ಕಾಯಕ ಶರಣರ ತತ್ವಾದರ್ಶಗಳು ಯುವ ಪೀಳಿಗೆ ತಿಳಿದುಕೊಳ್ಳಬೇಕು -ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರ್ಪ ಲಮಾಣಿ
ಹಾವೇರಿ 17: ಸಮಾಜದ ಅಂಕು-ಡೊಂಕುಗಳನ್ನು ವಚನಗಳನ್ನು ಮೂಲಕ ತಿದ್ದಿದ ಹಾಗೂ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಕಾಯಕ ಶರಣರ ತತ್ವಾದರ್ಶಗಳನ್ನು ಯುವ ಪೀಳಿಗೆ ತಿಳಿದುಕೊಲ್ಳಬೇಕು ಎಂದು ಶಾಸಕ ಹಾಗೂ ವಿಧಾಸಭೆ ಉಪ ಸಭಾಧ್ಯಕ್ಷ ರುದ್ರ್ಪ ಲಮಾಣಿ ಅವರು ಹೇಳಿದರು.
ನಗರದ ಗಾಂಧಿ ಭವನದಲ್ಲಿ ಸೋಮವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಟಿ.ಎಂ.ಎ.ಇ.ಎಸ್ ಬಿ.ಇಡಿ ಕಾಲೇಜ್ ಸಹಯೋಗದಲ್ಲಿ ಮಹಾಪುರುಷರಾದ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ದೂಳಯ್ಯ ಮತ್ತು ಉರಿಲಿಂಗ ಪೆದ್ದಿಯವರ ಕಾಯಕ ಶರಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದು.
ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪನೆ ಮೂಲಕ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದ್ದರು. ಅದರ ಪರಿಕಲ್ಪನೆ ಇಂದಿನ ಸಂಸತ್ ಆಗಿದೆ. ಶರಣರ ವಚನಗಳು ಸರ್ವಕಾಲಕ್ಕೂ ಪ್ರಸ್ತುವಾಗಿದೆ ಎಂದರು.
ಹರಳಯ್ಯ ಪತ್ರಿಕೆ ಸಂಪಾದಕ ಡಾ.ಮಾರ್ಕಂಡೇಯ ದೊಡ್ಡಮನಿ ಹಾಗೂ ಚನ್ನಪ್ಪ ಕುನ್ನೂರ ಪ.ಪೂ.ಕಾಲೇಜು ಪ್ರಾಂಶುಪಾಲ ನಾಗರಾಜ ದ್ಯಾಮನಕೊಪ್ಪ ಅವರು ಕಾಯಕ ಶರಣ ಬದುಕಿನ ಕುರಿತು ಉಪನ್ಯಾಸ ನೀಡಿದರು.
ಹೊಸಮಠದ ಬಸವಶಾಂತಲಿಂಗ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜು ಸಾತೇನಹಳ್ಳಿ, ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್, ತಹಶೀಲ್ದಾರ ಶ್ರೀಮತಿ ಶರಣಮ್ಮ, ಟಿ.ಎಂ.ಎ.ಇ.ಎಸ್ ಬಿ.ಇಡಿ ಕಾಲೇಜ್ ಪ್ರಾಚಾರ್ಯ ಡಾ.ಬಸನಗೌಡ್ರ, ಬೆಂಗಳೂರು ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ, ಕರ್ನಾಟಕ ರಾಜ್ಯ ಸಮಗಾರ ಹರಳಯ್ಯ(ಚಮ್ಮಾರ)ಸಂಘದ ಅಧ್ಯಕ್ಷ ಜಗದೀಶ ಬೆಟಗೇರಿ, ಜಿಲ್ಲಾ ಡೋಹರ ಕಕ್ಕಯ್ಯ ಸಮಾಜ ಅಧ್ಯಕ್ಷ ಚಂದ್ರ್ಪ ಶೇರಖಾನಿ, ಜಿಲ್ಲಾ ಮಚಿಗಾರ ಸಮಾಜದ ಅಧ್ಯಕ್ಷ ಉಮೇಶ ನರಗುಂದ, ಹಾವೇರಿ ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಮಲ್ಲೇಶಪ್ಪ ಮದ್ಲೇರ ಇತರರು ಉಪಸ್ಥಿತರಿದ್ದರು. ಗುರು ಎಸ್. ಛಲವಾದಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ ಸ್ವಾಗತಿಸಿದರು.