕಾಗಿ ಮೊದಲಿನಿಂದ ವ್ಯಾಪಾರ ನಡೆಸುತ್ತ ಬಂದಿರುವ ರಾಜಸ್ಥಾನಿ ವ್ಯಾಪಾರಿಗರು ಕೇವಲ ಒಂದು ಅಂಗಡಿಯನ್ನಷ್ಟೇ ಮಾಡಬೇಕು ಹಾಗೂ ಹೊಸದಾಗಿ ಬರುವ ರಾಜಸ್ಥಾನಿಗರಿಗೆ ಪುರಸಭೆಯ ಅಧಿಕಾರಿಗಳು ಪರವಾನಿಗೆ ನೀಡಬಾರದು ಎಂದು ಮನವಿಯಲ್ಲಿ ತಿಳಿಸಿದರು.

     ವೆಂಕಟೇಶ ಸೋನಾವಲ್ಕರ ಮಾತನಾಡಿ, ಕಟ್ಟಡ ಮಾಲಿಕರು ಹೆಚ್ಚಿನ ಬಾಡಿಗೆಯ ಆಶೆಯಿಂದಾಗಿ ಸ್ಥಳೀಯರಿಗೆ ಮಾನ್ಯತೆ ನೀಡದೇ ಹೊರ ರಾಜ್ಯದಿಂದ ಬಂದು ದುಪ್ಪಟ್ಟು ಬಾಡಿಗೆ ನೀಡುವ ರಾಜಸ್ಥಾನಿಗರಿಗೆ ನೀಡುವುದರಿಂದ ಸ್ಥಳೀಯರಿಗೆ ಇಂತಹ ಪರಿಸ್ಥಿತಿ ನಿಮರ್ಾಣವಾಗಿದೆ. ಮುಂದಿನ ದಿನಗಳಲ್ಲಿ ಹೊರಗಿನಿಂದ ಬಂದ ರಾಜಸ್ಥಾನಿ ವ್ಯಾಪಾರಸ್ಥರು ಯಾವುದೇ ಅಂಗಡಿ ಪ್ರಾರಂಭಿಸಲೂ ಬಂದಲ್ಲಿ ಅಂತವರಿಗೆ ಕಟ್ಟಡ ಬಾಡಿಗೆ ನೀಡಬಾರದು. ಮತ್ತು ಪುರಸಭೆಯ ಅಧಿಕಾರಿಗಳು ಪರವಾನಿಗೆ ನೀಡಬಾರದು. ನೀಡಿದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು. 

    ರಾಜಸ್ಥಾನಿ ಸೇವಾ ಸಂಘದ ಅಧ್ಯಕ್ಷ ನಾರಾಯಣ ಮಾಲಿ ಮಾತನಾಡಿ, ಹಲವೂ ವರ್ಷಗಳಿಂದ ಸ್ಥಳೀಯರು ಮತ್ತು ನಾವೂ ಉತ್ತಮ ಬಾಂಧವ್ಯವನ್ನು ಹೊಂದಿದ್ದೇವೆ. ನಮಗೆ ಯಾರಿಂದಲೂ ತೊಂದರೆಯಾಗಿಲ್ಲ. ಈಗ ಹೊಸದಾಗಿ ರಾಜಸ್ಥಾನಿಗರು ಬರುತ್ತಿರುವುದರಿಂದ ಸಣ್ಣಪುಟ್ಟ ವ್ಯಾಪರಸ್ಥರಿಗೆ ತೊಂದರೆಯಾಗುತ್ತಿದೆ. ಇದನ್ನು ನಾವು ಖಂಡಿಸುತ್ತೆವೆ. ಅಲ್ಲದೇ ಸ್ಥಳೀಯರ ನಿಧರ್ಾರಕ್ಕೆ ಬದ್ಧರಾಗಿದ್ದೆವೆ ಎಂದರು.

ಪ್ರತಿಭಟನೆಯಲ್ಲಿ ಸುಭಾಸ ಬೆಳಕೊಡ, ಸತ್ಯಪ್ಪಾ ವಾಲಿ, ಎಸ್.ಜಿ. ಹಿರೇಮಠ, ಎಸ್.ಡಿ.ಮಂಟೂರ, ಯಲ್ಲಣ್ಣಾ ಪತ್ತೆಪೂರ, ಮೋಹನ್ ಜೈನ್, ಶಂಕರ ತುಪ್ಪದ, ಕೆ.ಬಿ.ನಾವಳ್ಳಿ, ಹನಮಂತ ಪ್ಯಾಟಿಗೌಡರ, ಪ್ರಕಾಶ ಕಾಳಪ್ಪಗೋಳ, ಶಿವಬಸು ಸುಣಧೋಳಿ, ವಿ.ಆರ್ ದಂತಿ, ಎಸ್.ಬಿ. ನಿವರ್ಾಣಿ, ಅಜೀಜ ಡಾಂಗೆ, ದುಂಡಪ್ಪ ಫಿರೋಜಿ ಸೇರಿದಂತೆ ಪಟ್ಟಣದ ನೂರಾರು ವರ್ತಕರು ಭಾಗವಹಿಸಿದ್ದರು.

ಅಧಿಕಾರಿಗಳಿಗಾಗಿ ಹುಡುಕಾಟ: ಸ್ಥಳೀಯ ವರ್ತಕರ ಅಸೋಶಿಯೇಶನ್ ಸ್ವಯಂಪ್ರೇರಿತವಾಗಿ ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳನ್ನು  ಬಂದ್ ಮಾಡಿ ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮನವಿ ನೀಡಲು ಅಧಿಕಾರಿಗಳಿಗಾಗಿ ಹುಡುಕಾಡುವ ಪರಿಸ್ಥಿತಿ ನಿಮರ್ಾಣವಾಯಿತು. ಕಚೇರಿಗೆ ತೆರಳಿ ನೋಡಿದರೆ ಯಾವೊಬ್ಬ ಅಧಿಕಾರಿಯೂ ಕಚೇರಿಯಲ್ಲಿ ಇಲ್ಲದಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯ ಉಂಟುಮಾಡಿತು. ಮೂಡಲಗಿ ದಂಡಾಧಿಕಾರಿಗಳಿಗೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪಟ್ಟಣದಲ್ಲಿ ಪ್ರತಿಭಟನೆ ನಡೆಯುತ್ತಿರುವ ಮಾಹಿತಿಯೇ ಇಲ್ಲವಾಗಿರುವುದು ಹಾಸ್ಯಸ್ಪದವಾಗಿತ್ತು. ಅಲ್ಲದೇ ಪುರಸಭೆಯ ಮುಖ್ಯಾಧಿಕಾರಿ ಮತ್ತು ಪೋಲಿಸ್ ಇಲಾಖೆಯ ಸಿಬ್ಬಂದಿಯೂ ಬಾರದಿರುವುದು ಪ್ರತಿಭಟನಾಕಾರರಲ್ಲಿ ಅಕ್ರೋಶ ಮೂಡಿಸಿತು. ಕೆಲ ಹೊತ್ತಿನ ಬಳಿಕ ತಾಲೂಕು ದಂಡಾಧಿಕಾರಿಗಳ ಪರವಾಗಿ ಉಪ ತಹಶೀಲ್ದಾರ ಹಾಗೂ ಮುಖ್ಯಧಿಕಾರಿಯ ಪರವಾಗಿ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಮನವಿ ಸ್ವೀಕರಿಸಿದರು.