ಇಂದಿನ ಯುವಜನತೆ ದೇಶದ ಸಂಸ್ಕೃತಿಯನ್ನು ಅರಿಯಬೇಕಿದೆ : ಶಿವಾಚಾರ್ಯರು

ಲೋಕದರ್ಶನ  ವರದಿ

ಬೆಳಗಾವಿ : ಇಂದಿನ ಯುವಜನತೆ ದೇಶದ ಸಂಸ್ಕೃತಿಯನ್ನು ಅರಿತು ನಡೆಯಬೇಕಾಗಿದೆ. ಶಿಕ್ಷಣ ಕ್ಷೆಥತ್ರದಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸಿ ಮಕ್ಕಳ ಸವರ್ಾಂಗೀಣ ಪ್ರಗತಿಗೆ ಶಿಕ್ಷಕ ಸಮುದಾಯ ಶ್ರಮವಹಿಸಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಮುಕ್ತಿಮಠದ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯರು ಹೇಳಿದರು.

ರವಿವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರಂದು ಸದ್ಗುರು ಸಾಹಿತ್ಯ ಪ್ರತಿಷ್ಠಾನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಶೈಕ್ಷಣಿಕ ದಿನಾಚರಣೆಯಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.

ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೆಥತ್ರದಲ್ಲಿ ಶ್ಲಾಘನೀಯ ಕಾರ್ಯ ಮಾಡುತ್ತಿರುವವರನ್ನು ಗುರುತಿಸಿ ಗೌರವಿಸುವ ಕಾರ್ಯಮಾಡುತ್ತಿರುವ ಶ್ರೀ. ಸದ್ಗುರು ಸಾಹಿತ್ಯ ಪ್ರತಿಷ್ಠಾನದ ಕಾರ್ಯವನ್ನು ಶ್ಲಾಘಿಸಿದರು. ಇಂಥ ಕಾರ್ಯಗಳು ಇಂದು ಸಮಾಜದಲ್ಲಿ ಕಾರ್ಯನಿರ್ವಸುವವರಿಗೆ ಪ್ರೊಥತ್ಸಾಹಿಸುವ ನಿಟ್ಟಿನಲ್ಲಿ ಅವಶ್ಯಕವಾಗಿದೆ ಎಂದರು. ನಿಟ್ಟಿನಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸುಣಗಾರರ ಕಾರ್ಯವನ್ನು ಮೆಚ್ಚಿ ಅಭಿನಂದಿಸಿದರು.

ಹುಕ್ಕೆರಿ ಹೀರೆಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ ಇಂದಿನ ಆಧುನಿಕ ಕಾಲದ ಭರಾಟೆಯಲ್ಲಿ ಗ್ರಾಮೀಣ ಪ್ರದೇಶದ ಕಲೆ ಸಾಹಿತ್ಯ ಜಾನಪದ ಸಂಸ್ಕೃತಿಗಳು ಮರೆಯಾಗುತ್ತಿದ್ದು, ಅವುಗಳ ಪುನುರುಜ್ಜಿವನದ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸಬೇಕಾಗಿದೆ. ಆಧುನಿಕತೆಗೆ ಒತ್ತು ನೀಡದೆ ಹಿಂದಿನ ಕಾಲದ ಆಚರಣೆಗಳು ಇಂದು ಮತ್ತೊಮ್ಮೆ ಉಳಿಸಬೇಕಾಗಿದೆ. ಶಿಕ್ಷಣ ಹಾಗೂ ಸಾಮಾಜಿಕ ಕ್ಷೆತ್ರದಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸುವ ಅನಿವಾರ್ಯತೆ ಇದೆ ಎಂದರು.

ಮುಖ್ಯೊಪಾಧ್ಯಾಯ ಬಸವರಾಜ ಸುಣಗಾರವರ "ಅಭಿಮಾನದ ನನ್ನೂರು" ಹಾಗೂ ವಿಶ್ರಾಂತ ಪ್ರಧಾನ ಗುರುಗಳಾದ ಎಸ್.ಎಸ್. ಪಾಟೀಲರ "ಮಕ್ಕಳ ಮೋಜಿನ ನೀತಿ ಕಥೆಗಳು" ಪುಸ್ತಕಗಳನ್ನು ಉಭಯ ಶ್ರೀಗಳು ಲೋಕಾರ್ಪಣೆಗೊಳಿಸಿದರು. ಹಿರಿಯ ಸಾಹಿತಿ ಎಲ್.ಎಸ್. ಶಾಸ್ತ್ರೀಯವರ ಅಮೃತ ಮಹೋತ್ಸವ ನಿಮಿತ್ಯ ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತ ಕಲ್ಯಾಣರಾವ್ ಮುಚಳಂಬಿ ಅವರು ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಚಾರ್ಯ ಎಸ್.ಆರ್ ಹಿರೇಮಠ ಕೃತಿಗಳ ಕುರಿತು ಪರಿಚಯಿಸಿದರು. ಕವಿಗೋಷ್ಠಿಯಲ್ಲಿ ಜಿಲ್ಲೆಯ ಕವಿಗಳು ಕವನ ವಾಚನ ಮಾಡಿದರು.

ಸಮಾಜ ಸೇವಕರು ಕೃಷ್ಣ ರಾಜೇಂದ್ರ ತಾಳೂಕರ, ಸರಕಾರಿ ಸೇವೆಯ ರವಿ ಶಂಕರ ಚನಾಳ, ನಿವೃತ್ತ ಯೋಧ ಅಥಣಿಯ ರಾಜು ಜಮಖಂಡಿಕರ, ಪತ್ರಕರ್ತ ಮಹಾದೇವ ಬಿರಾದಾರ, ಪ್ರಗತಿಪರ ರೈತ ನಿಂಗ್ಯಾನಟ್ಟಿ ಬಸನಗೌಡಾ ಹುದ್ದಾರ, ಶಿಕ್ಷಕ ವೈಜನಾಥ ಹಾಲನ್ನವರ, ವಿ.ಬಿ.ಹುಬಳೀಕರ, ರುದ್ರಪ್ಪಾ ಯಲ್ಲಪ್ಪಾ ಫಂಡಿ, ಬಿ.ಎನ್.ಪಾರಿಶ್ವಾಡಮಠ, ಶಿಕ್ಷಕಿ ಪ್ರಭಾವತಿ ಹೊಸಮನಿ, ಎಮ್.ಬಿ.ಬಾಗೇವಾಡಿ, ಶಬಾನಾ ಅಣ್ಣಿಗೇರಿ, ಇವರಿಗೆ2018 ನೇ ಸಾಲಿನ ಸದ್ಗುರುಕಾಯಕ ಶ್ರೀ. ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಪ್ರಾರಂಭದಲ್ಲಿ ಶಿಕ್ಷಕ ಶರಣಪ್ಪಾ ಚಿಕ್ಕನಗೌಡರ ಪ್ರಾಥರ್ಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸುಣಗಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ರಾಜುಕೋಲಕಾರ ನಿರೂಪಿಸಿದರು. ಶಿಕ್ಷಕ ರಾಜೇಂದ್ರ ಗೋಶ್ಯಾನಟ್ಟಿ ವಂದಿಸಿದರು.