ನಾಳೆ ಶತಮಾನೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ

ಲೋಕದರ್ಶನ ವರದಿ

ಅಥಣಿ 20:  ಜಾಧವಜಿ ಶಿಕ್ಷಣ ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ ಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಪ್ರಥಮ ಸ್ಥಾನ ಪಡೆದ ಹಾಗೂ ವಿಶೇಷ ಸಾಧನೆ ಮಾಡಿದ ಸಂಸ್ಥೆಯ ಹಳೆ ವಿದ್ಯಾಥರ್ಿಗಳಿಗೆ ಮತ್ತು ದಾನಿಗಳಿಗೆ ಗೌರವಾರ್ಪಣೆ ಮತ್ತು ಶತಮಾನೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ದಿ.22 ರಂದು ಜೆ.ಎ.ಹೈಸ್ಕೂಲ ಒಳ ಆವರಣದಲ್ಲಿ ಆಯೋಜಿಸಲಾಗಿದೆ. 

     ದಿ. 22 ಮುಂಜಾನೆ 10.30 ಗಂಟೆಗೆ ನಡೆಯಲಿರುವ ಗೌರವಾರ್ಪಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಧಾರವಾಡದ ಮಾನಸಿಕ ತಜ್ಞ ಡಾ.ಆನಂದ ಪಾಂಡುರಂಗಿ ಆಗಮಿಸುವರು. ಅಧ್ಯಕ್ಷತೆಯನ್ನು ಜಾಧವಜಿ ಶಿಕ್ಷಣ ಸಂಸ್ಥೆಯ ಕಾಯರ್ಾಧ್ಯಕ್ಷ ಡಾ.ರಾಮ ಕುಲಕಣರ್ಿ ವಹಿಸುವರು. ಸಂಸ್ಥೆಯ ಉಪ ಕಾಯರ್ಾಧ್ಯಕ್ಷ ಸಂಜೀವ ಪಾಟೀಲ, ಶತಮಾನೋತ್ಸವ ಸಮೀತಿಯ ಸಂಚಾಲಕ ಡಾ.ಪ್ರಮೋದ ಮೀರಜ, ಶತಮಾನೋತ್ಸವ ಸಮಿತಿ ಕಾರ್ಯದಶರ್ಿ ಸತೀಶ ಕುಲಕಣರ್ಿ ವೇದಿಕೆಯಲ್ಲಿ ಉಪಸ್ಥಿತರಿರುವರು. 

     ಇದೇ ವೇದಿಕೆಯಲ್ಲಿ ಸಂಜೆ ನಡೆಯಲಿರುವ ಜಾಧವಜಿ ಶಿಕ್ಷಣ ಸಂಸ್ಥೆಯ ಶತಮಾನೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಕನರ್ಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂತರ್ಿ ಕೃಷ್ಣ ಎಸ್.ದಿಕ್ಷೀತ, ಹುಬ್ಬಳ್ಳಿಯ ಖ್ಯಾತ ಉದ್ಯಮಿ ಡಾ.ವಿಜಯ ಸಂಕೇಶ್ವರ, ಧಾರವಾಡದ ಮಾನಸಿಕ ತಜ್ಞ ಡಾ.ಆನಂದ ಪಾಂಡುರಂಗಿ ಆಗಮಿಸುವರು. ಅಧ್ಯಕ್ಷತೆಯನ್ನು ಸಂಸ್ಥೆಯ ಕಾಯರ್ಾಧ್ಯಕ್ಷ ಡಾ.ರಾಮ ಕುಲಕಣರ್ಿ ವಹಿಸಲಿದ್ದಾರೆ.  

     ಜಾಧವಜಿ ಶಿಕ್ಷಣ ಸಂಸ್ಥೆ 1918 ರಲ್ಲಿ ಕೆಲ ದಾನಿಗಳ ಸಹಕಾರದಿಂದ ಪ್ರಾರಂಭಗೊಂಡಿದ್ದ ಜಾಧವಜಿ ಶಿಕ್ಷಣ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. ಕೆ.ಜಿ ಯಿಂದ ಪಿ.ಜಿ ವರೆಗೂ ಶಿಕ್ಷಣ ಸೌಲಭ್ಯ ನೀಡುತ್ತಿರುವ ಈ ಸಂಸ್ಥೆಯಲ್ಲಿ 10 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾಥರ್ಿಗಳು ಅಧ್ಯಯನ ನಡೆಸುತ್ತಿದ್ದಾರೆ. ಉತ್ತರ ಕನರ್ಾಟಕದ ಕೆಲವೇ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಈ ಸಂಸ್ಥೆಯಲ್ಲಿ ಇನ್ಫೋಸಿಸ್ ಸಂಸ್ಥೆಯ ಶ್ರೀಮತಿ ಸುಧಾಮುತರ್ಿಯವರ ತಂದೆ ಡಾ.ಆರ್.ಎಚ್.ಕುಲಕಣರ್ಿ, ಉಪ ರಾಷ್ಟ್ರಪತಿಯಾಗಿದ್ದ ಬಿ.ಡಿ.ಜತ್ತಿ ಕೂಡ ಈ ಸಂಸ್ಥೆಯ ವಿದ್ಯಾಥರ್ಿಗಳಾಗಿದ್ದರು ಎನ್ನುವುದು ಈ ಸಂಸ್ಥೆಯ ಹೆಮ್ಮೆಯ ವಿಷಯವಾಗಿದೆ.  

      ಸಂಸ್ಥೆಯ ಅಧ್ಯಕ್ಷರಾಗಿ ರಮೇಶ ಭಾಟೆ, ಉಪಾಧ್ಯಕ್ಷರಾಗಿ ಬಿ.ಎಸ್.ಕಟ್ಟಿ,  ಕಾಯರ್ಾಧ್ಯಕ್ಷರಾಗಿ ಡಾ.ರಾಮ ಕುಲಕಣರ್ಿ, ಉಪ ಕಾಯರ್ಾಧ್ಯಕ್ಷರಾಗಿ ಸಂಜೀವ ಪಾಟೀಲ, ಕಾರ್ಯದಶರ್ಿಯಾಗಿ ಎಸ್.ವಿ.ಜೋಶಿ, ಸಹ ಕಾರ್ಯದಶರ್ಿಯಾಗಿ ಆರ್.ಎ.ಕುಲಕಣರ್ಿ,  ಅರವಿಂದರಾವ ದೇಶಪಾಂಡೆ, ಆರ್.ಬಿ.ದೇಶಪಾಂಡೆ, ಅನೀಲ ದೇಶಪಾಂಡೆ (ಸರಾಫ), ಅನೀಲ ದೇಶಪಾಂಡೆ (ಹಿಡಕಲ್), ಡಾ.ಪಿ.ಎಸ್.ಕುಲಕಣರ್ಿ, ಎಮ್.ವ್ಹಿ.ಜೋಶಿ, ಎ.ಕೆ.ಲೋಕಾಪುರ, ಸಂದೀಪ ಸಂಗೋರಾಮ, ಅವಿನಾಶ ಸೋಲಾಪೂರಕರ, ಎಸ್.ವಿ.ಕುಲಕಣರ್ಿ,  ಎಲ್.ವ್ಹಿ. ಕುಲಕಣರ್ಿ, ಡಾ.ಸುಹಾಸ ಕುಲಕಣರ್ಿ, ಸುಹಾಸ ಕುಲಕಣರ್ಿ, ಎಸ್.ಎ.ದಾತಾರ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.