ಬೈಲಹೊಂಗಲ :ಸರಕು ಸಾಗಾಣಿಕೆ ವಾಹನಗಳಲ್ಲಿ ಜನ ಸಾಗಿಸಿದರೆ ಕಠಿಣ ಕ್ರಮ: ಭೂಸೇರ

ಬೈಲಹೊಂಗಲ 18: ಸರಕು ಸಾಗಾಣಿಕೆ ವಾಹನಗಳಲ್ಲಿ ಕಾಮರ್ಿಕರನ್ನು ಮತ್ತು ಶಾಲಾ ಮಕ್ಕಳನ್ನು ಸಾಗಿಸುವುದು ಕಂಡುಬಂದಲ್ಲಿ ವಾಹನ ಮಾಲಿಕರ ಮತ್ತು ಚಾಲಕರ ವಿರುದ್ಧಸಾರಿಗೆ, ಪೊಲೀಸ್, ಕಾಮರ್ಿಕ ಮತ್ತು ನ್ಯಾಯಾಂಗ ಇಲಾಖೆಯಿಂದ ಕಠಿಣ ಕ್ರಮ ಜರುಗಿಸಲಾಗವುದು ಎಂದು ನ್ಯಾಯಾಧೀಶೆ ಸೌಭಾಗ್ಯ ಭೂಸೇರ ಹೇಳಿದರು.

   ಅವರು ಪಟ್ಟಣದಲ್ಲಿ ಶುಕ್ರವಾರ ಸರಕು ವಾಹನಗಳಲ್ಲಿ ಕಾಮರ್ಿಕರ ಮತ್ತು ಶಾಲಾ ಮಕ್ಕಳ ಸಾಗಾಣಿಕೆ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಉಚ್ಚನ್ಯಾಯಾಲಯದಲ್ಲಿ ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವುದರ ವಿರುದ್ದ ಸಾರ್ವಜನಿಕ ಹಿತಾಸಕ್ತಿ ಅಜರ್ಿ ಸಲ್ಲಿಸಿದ್ದರ ಪರಿಣಾಮವಾಗಿ ನ್ಯಾಯಾಂಗದಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈ ವಿಷಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಗೋಸ್ಕರ ಜಾಥಾ ಮತ್ತು ಸಾರ್ವಜನಿಕ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

   ಸಹಾಯಕ ಸಾರಿಗೆ ಪ್ರಾದೇಶಿಕ ಅಧಿಕಾರಿ ವಾಯ್.ಎಸ್.ಪಡಸಾಲಿ, ಪಿಸೈ ಎಮ್.ಎಸ್.ಹೂಗಾರ, ಕಾಮರ್ಿಕ ಇಲಾಖೆ ಅಧಿಕಾರಿ ವಿರೇಶ ಮೊರಕರ, ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಸರಕು ವಾಹನಗಳೆಂದು ನೊಂದಣಿಯಾಗಿರುವ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವಾಗ ಅಪಘಾತ ಉಂಟಾದಾಗ ಗಾಯಾಳುಗಳಿಗೆ ಮತ್ತು ಜೀವಹಾನಿಯಾದ ವ್ಯಕ್ತಿಗೆ ವಿಮಾ ಪರಿಹಾರ ಹಣ ದೊರೆಯದೆ ಅವರ ಅವಲಂಬಿತರು ಕಷ್ಟದಲ್ಲಿ ಕಾಲ ಕಳೆಯುವಂತಾಗುತ್ತದೆ.ಅಲ್ಲದೇ ನಷ್ಟಕ್ಕೆ ಒಳಗಾದ ವ್ಯಕ್ತಿಗೆ ವಾಹನ ಮಾಲೀಕ ಪರಿಹಾರ ಹಣ ಭರಿಸಬೇಕಾಗುತ್ತದೆ.ಅಲ್ಲದೇ ವಾಹನ ಚಾಲಕನ ಪರವಾಣಿಗೆ ರದ್ದುಗೊಳ್ಳುತ್ತದೆ.ಜನ ಸಾಮಾನ್ಯರು ಪ್ರಾಣಿಗಳಂತೆ ಹಾಗೂ  ವಸ್ತುಗಳಂತೆ ಸಂಚರಿಸುವುದು ಮಾನವ ಕುಲಕ್ಕೆ ಕಳಂಕವಾಗಿದ್ದು ಇದನ್ನು ತಡೆಗಟ್ಟಲು ಕಾನೂನಿನಲ್ಲಿ ಸಾಕಷ್ಟು ಅವಕಾಶಗಳಿದ್ದು ಅವುಗಳನ್ನು ಸಂಬಂಧಿಸಿದ ಇಲಾಖೆಗಳು  ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರುವದಾಗಬೇಕೆಂದರು.

  ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಮ್.ಆರ್.ಮೆಳವಂಕಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎನ್.ಕೆ.ಕುಲಕಣರ್ಿ, ಅಪರ ಸರಕಾರಿ ವಕೀಲರಾದ ರಮೇಶ ಕೋಲಕಾರ, ರಂಜನಾ ಪಾಟೀಲ, ದುಂಡೇಶ ಗರಗದ ವೇದಿಕೆ ಮೇಲೆ  ಇದ್ದರು.

   ನ್ಯಾಯವಾದಿಗಳಾದ ರಮೇಶ ಕುರುಬರ, ಎಸ್.ವಿ.ಸಿದ್ದಮನಿ, ಕಾಮರ್ಿಕ ಮುಖಂಡ ಸಂತೋಷ ಕೊಳವಿ, ರಫೀಕ ಬಡೇಘರ, ಚಾಲಕರು, ಕಾಮರ್ಿಕರು ಇದ್ದರು.