ಲೋಕದರ್ಶನ ವರದಿ
ಬೈಲಹೊಂಗಲ10: ಮಾನವ ಕುಲದ ಉದ್ಧಾರಕ್ಕೆ ಶ್ರಮಿಸಿದ ಕನಕದಾಸರು ನಾಡು ಕಂಡ ಶ್ರೇಷ್ಠ ಸಂತರಾಗಿದ್ದಾರೆ. ಕನಕದಾಸರ ಪದಗಳು ಮಾನವ ಕುಲಕ್ಕೆ ದಾರಿ ದೀಪವಾಗಿವೆ ಎಂದು ತಾಲೂಕಾ ಪಂಚಾಯತ ಸಹಾಯಕ ಅಧಿಕಾರಿ ಸುಭಾಸ ಸಂಪಗಾವಿ ಹೇಳಿದರು.
ತಾಲೂಕಾ ಆಡಳಿತ ಹಾಗೂ ಕನರ್ಾಟಕ ಕುರುಬರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ತಾಲೂಕಾ ಸಭಾಗ್ರಹದಲ್ಲಿ ಇಂದು ಜರುಗಿದ ಶ್ರೇಷ್ಠದಾಸ ಕನಕದಾಸರ 531ನೇ ಜಯಂತೋತ್ಸವ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿ, ಇಡೀ ಮಾನವ ಕುಲದ ಉದ್ಧಾರಕ್ಕೆ ಸದಾ ಶ್ರಮಿಸಿದ ಕನಕದಾಸರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ಇಂದಿನ ಮಕ್ಕಳಿಗೂ ದಾಸರ ತತ್ವಗಳನ್ನು ಹೇಳಬೇಕು. ಅಂದಾಗ ಮಾತ್ರ ಕನಕದಾಸರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದರು.
ಕುರುಬ ಸಮಾಜದ ಮುಖಂಡ ಮಡ್ಡೆಪ್ಪ ಕುರಿ ಮಾತನಾಡಿ ಹಾಲು ಮತ ಶ್ರೇಷ್ಠವಾಗಿದ್ದು ಸಮಾಜದ ಇತಿಹಾಸದಲ್ಲಿ ಒಳ್ಳೆಯ ಕೆಲಸವನ್ನು ಹಾಲು ಮತ ಸಮಾಜ ಮಾಡಿದೆ.
ಈ ಸಮಾಜದಲ್ಲಿ ಅನೇಕ ದಾಸರು, ಸಂತರು, ಶರಣರು, ವೀರರು, ಕವಿಗಳು ಆಗಿದ್ದಾರೆ. ದಾಸ ಪರಂಪರೆಯಲ್ಲಿ ಕನಕದಾಸರು ಮೊದಲಿಗರಾಗಿದ್ದು ಅವರ ತತ್ವಗಳನ್ನಿ ಜೀವನದಲ್ಲಿ ಅಳವಡಿಸಿಕೊಂಡು ಎಲ್ಲರೂ ಒಂದಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕೆಂದು ನುಡಿದರು.
ಬಸವರಾಜ ನೀಲಗಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಿ ಸೇವೆ ಮಾಡಿ ಸಮಾಜದ ಪ್ರಗತಿಗೆ ಶ್ರಮಿಸಬೇಕೆಂದು ನುಡಿದರು.
ಸಾವಿತ್ರಿ ಬಾಯಿ ಪಲೆ ಪ್ರಶಸ್ತಿ ಪಡೆದ ಸತೀಶ ಕಾರಿಮನಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವೇದಿಕೆ ಮೇಲೆ ಉಪತಹಶೀಲ್ದಾರ ಪ್ರಕಾಶ ಕೋರೆ, ಪುಂಡಲೀಕ ಪಟಾತ, ಲಕ್ಷ್ಮಣ ಸೋಮನಟ್ಟಿ, ಮಲ್ಲಮ್ಮ ಬುಡರಕಟ್ಟಿ, ಯಲ್ಲಪ್ಪ ಕರಿಕಟ್ಟಿ, ಬಸಪ್ಪ ಹಳ್ಳೂರ, ಮಾರುತಿ ಶೇರೆಗಾರ ಇದ್ದರು.
ಇದಕ್ಕೂ ಮುನ್ನ ಪಟ್ಟಣದ ಬೀರೇಶ್ವರ ದೇವಸ್ಥಾನದಲ್ಲಿ ಕನಕದಾಸರ ಭಾವ ಚಿತ್ರಕ್ಕೆ ಯುವಧುರೀಣ ಬಸವರಾಜ ಕೌಜಲಗಿ ಪೂಜೆ ಸಲ್ಲಿಸಿ ನಂತರ ಕನಕದಾಸರ ಭವ್ಯ ಮೆರವಣಿಗೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಪುರಸಭೆ ಸದಸ್ಯರಾದ ಬಾಬು ಕುಡಸೋಮನ್ನವರ, ಸದ್ರುದ್ದೀನ ಅತ್ತಾರ, ಡಾ.ಮಹಾಂತೇಶ ಕಳ್ಳಿಬಡ್ಡಿ, ಮಂಜು ಗೋವನಕೊಪ್ಪ, ಬೀರಪ್ಪ ಚಚಡಿ, ಮುದುಕಪ್ಪ ಹೂಲಿ, ಸಿದ್ದಪ್ಪ ಗೋವನಕೊಪ್ಪ, ರಾಯಪ್ಪ ಚಂದರಗಿ, ಈರಪ್ಪ ಕುರಗುಂದ ಹಾಗೂ ಕುರುಬ ಸಮಾಜದ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಸಂಗಮೇಶ ಹುಲಗನ್ನವರ ಸ್ವಾಗತಿಸಿದರು, ಸತೀಶ ಕಾರಿಮನಿ ನಿರೂಪಿಸಿ ವಂದಿಸಿದರು.