ಲೋಕದರ್ಶನ ವರದಿ
ಹರಪನಹಳ್ಳಿ 02;ಗ್ರಾಮೀಣ ಭಾಗದ ಬಡರೋಗಿಗಳಿಗೆ ಅನುಕೂಲವಾಗುವ ಉದ್ದೇಶದಿಂದ 15 ರಿಂದ 20 ವೈಧ್ಯರ ತಂಡ ತಪಾಸಣೆಗೆ ಬೇಟಿ ನೀಡಿ ಎಲ್ಲಾ ರೀತಿಯ ಕಾಯಿಲೆಗಳಿಗೆ ತಪಾಸಣೆ ಪರೀಕ್ಷೆ ಮಾಡಲಿದ್ದಾರೆ ಎಂದು ಬೆಂಗಳೂರಿನ ತಥಾಗತ್ ಹಾಟರ್್ ಕೇರ್ ಸೆಂಟರ್ನ ಪ್ರಖ್ಯಾತ ತಜ್ಞಾ ಡಾ|| ಮಹಾಂತೇಶ್ ಆರ್. ಚರಂತಿಮಠ್ ಹೇಳಿದರು.
ಪಟ್ಟಣದ ಪ್ರವಾಸಿ ಮಂಧಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ತಥಾಗತ್ ಮೆಡಿಕಲ್ ಟ್ರಸ್ಟ್ ಹಾಗೂ ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಇವರುಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಗೆ ಎ.ಡಿ.ಬಿ.ಕಾಲೇಜು ಆವರಣದಲ್ಲಿ ನಡೆಯಲಿರುವ ಉಚಿತ ಬೃಹತ್ ಆರೋಗ್ಯ ಶಿಬಿರದಲ್ಲಿ ಅನಾರೋಗ್ಯದಿಂದ ಬಾಳುತ್ತಿರುವ ಬಡ ರೋಗಿಗಳಿಗೆ ಅನುಕೂವಾಗುವ ಉದ್ದೇಶದಿಂದ ಇತರಹದ ಕ್ಯಾಂಪ್ ವ್ಯವಸ್ಥೆ ಮಾಡಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಕ್ತದೊತ್ತಡ, ಮಧುಮೇಹ,ಹೃದ್ರೋಗ, ಕ್ಯಾನ್ಸರ್ ಖಾಯಿಲೆಗಳ ತಪಾಸಣೆ ಮತ್ತು ಉಚಿತ ಔಷಧ ವಿತರಣಾ ಕಾರ್ಯಕ್ರಮ ಈ ಆರೋಗ್ಯ ಶಿಬಿರದಲ್ಲಿ ಅನುಭವಂತ ವೈಧ್ಯರ ತಂಡ ಆಗಮಿಸಲಿದ್ದಾರೆ. ಹೃದಯಕ್ಕೆ ಸಂಬಂಧಿಸಿದ, ಹೃದಯಾಘಾತ, ಹೃದಯ ರಕ್ತನಾಳ ಮತ್ತು ಕವಾಟಗಳ ಖಾಯಿಲೆಗಳು ಹುಟ್ಟಿನಿಂದ ಬಂದಂತಹ ಹೃದ್ರೋಗಗಳ, ಅತಿಯಾದ ರಕ್ತದೋತ್ತಡ ಬಿಪಿ.ಮಧುಮೇಹ ಇನ್ನಿತರ ಹೃದಯ ಕಾಯಿಲೆಗಳಿಗೆ ಸಂಬಂಧಿಸಿದಂತೆ ಉಚಿತ ತಪಾಷಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ನ ಸಂಯೋಜಕರಾದ ಎಂ.ಪಿ.ವೀಣಾ ಮಹಾಂತೇಶ್, ವಕೀಲ ಸಿದ್ದನಗೌಡ, ಭಾಷಾಮುಜಗಲ್ , ಚೇತನ್, ಮಂಜುನಾಥ್, ಮತ್ತು ಇತರರು ಇದ್ದರು