ನಾಳೆ ತಾಲೂಕಾ ವೀರಶೈವ ಜಂಗಮ ಸಮಾವೇಶ

ಲೋಕದರ್ಶನ ವರದಿ

ಮುಧೋಳ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ದಿ. 9ರಂದು ರವಿವಾರ ಬೆಳಿಗ್ಗೆ 10.00 ಘಂಟೆಗೆ ನಗರದ ವೀರಶೈವ ಕಲ್ಯಾಣ ಮಂಟಪದ ಸಭಾಭವನದಲ್ಲಿ ಮುಧೋಳ ತಾಲೂಕಾ ವೀರಶೈವ ಬೇಡ-ಜಂಗಮ ಸಮಾವೇಶ ನಡೆಸಲಾಗುವುದು ಎಂದು ಜಂಗಮ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾ ಘಟಕದ ಅಧ್ಯಕ್ಷ ಅಲ್ಲಯ್ಯಾ ದೇವರಮನಿ ತಿಳಿಸಿದರು.

ಶುಕ್ರವಾರ ನಗರದ ಕಾನಿಪ ಕಾಯರ್ಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬೇಡ-ಜಂಗಮರನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಕುರಿತು ಹಾಗೂ ಸಕರ್ಾರದಿಂದ ಅಗತ್ಯ ಸೌಲಭ್ಯ ಪಡೆಯುವ ಕುರಿತು ಹಾಗೂ ಮುಂದಿನ ಹೋರಾಟದ ರೂಪರೇಷೆ ಗಳ ಕುರಿತು ಸಮಾವೇಶದಲ್ಲಿ ಚಚರ್ಿಸಲಾಗುವುದೆಂದು ಅವರು ತಿಳಿಸಿದರು. ಇದೇ ತಿಂಗಳು 10ರಿಂದ ಆರಂಭಗೊಳ್ಳಲಿರುವ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಭೇಟಿಯಾಗಿ ಮನವಿ ಪತ್ರ ಸಲ್ಲಿಸಲಾಗುವುದೆಂದು ಅವರು ತಿಳಿಸಿದರು.

      ದಿ. 9ರಂದು ನಡೆಯುವ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ರುದ್ರಮುನಿ ಶಿವಾಚಾರ್ಯ ಶ್ರೀಗಳು, ಸಾನಿಧ್ಯವನ್ನು ವಿರಕ್ತಮಠದ ನಿಜಗುಣ ದೇವರು, ಬರಗಿಯ ಡಾ.ಚಂದ್ರಶೇಖರ ಸ್ವಾಮಿಗಳು, ಲೋಕಾಪೂರದ ಚಂದ್ರಶೇಖರ ಶ್ರೀಗಳು ವಹಿಸುವರು. ಅಧ್ಯಕ್ಷತೆಯನ್ನು ಶಾಸಕ ಗೋವಿಂದ ಕಾರಜೋಳ ವಹಿಸಲಿದ್ದು, ಉದ್ಘಾಟನೆಯನ್ನು ವಿಪ ಸದಸ್ಯ ಆರ್.ಬಿ.ತಿಮ್ಮಾಪೂರ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಮುರುಗೇಶ ನಿರಾಣಿ, ಜಗದೀಶ ಗುಡಗುಂಟಿಮಠ, ಸಿದ್ಧಲಿಂಗಯ್ಯ ಕೆ.ಕಂಬಿ, ವೀರೇಂದ್ರ ಪಾಟೀಲ, ಎಂ.ಪಿ.ದ್ವಾರುಕೇಶ್ವರಯ್ಯ, ಆರ್.ಕೆ.ಮಠದ ಭಾಗವಹಿಸಲಿದ್ದು, ಅತಿಥಿಗಳಾಗಿ ಬಸವರಾಜ ಉಮಚಗಿಮಠ, ಎಂ.ಬಿ.ಹಿರೇಮಠ, ರಾಚಪ್ಪ ಕರೆಹೊನ್ನ, ಅಲ್ಲಯ್ಯ ದೇವರಮನಿ, ಸಾತ್ವೀರಯ್ಯ ಮನ್ನಯನವರಮಠ, ವೀಣಾ.ಕೆ.ಮಠದ, ದ್ರಾಕ್ಷಾಯಣಿ ಹಲಸಂಗಿಮಠ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮುಧೋಳ ನಗರಸಭೆಗೆ ನೂತನವಾಗಿ ಆಯ್ಕೆಯಾದ ಸದಸ್ಯರನ್ನು ಸನ್ಮಾನಿಸಲಾಗುವುದು. ಅಲ್ಲದೇ ಇನ್ನೂ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

    ವೀರಶೈವ ಜಂಗಮ ಸಮಾವೇಶದಲ್ಲಿ ಜಿ.ಎಚ್.ಹಂಚಿನಾಳ ಇವರು ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರೇವಣ್ಣ ಹೊಸಮಠ, ವ್ಹಿ.ಆರ್.ಕೊಣ್ಣೂರಮಠ,  ಕುಮಾರ ಸ್ವತಂತ್ರಮಠ, ಕುಮಾರ ಮಠದ,  ಮಲ್ಲಿಕಾಜರ್ುನ ಗೋವಿಂದಪೂರಮಠ, ಬಸವರಾಜ ಮಹಾಲಿಂಗೇಶ್ವರಮಠ, ಶಿವಪ್ರಭು ಹಿರೇಮಠ, ನಿರಂಜನ ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತ