ಸರಕಾರದ ಇಂದಿರಾ ಕಾಂಟೀನ್ಗೆ ಈ ಪ್ರಸಾದ ನಿಲಯವೇ ಪ್ರೇರಣ: ಪಾಟೀಲ

ಲೋಕದರ್ಶನ ವರದಿ

ಗದಗ 17: ಸರಕಾರ ಪ್ರೇರಣೆಗೊಂಡು  ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆಗೊಳ್ಳಲು ಅವಳಿ ನಗರದ ಅನ್ನಪೂಣರ್ೇಶ್ವರಿ ಪ್ರಸಾದ ನಿಲಯವೇ ಕಾರಣವಾಗಿದೆ ಎಂದು ಶಾಸಕ ಎಚ್.ಕೆ.ಪಾಟೀಲ ಅವರು ಹೇಳಿದರು.

       ನಗರದ ಹಳೇ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ 5 ರೂ. ಹೊಟ್ಟೆ ತುಂಬಾ ಊಟ ಎಂದು ಪ್ರಸಿದ್ಧಿ ಪಡೆದಿರುವ ಅನ್ನಪೂಣೇಶ್ವರಿ ಪ್ರಸಾದ ನಿಲಯದಲ್ಲಿ ಒಂದು ಸಾವಿರ ದಿನ ಪೂರೈಸಿದ ಸಂಭ್ರಮ ಹಾಗೂ ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಪ್ರಶಸ್ತಿ ಪಡೆದ ರೈತರಿಗೆ ಹಾಗೂ ರೈತ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಇಂದಿಗೂ ಮೌಲ್ಯಗಳು ಮುಂದುವರೆದಿವೆ ಎನ್ನುವುದಕ್ಕೆ ಸಾವಿರ ದಿನಗಳು ಪೂರೈಸಿದ ಪ್ರಸಾದ ನಿಲಯವೇ ಸಾಕ್ಷಿಯಾಗಿದೆ ಎಂದು ಹೇಳಿದರು.

       ಮಾಜಿ ಶಾಸಕ ಎಸ್. ಎಸ್.ನಂಜಯ್ಯನಮಠ ಅವರು ಮಾತನಾಡಿಶ್ರೇಷ್ಟವಾದ ಕೆಲಸ ಕಾರ್ಯಗಳೆ ಶ್ರೇಷ್ಟವಾದ ಧರ್ಮವಾಗಿದೆ. ನೀಡುವ ಕೈಗಳು ಸ್ವಚ್ಚವಾಗಿದ್ದರೇ ಕೊಡುವ ಕೈಗಳ ಬಹಳ ಎನ್ನುವದನ್ನು ಪ್ರಸಾದ ನಿಲಯ ಸಾಬೀತು ಪಡೆಸಿದೆ. ಇಂತಹ ಸೇವೆಯನ್ನು ನೋಡಿ ನಾವುಗಳು ಕಲಿಯುವುದು ಬಹಳಷ್ಟಿದೆ.ನಾನು ಸಹ ಇದನ್ನು ಪ್ರೇರಣೆಯಾಗಿಟ್ಟುಕೊಂಡು ಇದೇ ಡಿ. 31 ರಿಂದ ಹುಟ್ಟುಹಬ್ಬದ ಅಂಗವಾಗಿ ಸೂಳಿಬಾವಿ ನಗರದ ಸರಕಾರಿ ಆಸ್ಪತ್ರೆಯಲ್ಲಿನ ಒಳ ರೋಗಿಗಳಿಗೆ ಪ್ರತಿನಿತ್ಯ ಅನ್ನಸಾರು ನೀಡುವದಾಗಿ ಭರವಸೆ ನೀಡಿದರು.

       ಕೃಷಿ ವಿಶ್ವವಿದ್ಯಾಲಯದಿಂದ ಪ್ರಶಸ್ತಿ ಪಡೆದ  ರೈತರುಗಳಾದ ಸಂಗನಗೌಡ ಪಾಟೀಲ, ಅನಸೂಯಾ ತಳಬಾಳ, ಫಕ್ಕಿರೇಶ ಕಿಳ್ಳಿಕ್ಯಾತರ, ವೀಣಾ ಭರಮಗೌಡರ, ಹಸನಸಾಬ ಅಸುಂಡಿ, ಲಕ್ಷ್ಮೀ ಹೋಳಗಿ, ಬಸವರಾಜ ಸಜ್ಜನ, ವಿಜಯಲಕ್ಷ್ಮೀ ಪವಾಡಶೆಟ್ಟಿ, ಗುರುಬಸಯ್ಯ ನಾಗಲೋಟಿಮಠ, ಪ್ರತಿಭಾ ನವಲಗುಂದ, ರಮೇಶ ಕಳಕರಡ್ಡಿ, ರೇಖಾ ಸಜ್ಜನರ ಹಾಗೂ ವಿದೇಶದಲ್ಲಿ ಅಂಚೆಚೀಟಿ ಪ್ರದರ್ಶನ ಮಾಡಿ ಬೆಳ್ಳಿ ಪದಕ ಪಡೆದ ಸೈಯಂ ಬಾಗಮಾರ ಅವರನ್ನು ಸನ್ಮಾನಿಸಲಾಯಿತು.

       ಸನ್ಮಾನಿತರ ಪರವಾಗಿ ಬಸವರಾಜ ಅವರು ಮಾತನಾಡಿ, ಕೃಷಿಯಲ್ಲಿ ರೈತರ ಬೆಳೆಗೆ ರೈತರೇ ಬೆಲೆಯನ್ನು ನಿಗದಿಗೊಳಿಸಬೇಕು ಅಂದಾಗ ಮಾತ್ರ ರೈತರ ಸಂಕಷ್ಟದಿಂದ ಪಾರಾಗಲು ಸಾಧ್ಯ. ಬೆಂಬಲ ಬೆಲೆಯಲ್ಲಿ ರೈತರುತಮ್ಮ ಬೆಳೆಯನ್ನು  ಮಾರಾಟ ಮಾಡಿದ ಸುಮಾರು 2 -3 ತಿಂಗಳ ನಂತರ ಹಣ ಕೈಗೆ ಬರುವದರಿಂದ ಮೊದಲೆ ಸಾಲಾ ಮಾಡಿ ಕಂಗೆಟ್ಟಿರುವ ರೈತರು ಅನಿವಾರ್ಯವಾಗಿ ಖರೀದಾರರಿಗೆ  ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಾರೆ ಎಂದು ಅಳಲನ್ನು ತೋಡಿಕೊಂಡರು.

       ನಿಯಲದ ಅಧ್ಯಕ್ಷರಾದ ಎಸ್ಎಸ್ ಕಳಸಾಪೂರ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕ ಪಂಚಾಯತ ಅಧ್ಯಕ್ಷ ಮೋಹನ ದುರಗಣ್ಣವರ, ಜಿಪಂ ಸದಸ್ಯ ಸಿದ್ದಲಿಂಗೇಶ ಪಾಟೀಲ, ಯುವ ಮುಖಂಡ ಉಮರ್ಪಾರೂಖ ಹುಬ್ಬಳ್ಳಿ, ಸಲಹೆಗಾರರಾದ ಜೆ..ಬೆಳಮಕರ, ಡಾ. ಎಂ.ಬಿ.ನಿಂಬಣ್ಣವರ, ಎಸ್ಕೆಡಿಆರ್ಪಿ ಜಿಲ್ಲಾ ನಿದರ್ೇಶಕ ಶಿವಾನಂದ ಆಚಾರ್ಯ, ಹಿರಿಯರಾದ ಕೆ.ವಿ.ಕುಷ್ಟಗಿ, ಎನ್.ಆರ್.ಬದಿ, ಭಗವಂತ ಘೋಡಕೆ, ಎಸ್.ಕೆ.ಶಿರಿ, ಸಮಿತಿಯ ನಿದರ್ೇಶಕರುಗಳಾದ ಶೈಲಜಾ ಕೋಡಿಹಳ್ಳಿ, ಸುಭದ್ರಾ ನೀಲಪ್ಪನವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

       ಪ್ರಸಾದ ನಿಲಯದ ನಿದರ್ೇಶಕ ವೆಂಕಟೇಶ ಇಮರಾಪೂರ ಸ್ವಾಗತಿಸಿದರು. ಕಾರ್ಯಧ್ಯಕ್ಷ ಮಂಜುನಾಥ ಬಮ್ಮನಕಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದಶರ್ಿ ಅಮರೇಶ ಉಮಚಗಿ ವಂದಿಸಿದರು