ಲೋಕದರ್ಶನ ವರದಿ
ಕೊಪ್ಪಳ 18: ಕೆಜಿಪಿ ಸಮೂಹ ಸಂಸ್ಥೆಯ ವತಿಯಿಂದ ಪ್ರಥಮಬಾರಿಗೆ ಕೊಪ್ಪಳ ನಗರದಲ್ಲಿ ಇದೇ ದಿ. 19ರ ಗುರುವಾರ ಮಧ್ಯಾಹ್ನ 12.25 ಗಂಟೆಗೆ ಬಸ್ಸ್ಟ್ಯಾಂಡ್ ಹತ್ತಿರ ಬೃಹತ್ ಕಟ್ಟಡವೊಂದರಲ್ಲಿ ಕೆಜಿಪಿ ಗೋಲ್ಡ್ ಜ್ಯುವೇಲರ್ಸ, ಕೆಜಿಪಿ ಸಿಲ್ಕ್& ಸ್ಯಾರೀಸ್ ಟೆಕ್ಸ್ ಟೈಲ್ಸ್ ಮತ್ತು ಗಾಮರ್ೆಂಟ್ಸ್ ಭವ್ಯವಾದಂತಹ ಶಾಪಿಂಗ್ ಕಾಂಪ್ಲೇಕ್ಸ್ ಉದ್ಘಾಟನೆಗೊಳ್ಳಲಿದೆ.
ತಾರಾಬಾಯಿ ಮತ್ತು ದಿ. ದೇವಿದಾಸ ಶೇಟ್ ಇವರ ಆಶೀವರ್ಾದಗಳೊಂದಿಗೆ ಸತ್ಯಗಣಪತಿ ಶ್ರೀಮಹಾಲಕ್ಷ್ಮೀ ಹಾಗೂ ಮಹಾಸರಸ್ವತಿ ಪೂಜಾದೊಂದಿಗೆ ಉದ್ಘಾಟನಾಕಾರ್ಯ ಆರಂಭಗೊಳ್ಳಲಿದೆ. ಗವಿಮಠದ ಪರಮಪೂಜ್ಯ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕೊಪ್ಪಳ, ರಾಜನಹಳ್ಳಿ ವಾಲ್ಮೀಲಿ ಮಹಾ ಸಂಸ್ಥಾನ ಮಠದ ಜಗದ್ಗುರು ಪ್ರಸನ್ನಾಂದ ಪೂರಿ ಮಹಾಸ್ವಾಮಿಗಳು, ಹೊನ್ನಾವರ ಕಕರ್ಿಮಠದ ಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಮಹಾಸ್ವಾಮಿಗಳು, ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು, ಸಿರಹಟ್ಟಿ ಫಕೀರೇಶ್ವರ ಮಹಾಸ್ವಾಮಿಗಳು ಇವರುಗಳ ದಿವ್ಯ ಸಾನಿಧ್ಯದಲ್ಲಿ ನೂತನ ಈ ಶಾಪಿಂಗ್ ಕಾಂಪ್ಲೆಕ್ಸ್ನ ಪಾರಾರಂಭೋತ್ಸವ ಜರುಗಲಿದೆ.
ಮುಖ್ಯ ಅತಿಥಿಗಳಾಗಿ ಕೊಪ್ಪಳ ಸಂಸದ ಸಂಗಣ್ಣ ಕರಡಿ, ಧಾರವಾಡ ಸಂಸದ ಪ್ರಲ್ಹಾದ ಜೋಶಿ, ಸಂಸ್ಥೆಯ ಪ್ರಮುಖರು ಹಾಗೂ ಶಾಸಕ ಬಿ.ಶ್ರೀರಾಮುಲು, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಸಚಿವ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲೆಯ ಶಾಸಕರಾದ ಹಾಲಪ್ಪ ಆಚಾರ್, ಅಮರೇಗೌಡ ಬೈಯಾಪೂರ, ಕೆ.ರಾಘವೇಂದ್ರ ಹಿಟ್ನಾಳ, ಜಿಪಂ ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಸ್ಥಾಯಿಸಮಿತಿ ಅಧ್ಯಕ್ಷೆ ಶಾಂತಾ ರಮೇಶ ನಾಯಕ್, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಸಿಇಓ ವೆಂಕಟರಾಜಾ, ಎಸ್.ಪಿ.ಡಾ. ಅನುಪ್ ಶೆಟ್ಟಿ, ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಜುಮ್ಮಣ್ಣವರ್, ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಬುಲಿಂಗನಗೌಡ ಪಾಟೀಲ್ ಹಲಗೇರಿ, ರಾಮರಾವ್ ರಾಯಕರ್, ಆರತಿ ಶೆಟ್ಟರ್, ತಾಪಂ ಅಧ್ಯಕ್ಷ ಬಾಲಚಂದ್ರ ಸೇರಿದಂತೆ ಗುರುಬಸವರಾಜ್ ಹುಳಗುಂದಿ, ದೀಲೀಪ್ ರಾಯಕರ್ ಸತ್ಯನಾರಾಯಣ ರಾಯಕರ್ ಸಿದ್ದಣ್ಣ ನಾಲ್ವಾಡ್, ಬಸವರಾಜ್ ಬೊಳ್ಳೊಳ್ಳಿ, ಪ್ರಶಾಂತ ರಾಯಕರ್, ಕೆ.ಮಹೇಶ್, ಕನರ್ಾಟಕ ಮಾಧ್ಯಮ ಅಕಾಡೆಮಿ ರಾಜ್ಯ ಪ್ರಶಸ್ತಿ ಪುರಸೃತ ಹಿರಿಯ ಪತ್ರಕರ್ತ ಎಂ. ಸಾದಿಕ್ ಅಲಿ, ದೊಡ್ಡೇಶ್ ಎಲಿಗಾರ್, ಪ್ರತಿಮಾ ಪಟ್ಟಣಶೆಟ್ಟಿ, ಸಿದ್ದಪ್ಪ ಹಂಚಿನಾಳ, ಡಾ.ರವಿರಾಜ್, ಎಸ್.ಆರ್ ನವಲಿ ಹಿರೇಮಠ, ಬಸವರಾಜ್ ಪುರದ್, ಗೀತಾ ಪಾಟೀಲ್, ಸುರೇಶ ದೇಸಾಯಿ, ಶೇಖರಗೌಡ ಮಾಲಿ ಪಾಟೀಲ್, ರಾಗವೇಮದ್ರ ಪಾನಗಂಟಿ, ಶ್ರೀನಿವಾಸ ಗುಪ್ತಾ, ಸುರೇಶ ಭೂಮರೆಡ್ಡಿ, ಸುರೇಶ ವಣರ್ೀಕರ್, ಮೋತಿಲಾಲ್ ಮೇಹತಾ, ಅಂಬಾಸಾ ಬಾಕಳೆ, ವಿರೂಪಾಕ್ಷಪ್ಪ ಅಗಡಿ, ರಾಜನ್ ಅಣವೇಕರ್, ರಾಕೇಶ್ ಜೈನ್, ವೆಂಟಕೇಶ್ ರಾಯಕರ್, ಸಂತೋಷ ವಣರ್ೇಕರ್, ಶಂಕರ್ ವಿಠ್ಠಲಕರ್, ಅಭಯಕುಮಾರ್ ಮೆಹತಾ ಪಾಲ್ಗೊಳ್ಳಲಿದ್ದಾರೆ ಎಂದು ಕೆಜಿಪಿ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಸುರೇಖಾ ಮತ್ತು ಗಣೇಶ್ ಶೇಟ್ ಹಾಗೂ ಸಂಘಟಕ ಬಳಗದವರು ಪ್ರಕಟಣೆ ಮೂಲಕ ತಿಳಿಸಿ ಸರ್ವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಾರೆ.