ಲೋಕದರ್ಶನವರದಿ
ಶಿಗ್ಗಾಂವ: ಹಿಂದೆ ನಾಲ್ಕು ಗೋಡೆಗಳ ಮದ್ಯ ಬದುಕಿದ್ದ ಮಹಿಳೆಯರು ಇಂದು ಮನೆಕೆಲಸ ನಿಭಾಯಿಸಿಕೊಂಡು ಪುರುಷರಿಗೆ ಸರಿಸಮಾನರಾಗಿ ಎಲ್ಲ ರಂಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರಾಮಾಣಿಕವಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಕಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶರಾದ ಬಾಳಾಸಾಹೇಬ ವಡವಡೆ ಹೇಳಿದರು.
ಪಟ್ಟಣದ ಜಕ್ಕನಕಟ್ಟಿ ರಸ್ತೆಯಲ್ಲಿರುವ ಸ್ತ್ರೀಶಕ್ತಿ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾಧಿಗಳ ಸಂಘ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಇಲಾಖೆ, ಪೋಲೀಸ್ ಇಲಾಖೆ, ಕಂದಾಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ಈಗ ಸಕರ್ಾರಗಳು ಮಹಿಯರಿಗಾಗಿ ಹಲವಾರು ಕಠಿಣ ಕಾನೂನುಗಳನ್ನು ರೂಪಿಸಿದೆ, ಹಾಗೂ ಹಲವಾರು ಮಹಿಳೆಯರಿಗಾಗಿ ಅಭಿವೃದ್ದಿ ಯೋಜನೆಗಳನ್ನು ರೂಪಿಸಿದೆ, ನ್ಯಾಯಾಂಗ ಇಲಾಖೆ ಮಹಿಳೆಯರಿಗೆ ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮ ರೂಪಿಸಿದೆ ಹಾಗೂ ಹಾಗೂ ತಮ್ಮ ಸಮಸ್ಯೆಗಳನ್ನು ಲೀಕ ಅದಾಲತ್ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಿದೆ ಎಂದರು.
ಸಕರ್ಾರಿ ಸಹಾಯಕ ಅಭಿಯೋಜಕರಾದ ಜಿ.ಕೆ ಕುಡರ್ಿಕೇರಿ ಮಾತನಾಡಿ ಇಂದು ಮಹಿಳೆಯರು ಅಭಲೆಯರಲ್ಲ ಸಭಲೆಯರು ಮಹಿಳೆಯರಿಗೆ ಈಗ ಎಲ್ಲ ರಂಗಗಳಲ್ಲಿ ಭಾಗವಹಿಸುವ ಅವಕಾಶವಿದೆ ಆ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಉನ್ನತವಾಗಿ ಬೆಳೆಯಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಿಶು ಅಭಿವೃದ್ದಿ ಯೋಜನಾಧಿಕಾರಿ ಪಿ.ವಾಯ್ ಗಾಜಿನವರ ಮಾತನಾಡಿದ ಮಹಿಳೆಯರು ಹಾಗೂ ಮಕ್ಕಳ ಅಭಿವೃದ್ದಿಗಾಗಿಯೇ ಸಕರ್ಾರ ನಮ್ಮ ಇಲಾಖೆಯನ್ನು ರೂಪಿಸಿದ್ದು ನಾವು ಮಹಿಳೆಯರ ಅಭಿವೃದ್ದಿಗಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.
ತಾಯಂದಿರ ಮತ್ತು ಮಕ್ಕಳ ಅಪೌಷ್ಠ್ಠಿಕತೆಯನ್ನು ಹೋಗಲಾಡಿಸಲು ನಮ್ಮ ಇಲಾಖೆಯಿಂದ ಪೌಷ್ಠಿಕ ಆಹಾರವನ್ನು ನೀಡುತ್ತಿದ್ದು ಇದರಿಂದ ಸದೃಡ ಸಮಾಜ ನಿಮರ್ಾಣವಾಗಲು ಸಹಕಾರಿಯಾಗಿದೆ ಎಂದರು. ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಸಕರ್ಾರ ಮತ್ತು ನ್ಯಾಯಾಂಗ ಕಠಿಣ ಕಾನೂನು ರೂಪಿಸಿದ್ದು ಪೋಸ್ಕೊ ಕಾಯ್ದೆ ಮತ್ತು ಮಹಿಳೆಯರಿಗೆ ಕಾನೂನು ಅರಿವು ಮೂಡಿಸಲು ಕಾನೂನು ಸಲಹೆಗಾರರನ್ನು ನೇಮಿಸಿ ನಮ್ಮ ಇಲಾಖೆ ಮೂಲಕ ಮಹಿಳೆಯರಿಗೆ ದೌರ್ಜನ್ಯ ಘಟನೆಗಳನ್ನು ತಡೆಗಟ್ಟುವ ಅರಿವು ಮೂಡಿಸುತ್ತಿದೆ.
ನ್ಯಾಯವಾದಿಗಳಾದ ಕೆ.ಎನ್.ಭಾರತಿ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ಸುಂದರ ಸಮಾಜ ಕಟ್ಟುವಲ್ಲಿ ಮಹಿಳೆಯರ ಪಾತ್ರ ತುಂಬಾ ಪ್ರಮುಖವಾಗಿದೆ ಎಂದರು.
ಪೋಲಿಸ್ ಇಲಾಖೆಯ ಎ.ಎಸ್.ಆಯ್ ಪೋಲೀಸಗೌಡ್ರ ಮಾತನಾಡಿ ಮಹಿಳೆಯರಿಗಾಗಿಯೇ ಪೋಲಿಸ್ ಇಲಾಖೆಯಲ್ಲಿ ಸಹಾಯವಾಣಿಯನ್ನು ಮಾಡಿದೆ, ಮಹಿಳೆಯರು ಧೈರ್ಯದಿಂದ ಮುಂದೆ ಬಂದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಮೇಲ್ವಿಚಾರಕರು, ಕಾರ್ಯಕತರ್ೆಯರು, ಸಹಾಯಕಿಯರು ಮತ್ತು ಮಹಿಳೆಯರು ಉಪಸ್ಥಿತರಿದ್ದರು. ನ್ಯಾಯವಾದಿ ಪಿ.ಪಿ ಹೊಂಡದಕಟ್ಟಿ, ಕಾರ್ಯಕ್ರಮ ನಿರೂಪಿಸಿದರು, ಜಯಶ್ರೀ ವಂದಿಸಿದರು.