ಲೋಕದರ್ಶನ ವರದಿ
ಬ್ಯಾಡಗಿ06: ಹಣ ಕೊಟ್ಟರೂ ನೀರು ಸಿಗುತ್ತಿಲ್ಲ, ಕುಡಿಯುವ ನೀರಿನ ಶಾಶ್ವತ ಸಮಸ್ಯೆಗೆ ಅಂತಿಮ ಪರಿಹಾರವೇ ಕೆರೆಗಳಿಗೆ ನೀರು ತುಂಬಿಸುವುದು, ಹೀಗಿದ್ದೂ ಸಹ ತಾವು ಜವಾಬ್ದಾರಿಯುತ ಅಧಿಕಾರಿಗಳಾಗಿ ಅಗತ್ಯ ಕ್ರಮ ಕೈಗೊಳ್ಳದೇ ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ..? ಕೂಡಲೇ ಕೆರೆ ಒತ್ತುವರಿ ತೆರವುಗೊಳಿಸಿ ಫೀಡರ್ ಕ್ಯಾನಲ್ಗಳಲ್ಲಿ ಸರಾಗವಾಗಿ ನೀರು ಹರಿಯುವಂತೆ ನೋಡಿಕೊಳ್ಳಲು ತಾ.ಪಂ.ಇಓ ಅಬಿದ್ ಗದ್ಯಾಳ್ ಸಣ್ಣ ನೀರಾವರಿ ಅಧಿಕಾರಿಗೆ ತಾಕೀತು ಮಾಡಿದ ಘಟನೆ ಶನಿವಾರ ತಾಪಂ ಸಭಾಭವನದಲ್ಲಿ ಜರುಗಿದ ಕೆಡಿಪಿ ಸಭೆಯಲ್ಲಿ ನಡೆಯಿತು.
ಬರುವ ಬೇಸಿಗೆಯಲ್ಲಿ ನೀರಿನ ಸಮಸ್ಯೆ ನಿಭಾಯಿಸಲು ಹರಸಾಹಸಪಡಬೇಕಾಗಿದೆ, ಬೇಸಿಗೆಗೂ ಮುನ್ನವೇ ತಾಲೂಕಿನ ಅರ್ಧದಷ್ಟು ಗ್ರಾಮಗಳು ನೀರಿನ ಸಮಸ್ಯೆಯಲ್ಲಿ ಮುಳುಗಿವೆ, ಮಳೆಗಾಲ ಬರಲು ಕನಿಷ್ಟ 6 ತಿಂಗಳು ಕಾಲಾವಕಾಶ ಬೇಕು ಅಲ್ಲಿಯವರೆಗೂ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವುದು ಹೇಗೆ..? ಎಂಬ ಚಿಂತೆಯಲ್ಲಿದ್ದೇವೆ ಅಂತಹುದರಲ್ಲಿ ಕೆರೆಗಳಿಗೆ ನೀರು ಸರಾಗವಾಗಿ ಹೋಗುವಂತೆ ನೋಡಿಕೊಳ್ಳಬೇಕಾದ ತಾವು ಸವರ್ೆ ಅಧಿಕಾರಿಗಳ ಮೇಲೆ ಹೇಳಿಕೊಂಡು ತಿರುಗಾಡುತ್ತಿರುವುದು ತಮ್ಮ ಸ್ಥಾನಕ್ಕೆ ತಕ್ಕುದಲ್ಲ ಎಂದರು.
ಆರೋಗ್ಯ ಕೊಡುವುದರೊಳಗೆ ಬಡವರ ಹೆಣ ಬೀಳುತ್ತೆ: ಸಕರ್ಾರ ಬಡವರಿಗಾಗಿ ಹೆಲ್ತ ಕಾರ್ಡ ಸೌಲಭ್ಯವನ್ನು ಪ್ರಕಟಿಸಿದೆ ಆದರೆ ಆರೋಗ್ಯಾಧಿಕಾರಿಗಳಿಂದ ಇಂದಿಗೂ ಯಾವೊಬ್ಬ ರೋಗಿಗೂ ಇದನ್ನು ಒದಗಿಸಿಲ್ಲ, ಕೇಳಿದರೆ ಇಲ್ಲಸಲ್ಲದ ಕಾರಣಗಳನ್ನು ಹೇಳುತ್ತೀರಿ, ಸಕರ್ಾರದ ಮಹತ್ವಾಕಾಂಕ್ಷಿ ಯೋಜನೆ ಆರೋಗ್ಯ ಕನರ್ಾಟಕ, ಆಯುಷ್ಮಾನುಭವ ಯೋಜನೆಗೆ ಇಲ್ಲಿಯವರೆಗೂ ಕಾರ್ಡಗಳನ್ನು ನೀಡುತ್ತಿಲ್ಲವೇಕೆ..? ಹಾಗಿದ್ದರೇ ಬಡವರು ಯೋಜನೆಯ ಲಾಭ ಪಡೆದುಕೊಳ್ಳಬಾರದೇ..? ಇಲ್ಲಿಯವರೆಗೂ ಆಸ್ಪತ್ರೆಯಲ್ಲಿ ಎಷ್ಟು ಕಾರ್ಡಗಳನ್ನು ನೀಡಿದ್ದೀರಿ ಎಂದು ಆರೋಗ್ಯ ಇಲಾಖೆ ಕುರಿತ ಚಚರ್ೆಯ ಸಂದರ್ಭದಲ್ಲಿ ತಾಪಂ.ಅಧ್ಯಕ್ಷೆ ಸವಿತಾ ಸುತ್ತಕೋಟಿ ಬಿಗಿಪಟ್ಟು ಹಿಡಿದರು.
ಹಣ ಕೇಳುತ್ತೀರಂತೆ: ತಾಲೂಕಾಸ್ಪತ್ರೆಯಲ್ಲಿ ಗಭರ್ಿಣಿಯರಿಗೆ ಶಸ್ತ್ರ ಚಿಕಿತ್ಸೆ (ಸಿಸೇರಿಯನ್) ಮಾಡಿಸಲು ವೈದ್ಯರು 5 ಸಾವಿರ ರೂಗಳಿಗೆ ಬೇಡಿಕೆ ಇಡುತ್ತಿರುವ ಆರೋಪವಿದೆ, ಸಂತ್ರಸ್ಥೆಯ ಸಂಬಂಧಿಕರು ದೂರು ನೀಡಲು ನನ್ನ ಬಳಿಯೇ ಬಂದಿದ್ದರು, ಬಡವರಿಗೆ ಉಚಿತವಾಗಿ ಸೀಗಬೇಕಾದ ಸೌಲಭ್ಯಗಳಿಗೂ ಹಣ ಪೀಕುವಂತಹ ಹೀನ ಸ್ಥಿತಿಗೆ ಇಳಿದಿರುವ ವೈದ್ಯರ ಬಗ್ಗೆ ತಾಲೂಕಾ ವೈದ್ಯಾಧಿಕಾರಿಯಾಗಿ ತಾವು ಯಾವ ಕ್ರಮ ಕೈಗೊಂಡಿದ್ದೀರಿ..? ಎಂದು ಸವಿತಾ ಸುತ್ತಕೋಟಿ ಪ್ರಶ್ನಿಸಿದರು.
ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಶೀಥಿಲಾವಸ್ಥೆ ತಲುಪಿ ಮಕ್ಕಳ ಜೀವಕ್ಕೆ ಸಂಚಕಾರ ತಂದೊಡ್ಡು ತ್ತಿದೆ, ಆದರೆ ಶಾಲಾ ಕಟ್ಟಡವನ್ನು ಇಲ್ಲಿಯವರೆಗೂ ನೆಲಸಮಗೊಳಿಸಿಲ್ಲ, ಗ್ರಾಮಸ್ಥರು ಮುಖ್ಯಮಂತ್ರಿಗಳ ಬಳಿ ಈ ಕುರಿತು ಮೌಖಿಕವಾಗಿ ಮನವಿ ಮಾಡಿಕೊಂ ಡಿದ್ದಾರೆ, ಕಳೆದ ಹಲವಾರು ವರ್ಷಗಳಿಂದ ಇರುವ ಸಮಸ್ಯೆಗೆ ಇಲ್ಲಿಯವರೆಗೂ ಪರಿಹಾರವೇಕೆ ಸಿಕ್ಕಿಲ್ಲ ಎಂದು ಶಿಕ್ಷಣಾಧಿಕಾರಿ ಎಂ.ಮಂಜುನಾಥಸ್ವಾಮಿ ಅವರನ್ನು ಟಿಇಓ ಗದ್ಯಾಳ ಪ್ರಶ್ನಿಸಿದರು.
ಭಾಗ್ಯಲಕ್ಷ್ಮೀ ಬಾಂಡ್ ವಿತರಣೆಯಾಗಿಲ್ಲ: ಕಳೆದ 2016 ರಿಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಸರಕಾರ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ ಮಾಡಿಲ್ಲ ಈ ಕುರಿತಂತೆ ಸಾರ್ವಜನಿಕರು ಗೊಂದಲಕ್ಕೀಡಾಗಿದ್ದು ಕೂಡಲೇ ಸಮಸ್ಯೆಯನ್ನು ಬಗೆಹರಿಸುವಂತೆ ಉಪಾಧ್ಯಕ್ಷ ಶಾಂತಮ್ಮ ದೇಸಾಯಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಡಿಪಿಓ ವಿಜಯಕುಮಾರ ಮಾತನಾಡಿ, ಭಾಗ್ಯಲಕ್ಷ್ಮೀ ಬಾಂಡ್ ವಿತರಣೆಯಲ್ಲಿ ಕೆಲ ಮಾಪರ್ಾಡುಗಳನ್ನು ಮಾಡಲು ನಿರ್ಧರಿಸಿದ್ದು, ಈಗಿನ ರೂ.2 ರಿಂದ 4 ಲಕ್ಷಕ್ಕೆ ಏರಿಸುವ ಚಿಂತನೆ ನಡೆಸುತ್ತಿದ್ದು ಹೀಗಾಗಿ ವಿಳಂಬವಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.