ಲೋಕದರ್ಶನ ವರದಿ
ಗದಗ 23: ಪ್ರತಿಯೊಬ್ಬರಿಗೂ ಉಣ್ಣುವ ಹಕ್ಕಿದೆ ಆದರೆ, ಚೆಲ್ಲುವ ಹಕ್ಕಿಲ್ಲ ಎಂದು ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಎಸ್.ಸಂಗ್ರೇಶಿ ಅವರು ಹೇಳಿದರು.
ನಗರದ ಹಳೆ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಅನ್ನಪೂರ್ಣಶ್ವರಿ ಪ್ರಸಾದ ನಿಲಯದಲ್ಲಿ 914 ನೇ ದಿನದ ಪ್ರಸಾದಸೇವೆ ಹಾಗೂ ಬಸವರಾಜ ಬಳ್ಳಾರಿ ಅವರ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಅನ್ನಪೂಣರ್ೇಶ್ವರಿ ಪ್ರಸಾದ ನಿಲಯದ ಸಹಯೋಗದಲ್ಲಿ ಕಾನೂನು ಅರಿವು-ನೆರವು ಹಾಗೂ ಪ್ರಸಾದ ನಿಲಯದ "ವೆಬ್ಸೈಟ್ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನ್ನಪ್ರಸಾದ ಸೇವೆಯನ್ನು ದೇವರು ಮೆಚ್ಚಿಕೊಳ್ಳುತ್ತಾನೆ. ಸಂಘಟಿಕರು ಹಸಿದವರಿಗೆ ನಿರಂತರವಾಗಿ ಅನ್ನ ನೀಡುತ್ತಿರುವುದು ಸ್ವಾಗತಾರ್ಹವಾಗಿದೆ. ಅಲ್ಲದೆ ಇನ್ನೂ ಅಚ್ಚುಕಟ್ಟಾಗಿ ಪ್ರಸಾದ ವಿತರಣೆ ಕೆಲಸ ಮಾಡಬೇಕು ಹಾಗೂ ಪ್ರಸಾದ ಸೇವನೆ ಮಾಡುವರು ಸ್ವಚ್ಚತೆ ಕಾಪಾಡಿಕೊಳ್ಳಬೇಕು ಎಂದು ನ್ಯಾ. ಜಿ.ಎಸ್.ಸಂಗ್ರೇಶಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಕಾರ್ಯದಶರ್ಿ ರೇಣುಕಾ ಕುಲಕಣರ್ಿ ಅವರು ಮಾತನಾಡಿ, ಅನ್ನಪೂಣರ್ೇಶ್ವರಿ ಪ್ರಸಾದ ನಿಲಯದ ಕಲ್ಪನೆ ಸಾಕಾರಗೊಂಡಿರುವದರಿಂದ ಇಲ್ಲಿನ ಬಡವರಿಗೆ, ಮಹಿಳೆಯರಿಗೆ ಹಾಗೂ ವಿಕಲಾಂಗರಿಗೆ ಸಾಕಷ್ಟು ಅನುಕೂಲವಾಗಿದೆ. ಪ್ರತಿದಿನ ಕೆಲಸಕಾರ್ಯಕ್ಕಾಗಿ ನಗರಕ್ಕೆ ಆಗಮಿಸಿ ಜನತೆ ಊಟ ಉಪಹಾರಕ್ಕೆ ನೂರಾರು ರೂಗಳನ್ನು ಖಚರ್ು ಮಾಡುತ್ತಾರೆ. ಇಲ್ಲಿ ಬರಿ 5 ರೂ.ಗಳಿಗೆ ಹೊಟ್ಟೆತುಂಬಾ ಊಟ ಸಿಗುತ್ತಿರುವದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಿದೆ. ವಾಷರ್ಿಕ ಆದಾಯ ಒಂದುವರೇ ಲಕ್ಷ ರೂ.ಹೊಂದಿದವರಿಗೆ ಉಚಿತವಾಗಿ ಕಾನೂನು ನೆರವು ನೀಡುವ ಯೋಜನೆಯಿದೆ. ಸರಕಾರ ಆ ವೆಚ್ಚವನ್ನು ಭರಿಸುವದರಿಂದ ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಹಿಳೆಯರು, ಮಕ್ಕಳು ಹಾಗೂ ಕಾಮರ್ಿಕರ ಬಗ್ಗೆ ಇರುವ ಕಾನುನುಗಳನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ ಎಂದು ನ್ಯಾ.ರೇಣುಕಾ ಕುಲಕಣರ್ಿ ಅವರು ಹೇಳಿದರು.
ನಿವೃತ್ತ ನ್ಯಾಯಾದೀಶ ಎಸ್.ಜಿ.ಪಲ್ಲೇದ, ಸರಕಾರ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜೀಕರ್, ಹಿಂದುಳಿದ ವರ್ಗಗಳ ತಾಲ್ಲೂಕಾಧಿಕಾರಿ ಬಸವರಾಜ ಬಳ್ಳಾರಿ, ವಿಜಯಕುಮಾರ ಭಗವತಿ ಅವರು ಮಾತನಾಡಿದರು.
ನಿಲಯದ ಕಾರ್ಯದಶರ್ಿ ಅಮರೀಶ ಉಮಚಗಿ ಸ್ವಾಗತಿಸಿದರು. ಕಾಯರ್ಾಧ್ಯಕ್ಷ ಮಂಜುನಾಥ ಬಮ್ಮನಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ಎಸ್.ಎಸ್.ಕಳಸಾಪೂರ ಅವರು ವಂದಿಸಿದರು.
ವರದಾ, ಸುಖೇಶ, ಗಾಣಗೇರ, ನಾಯ್ಕರ, ಸುಭಧ್ರಕ್ಕ ನೀಲಪ್ಪನವರ, ಶೈಲಜಾ ಕೋಡಿಹಳ್ಳಿ, ಮರಿಗುದ್ದಿ, ಪೂಜಾರ, ಯಶೋಧಾ ಬಮ್ಮನಕಟ್ಟಿ, ಗೀತಾ ಉಮಚಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.