ಲೋಕದರ್ಶನ ವರದಿ
ಹೊನ್ನಾವರ , 11: "ಟಿಪ್ಪುಸುಲ್ತಾನ್ ಕೇವಲ ರಾಜನಷ್ಟೇ ಅಲ್ಲದೆ ಪಂಚ ಭಾಷಾ ಪರಿಣಿತಿಯನ್ನು ಹೊಂದಿದ್ದ ಪರಿಸರ ಪ್ರೇಮಿಯೂ ಆಗಿದ್ದ ಟಿಪ್ಪು ಸುಲ್ತಾನ್ ಕೇವಲ ಅರಸನಾಗಿ ಆಳ್ವಿಕೆ ಮಾಡದೇ ಪರಿಸರ ಪ್ರೇಮಿ ರಾಜ ಎಂಬುದನ್ನು ನಾವು ಗಮನಿಸಬೇಕಿದೆ" ಎಂದು ಸೆಂಟ್ ಥಾಮಸ್ ಹೈಸ್ಕೂಲ್ ಶಿಕ್ಷಕ ಬಿ.ಎಂ.ಭಟ್ ಅಭಿಪ್ರಾಯಿಸಿದರು.
ಪಟ್ಟಣ ಪಂಚಾಯತ ಸಭಾಭವನದಲ್ಲಿ ತಾಲೂಕ ಆಡಳಿತ, ತಾಲೂಕ ಪಂಚಾಯತ, ಪಟ್ಟಣ ಪಂಚಾಯತ ಮತ್ತು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಶನಿವಾರ ನಡೆದ ಟಿಪ್ಪುಸುಲ್ತಾನ್ ಜಯಂತಿ ಆಚರಣೆಯ ವಿಷೇಶ ಉಪನ್ಯಾಶಕರಾಗಿ ಅವರು ಮಾತನಾಡಿದರು. ಇವರ ಅವಧಿಯಲ್ಲಿ ತಪ್ಪು ಮಾಡಿದವರಿಗೆ ಗಿಡ ನೆಡುವ ಜೊತೆ ಅದನ್ನು ಪೊಷಣೆ ಮಾಡುವ ಜವಾಬ್ದಾರಿ ವಹಿಸುವ ಶಿಕ್ಷೆ ನೀಡುವುದನ್ನು ಗಮನಿಸಿದರೆ ಇವರ ಪರಿಸರ ಕಾಳಜಿಯನ್ನು ನಾವು ಗಮನಿಸಬಹುದಾಗಿದೆ ಎಂದರು.
ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಪಟ್ಟಣ ಪಂಚಾಯತ್ ಅಧ್ಯಕ್ಷ ರಾಜಶ್ರಿ ನಾಯ್ಕ ಟಿಪ್ಪುಸುಲ್ತಾನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕಾ ದಂಡಾಧಿಕಾರಿ ವಿ.ಆರ್.ಗೌಡ ಮಾತನಾಡಿ ಪರಿಸರ ರಕ್ಷಣೆಯಲ್ಲಿ ಟಿಪ್ಪು ಸುಲ್ತಾನ ಪ್ರಮುಖ ಪಾತ್ರ ವಹಿಸಿದ್ದರು. ಆಡಳಿತ್ಮಕವಾಗಿ ಅನೇಕ ಸುದಾರಣೆ ತರುವ ಮೂಲಕ ಹೊಸ ಯುಗಕ್ಕೆ ನಾಂದಿ ಹಾಡಿದ್ದರು ಇದನ್ನು ಗಮನಿಸಿದೆ ಅವರ ಆಡಳಿತ ವೈಖರಿ ಇಂದಿನವರಿಗೆ ಆದರ್ಶಪ್ರಾಯವಾಗಿದೆ. ಸಕರ್ಾರ ಅವರ ಆಡಳಿತ ವೈಖರಿಯನ್ನು ಗಮನಿಸಿ ಟಿಪ್ಪುಜಯಂತಿಯನ್ನು ಆಚರಿಸುತ್ತಿದೆ ಎಂದರು.
ವೇದಿಕೆಯಲ್ಲಿ ಪಟ್ಟಣ ಪಂಚಾಯತ ಸದಸ್ಯರಾದ ಜಮೀಲಾಬಿ ಶೇಖ್, ತುಳಸಿದಾಸ್ ಪುಲ್ಕರ್, ವಕೀಲರಾದ ಎಸ್.ಯು ತಲಕಣಿ ತಾಲೂಕ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಪೋಲಿಸ್ ವೃತ್ತ ನಿರೀಕ್ಷಕರಾದ ಚೆಲವರಾಜ ಬಿ. ಉಪಸ್ಥಿತರಿದ್ದರು. ಟಿಪ್ಪುಸುಲ್ತಾನ್ ಜಯಂತಿ ಆಚರಣೆ ಹಿನ್ನಲೆ ಶರಾವತಿ ವೃತ್ತದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ ನಡೆಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪಿಎಸ್ಐ ಸಂತೋಷ್ ಕಾಯ್ಕಿಣಿ ನೇತ್ರತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.