ಸಮಾಜವನ್ನು ಜ್ಞಾನ ಬಂಡಾರದೆಡೆಗೆ ಕರೆದೊಯ್ಯುವ ಶಕ್ತಿ ತೊಗಲುಗೊಂಬೆ ಆಟಕಿದೆ
ಬಳ್ಳಾರಿ 16: ಹುಲಿಕುಂಟೆರಾಯ ತೊಗಲುಗೊಂಬೆ ಕಲಾತಂಡ ಬಳ್ಳಾರಿ ಮತ್ತು ಎರಿ್ರಸ್ವಾಮಿ ತೊಗಲುಗೊಂಬೆ ಕಲಾ ಮೇಳ ಟ್ರಸ್ಟ್ ಬಳ್ಳಾರಿ ಇವರ ಸಹಯೋಗದಲ್ಲಿ ಡಿ.ಹಿರೇಹಾಳಿನ ನೀಲಕಂಠೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಸುಗ್ಗಿ ಸಂಭ್ರಮ ಎನ್ನುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಹಳ್ಳಿ ಜನರು ಕಲೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಾರೆ. ಯಾವುದೇ ಉತ್ಸವಗಳು ಬಂದರೂ ಅಲ್ಲಿ ತೊಗಲುಗೊಂಬೆ, ನಾಟಕ ಮತ್ತು ನೃತ್ಯ ಇರಲೇಬೇಕು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ನೀಲಕಂಠೇಶ್ವರ ದೇವಸ್ಥಾನ ಟ್ರಸ್ಟಿನ ಖಜಾಂಜಿ ರತ್ನಾಕರ ಹೇಳಿದರು. ಪುಟ್ಟ ಪುಟ್ಟ ಮಕ್ಕಳು ಜಾನಪದ ನೃತ್ಯಗಳಿಗೆ ಹೆಜ್ಜೆ ಹಾಕುತ್ತಿರುವುದು ಸಂತೋಷದ ವಿಷಯ ಮಕ್ಕಳ ಮನೋ ಧೈರ್ಯವನ್ನು ಬೆಳೆಸುವ ಶಕ್ತಿ ಕಲೆಗೆ ಇದೆ ಎಂದು ಕೆ.ಸಿ ಸುಂಕಣ್ಣ ಅಭಿಷೇಕ್ ರವರು ತಿಳಿಸಿದರು.
ತೊಗಲು ಗೊಂಬೆ ಮತ್ತು ಭರತನಾಟ್ಯ ಪ್ರದರ್ಶನವನ್ನು ಡಿ. ಹಿರೇಹಾಳು ಗ್ರಾಮದಲ್ಲಿ ಹಮ್ಮಿಕೊಂಡಿರುವುದು ನಮ್ಮೆಲ್ಲರಿಗೆ ಸಂತೋಷವನ್ನುಂಟು ಮಾಡಿದೆ ಎಂದು ನೀಲಕಂಠೇಶ್ವರ ದೇವಸ್ಥಾನ ಕಾರ್ಯದರ್ಶಿಗಳಾದ ಅಂತೆಸಿ ಹೇಳಿದರು. ವೇದಿಕೆಯ ಮೇಲೆ ಹುಲಕುಂಟರಾಯ ತೊಗಲುಗೊಂಬೆ ಕಲಾತಂಡದ ಅಧ್ಯಕ್ಷರು ಮತ್ತು ಸಂಚಾಲಕರು ಆಗಿರುವ ಕೆ ಹೊನ್ನೂರ ಸ್ವಾಮಿ ಅವರು ಮಾತನಾಡುತ್ತಾ, ತೊಗಲುಗೊಂಬೆ ಪ್ರದರ್ಶನವನ್ನು ಹಳ್ಳಿಗಳಲ್ಲಿ ಅತಿ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಗ್ರಾಮೀ ಭಾಗಗಳ ಜನರು ತೊಗಲುಗೊಂಬೆ ಮತ್ತು ಬಯಲಾಟ ಕಾರ್ಯಕ್ರಮಗಳಿಗೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡುತ್ತಾ ಬಂದಿದ್ದಾರೆ. ಅದಕ್ಕಾಗಿ ಗ್ರಾಮೀಣ ಜನತೆಗೆ ಧನ್ಯವಾದ ತಿಳಿಸಿದರು. ಕಾರ್ಯದರ್ಶಿಗಳಾದ ಲಕ್ಷ್ಮಿ ದೇವಿ ಭಾರ್ಗವಿ ದುಶ್ಯಂತಕುಮಾರ ಎರಿ್ರಸ್ವಾಮಿ ತೊಗಲುಗೊಂಬೆ ಕಲಾ ಮೇಳ ಟ್ರಸ್ಟ್ ನ ಅಧ್ಯಕ್ಷರಾದ ವೈ ಪ್ರಭು ಕಾರ್ಯದರ್ಶಿ ರೇಖಾ ಇವರು ಉಪಸ್ಥಿತರಿದ್ದರು.
ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಭಿಷೇಕ್ ಮತ್ತು ತಂಡದವರು ಸಮೂಹ ನೃತ್ಯವನ್ನು ಹುಲಿಕುಂಟರಾಯ ತೊಗಲಗೊಂಬೆ ಕಲಾತಂಡ ಬಳ್ಳಾರಿ ಮತ್ತು ಎರಿ್ರಸ್ವಾಮಿ ತೊಗಲುಗೊಂಬೆ ಕಲಾಮೇಳ ಟ್ರಸ್ಟ್ ರವರು ದಶಕಂಠ ರಾವಣ ಆತ್ಮಲಿಂಗ ಎನ್ನುವ ತೊಗಲುಗೊಂಬೆ ನಾಟಕವನ್ನು ಸುಮಾ ಮತ್ತು ತಂಡದವರು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ದೊಡಗಟ್ಟೆ ಮಲ್ಲಿಕಾರ್ಜುನ ಎಸ್ ಎಸ್ ಗ್ರೂಪ್ ಕ್ರಿಯೇಶನ್ಸ್, ನೀಲಕಂಠೇಶ್ವರ ದೇವಸ್ಥಾನದ ಟ್ರಸ್ಟನ ಅಧ್ಯಕ್ಷರಾದ ಪ್ರಹಲ್ಲಾದ, ಖಜಾಂಚಿ ರತ್ನಾಕರ, ಕಾರ್ಯದರ್ಶಿ ಬಸವರಾಜ್, ಆನಂದ, ಗಂಜಿ ಸುರೇಶ್, ಮಾದುಗುಂಡೆ ತಿಪ್ಪೇಸ್ವಾಮಿ, ಅಂತೆಸಿ, ಐಲಿ ರವಿಕುಮಾರ್, ಗಂಜಿ ಹೊನ್ನೂರ್ಪ, ಮಿಟ್ಟೆ ನಾಗರಾಜ, ಗಂಜಿ ಸಿದ್ದಣ್ಣ, ದೇಸಾಯಿ ಎರಿ್ರಸ್ವಾಮಿ, ಐಲಿ ವಿನಾಯಕ, ಸಂತೋಷ್ ಕುಮಾರ್, ಕಾರ್ತಿಕ, ಶಾಮಿಯಾನ್ ಶರಣ, ಚಂದ್ರಶೇಖರ, ಡಿ ಹೀರೆಹಾಳಿನ ಎಲ್ಲಾ ಗ್ರಾಮಸ್ಥರು ಕಲಾವಿದರು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಸಾವಿರಾರು ಜನ ಪ್ರೇಕ್ಷರರ ಮನಸೂರೆಗೊಂಡಿತು.