ಇಂದಿನಿಂದ ರಾಮಕೃಷ್ಣ ಮಿಶನ್ ಆಶ್ರಮದ 16ನೇ ವಾರ್ಷಿಕೋತ್ಸವ

ಬೆಳಗಾವಿ ೦೬: ಸ್ವಾಮಿ ವಿವೇಕಾನಂದರು ಪರಿವ್ರಾಜಕ ಸಂನ್ಯಾಸಿಯಾಗಿ ದೇಶ ಪರ್ಯಟನೆ ಮಾಡುತ್ತ 1892ರ ಅಕ್ಟೋಬರ್ನಲ್ಲಿ ಬೆಳಗಾವಿಗೆ ಆಗಮಿಸಿದ್ದರು. ಮೂರು ದಿನಗಳ ಕಾಲ ಬೆಳಗಾವಿಯ ಖ್ಯಾತ ವಕೀಲ ಸದಾಶಿವ ಭಾಟೆ ಅವರ ಮನೆಯಲ್ಲಿ, ಬಳಿಕ 9 ದಿನಗಳ ಕಾಲ ಕೋಟೆಯಲ್ಲಿ ಹರಿಪಾದ ಮಿತ್ರ ಎಂಬ ಅರಣ್ಯ ಅಧಿಕಾರಿಗಳ ಬಂಗಲೆಯಲ್ಲಿ ತಂಗಿದ್ದರು. ಸ್ವಾಮಿ ವಿವೇಕಾನಂದರು ಪಾವನಗೊಳಿಸಿದ ಈ ಭೂಮಿಯಲ್ಲಿ 'ರಾಮಕೃಷ್ಣ  ಮಿಶನ್ ಆಶ್ರಮ' 2000ರಲ್ಲಿ ಪ್ರಾರಂಭವಾಯಿತು. 2004ರ ಜನವರಿಯಲ್ಲಿ 'ವಿಶ್ವಭಾವೈಕ್ಯ ಮಂದಿರ ಸ್ಥಾಪಿಸಲಾಯಿತು. ಈ ಸವಿನೆನಪಿಗಾಗಿ ಫೆ.7 ರಿಂದ 9ರವರೆಗೆ 16ನೇ ವಾಷರ್ಿಕೋತ್ಸವ ನಿಮಿತ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಆಶ್ರಮದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಎಂದು ಬೆಳಗಾವಿ ರಾಮಕೃಷ್ಣ ಮಿಶನ್ ಆಶ್ರಮ ಕಾರ್ಯದಶರ್ಿ ಸ್ವಾಮಿ ಆತ್ಮಪ್ರಾಣಾನಂದ ಸ್ವಾಮೀಜಿ ಅವರು, ಫೆ.7ರಂದು ಮುಂಜಾನೆ 10.30ರಿಂದ ಮಧ್ಯಾಹ್ನ 1.30ರವರೆಗೆ 'ಯುವ ಸಮ್ಮೇಳನ' ಹಮ್ಮಿಕೊಳ್ಳಲಾಗಿದ್ದು, ವಿವಿಧ ಕಾಲೇಜುಗಳ ಸುಮಾರು ಒಂದು ಸಾವಿರ ವಿದ್ಯಾಥರ್ಿಗಳು ಭಾಗವಹಿಸಲಿದ್ದಾರೆ. ಫೆ..8ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45ರವರೆಗೆ 'ಶಿಕ್ಷಕರ ಸಮಾವೇಶ' ಹಮ್ಮಿಕೊಳ್ಳಲಾಗಿದ್ದು, ಸುಮಾರು 800 ಶಿಕ್ಷಕರು ಮತ್ತು ಬಿ.ಇಡಿ ವಿದ್ಯಾಥರ್ಿಗಳು ಭಾಗವಹಿಸಲಿದ್ದಾರೆ. ಸಂಜೆ 6.30 ರಿಂದ 8.30ರವರೆಗೆ ಧಾರವಾಡದ ಯಕ್ಷಗಾನ ಮತ್ತು ಸಂಸ್ಕೃತಿ ಸಂಘದವರಿಂದ 'ಶ್ರೀಕೃಷ್ಣ ಸಂಧಾನ' ಪ್ರಸಂಗದ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಫೆ.9ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ 'ಭಕ್ತಸಮ್ಮೇಳನ' ಆಯೋಜಿಸಲಾಗಿದ್ದು, ಭಕ್ತಸಮ್ಮೇಳನದಲ್ಲಿ 800 ಜನ ಭಕ್ತರು ಭಾಗವಹಿಸಲಿದ್ದಾರೆ. ಸಂಜೆ 6.30 ರಿಂದ 8.30ರವರೆಗೆ ಶಾಂತಲಾ ನಾಟ್ಯಾಲಯ ಅವರಿಂದ ಶ್ರೀರಾಮಕೃಷ್ಣ ಜೀವನದ ಕುರಿತಾದ 'ಶ್ರೀರಾಮಕೃಷ್ಣ ಚರಿತಂ' ನೃತ್ಯರೂಪಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.  

ಈ ಎಲ್ಲ ಕಾರ್ಯಕ್ರಮಗಳ ಉದ್ದೇಶ ಶ್ರೀರಾಮಕೃಷ್ಣ, ಶ್ರೀಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದರ ಜೀವನ ಹಾಗೂ ಉದಾತ್ತ ವೇದಾಂತ ಸಂದೇಶಗಳನ್ನು, ಭಾರತೀಯ ಶ್ರೇಷ್ಠ ಸಾಂಸ್ಕೃತಿಕ ಪರಂಪರೆಯನ್ನು ಜನಮಾನಸದಲ್ಲಿ ಬಿತ್ತುವುದು. ಈ ಉನ್ನತ ಚಿಂತನೆಗಳು ಜನರ ಜೀವನದಲ್ಲಿ ಶ್ರೇಯಸ್ಸನ್ನು ತಂದು, ಅವರ ಜೀವನ ಸುಖ-ಶಾಂತಿಯಿಂದ ಕೂಡಿ, ತನ್ಮೂಲಕ ಶ್ರೇಷ್ಠ ಸಮಾಜ ನಿಮರ್ಾಣವಾಗಲಿ ಎಂಬ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು. ಬೆಳಗಾವಿಯ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

****