ಒಂದಾಗಿ ಕೂಡಿ ಬಾಳುವ ಮೌಲ್ಯ ಕ್ರೀಡೆಯಲ್ಲಿದೆ: ಯೋಗಿನಿ ಅಕ್ಕನವರು

ಲೋಕದರ್ಶನ ವರದಿ

ಕೊಪ್ಪಳ: ಕ್ರೀಡೆ ದೇಶಭಕ್ತಿಯನ್ನು ಬೆಳೆಸುತ್ತದೆ, ಒಂದಾಗಿ ಕೂಡಿ ಬಾಳುವ ಮೌಲ್ಯ ಕ್ರೀಡೆಯಲ್ಲಿ ಇದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಯೋಗಿನಿ ಅಕ್ಕನವರು ಹೇಳಿದರು. 

ನಗರದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಮಂಗಳವಾರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕ್ರೀಡೆ ಮನುಷ್ಯನ ಜೀವನದಲ್ಲಿ ಆರೋಗ್ಯ, ಉತ್ಸಾಹವನ್ನು ತಂದು ಕೊಡುವ ಸಾಧನ, ಕ್ರೀಡೆ ಸ್ವಯಂ ಹಾಗೂ ಅನ್ನರನ್ನು ಖುಷಿ ಪಡಿಸುತ್ತದೆ. 

ಒಬ್ಬ ಸಮರ್ಥ ಕ್ರೀಡಾಪಟು ಆಗಲು ಅವನು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸದೃಢನಾಗಿರಬೇಕು. ಕ್ರೀಡೆಯಲ್ಲಿ ಯಶಸ್ವಿಯಾಗಲು ಸೂಕ್ತ ತರಬೇತಿ ಎಷ್ಟು ಮುಖ್ಯವೋ ಹಾಗೆಯೇ ಮಾನಸಿಕವಾಗಿ ಆಂತರಿಕವಾಗಿ ಧೈರ್ಯ, ಸಾಹಸ ಸಕರಾತ್ಮಕತೆ, ಆತ್ಮವಿಸ್ವಾಸ ಬೆಳೆಯಲು ಮೆಡಿಟೇಶನ ತರಬೇತಿ ಬಹಳ ಮುಖ್ಯ ಎಂದರು. ಯಾರು ಸೋಲು ಗೆಲುವುಗಳನ್ನು ಸುಖ-ದುಃಖವನ್ನು ಸಮಾನವಾಗಿ ಸ್ವೀಕರಿಸುತ್ತಾನೆಯೋ ಅವನೇ ಆದರ್ಶ ಕ್ರೀಡಾಪಟು, ಕ್ರೀಡೆಯಲ್ಲಿ ಯಶಸ್ವಿಯಾಗಲು ನಿರಂತರವಾದ ಅವಿಶ್ರಾಂತ ಪ್ರಯತ್ನ ಬಹಳ ಮುಖ್ಯ ಎಂದರು.

ಎನ್ ಎಸ್ ಎಸ್ ಸ್ಕೌಟ್ಸ್ ಮತ್ತು ಗೌಡ್ಸ್ ದೈಹಿಕ ನಿದರ್ೇಶಕಿ ಶೋಭಾ ಮಾತನಾಡಿ, ವ್ಯಕ್ತಿತ್ವ ವಿಕಸನ ಹೊಂದಲು ಕ್ರೀಡೆ ಸಹಕಾರಿ, ವಿದ್ಯಾಥರ್ಿಗಳು ಪಠ್ಯೇತ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು. ವಾಣಿಜ್ಯ ವಿಭಾಗದ ಪ್ರಾಧ್ಯಾಪಕರರಾದ ಪಾಟೀಲ್ ನಟರಾಜ, ಮಾರುತೇಶ ವೇದಿಕೆ ಮೇಲೆ ಉಪಸ್ಥಿತರಿದ್ದರು.  

ಸಂತೋಷ ಬಿಲ್ಲರ ನಿರೂಪಿಸಿದರು. ನಿಂಗಪ್ಪ ಮಜ್ಜಿಗೆ ಪ್ರಾಥರ್ಿಸಿದರು. ಶಿವಾಜಿ ಸ್ವಾಗತಿಸಿದರು. ಶಿವು ವಂದನ್ನರ್ಪಣೆ ಮಾಡಿದರು. ವಿದ್ಯಾಥರ್ಿ-ವಿದ್ಯಾಥರ್ಿನಿಯರು ಮತ್ತಿತರರು ಉಪಸ್ಥಿತರಿದ್ದರು.