3 ಬಡ್ಡಿ ದರದ ಸಾಲದಲ್ಲಿ ಟ್ರ್ಯಾಕ್ಟರ್ ಸಾಲ ವಿತರಿಸಲಾಯಿತು
ಮೂಡಲಗಿ 23:ತಾಲೂಕಿನ ಕಲ್ಲೋಳಿ ಪಟ್ಟಣದ ವಿವಿಧೋದೇಶಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಬೆಳಗಾವಿ ಜಿಲ್ಲಾ ಮಧ್ಯರ್ತಿ ಸಹಕಾರ ಸಂಘದ ಮುಖಾಂತರ ಸಂಘದ ಸದಸ್ಯರುಗಳಿಗೆೆ ಶೇ. 3 ಬಡ್ಡಿ ದರದಲ್ಲಿ ಟ್ರ್ಯಾಕ್ಟರ್ ಸಾಲ ವಿತರಿಸಲಾಯಿತು. ಸಂಘದ ಅಧ್ಯಕ್ಷ ನೀಲಕಂಠ ಬಸಪ್ಪ ಕಪ್ಪಲಗುದ್ದಿ ಅವರು ಕಲ್ಲೋಳಿ ಪಟ್ಟಣದ ಪ್ರವೀಣ ಮಾಯಪ್ಪ ಯಾದಗೂಡ ಅವರಿಗೆ ಟ್ರ್ಯಾಕ್ಟರ್ ಕೀ ವಿತರಿಸಿ ಮಾತನಾಡಿ, ಕಲ್ಲೋಳಿ ಪಟ್ಟಣದ ಪಿಕೆಪಿಎಸ್ ದಿಂದ ಬಿಡಿಸಿಸಿ ಬ್ಯಾಂಕ ಸಹಯೋಗದೊಂದಗೆ ಸಂಘದ ಶೇರುದಾರ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದು ರೈತರು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಈ ಸಮಯದಲ್ಲಿ ಸಂಘದ ಉಪಾಧ್ಯಕ್ಷ ಭೀಮಪ್ಪ ವ್ಯಾಪಾರಿ, ನಿರ್ದೇಶಕರಾದ ಬಸವರಾಜ ಬೆಳಕೂಡ, ಮಲ್ಲಪ್ಪ ಪರ್ಪ ಕಡಾಡಿ, ಆನಂದ ಹೆಬ್ಬಾಳ, ಶಂಕರ ನಿಂಗಪ್ಪ ಗೋರೋಶಿ, ಬಸಪ್ಪ ಬಿಽಽ ಪಾಟೀಲ, ಧರೀಶ ಖಾನಗೌಡ್ರ, ಮಹಾದೇವಿ ಖಾನಾಪೂರ, ಕೆಂಪವ್ವ್ಪ ಗೋರೋಶಿ, ಮಲ್ಲಪ್ಪ ಪೂಜೇರಿ, ಧರ್ಮಣ್ಣ ನಂದಿ, ಬಿಡಿಸಿಸಿ ಬ್ಯಾಂಕ ಪ್ರತಿನಿಧಿ ವಸಂತ ತಹಶೀಲದಾರ, ಬಿಡಿಸಿಸಿ ಬ್ಯಾಂಕ ನೀರೀಕ್ಷ ಎ.ಕೆ.ಮಳವಾಡ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.