ಸಾವಯವ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಕಾಪಾಡಲು ಸಾಧ್ಯ: ಪಾಟೀಲ

ಗೋಕಾಕ 06: ಸಮಗ್ರ ಪೋಷಕಾಂಶಗಳ ನಿರ್ವಹಣೆ ಹಾಗೂ ನೀರಿನ ಮಿತವ್ಯಯ ಬಳಕೆ, ಅನಾದಿ ಕಾಲದಿಂದ ಹಿರಿಯರು ಉಳಿಸಿದ ಜಮೀನಿನ ಮಣ್ಣನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬಡ್ರ್ಸ ಕೆ.ವಿ.ಕೆ  ಚೇರಮನ್ನ ಆರ್.ಎಮ್.ಪಾಟೀಲ ಹೇಳಿದರು.

ಅವರು ನಗರದಲ್ಲಿ ಕೃಷಿ ಇಲಾಖೆಯ ಕಾಯರ್ಾಲಯದಲ್ಲಿ ಕೃಷಿ ಇಲಾಖೆ ಆತ್ಮ ಯೋಜನೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ತುಕ್ಕಾನಟ್ಟಿ ಇವರ ಸಹಯೋಗದಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

 ಮಣ್ಣು ಸತ್ವ ಕಳೆದುಕೊಂಡರೇ ನಮ್ಮ ಸತ್ವ ಉಳಿದೀತೇ? ಪರಿಸರ ಉಳಿಸಿ ಸಾವಯವ ಗೊಬ್ಬರ  ಬಳಕೆ ಮಾಡಿದಾಗ ಸುಸ್ಥಿರ ಅಭಿವೃದ್ಧಿ ಸಾದ್ಯ ಜೊತೆಗೆ ನಿಸರ್ಗದ ನಿಯಮ ಪಾಲಿಸಿ ಪಾಟೀಲ ಎಂದು ಕರೆ ನೀಡಿದರು. 

ಕಾರ್ಯಕ್ರಮದ ಸಂಯೋಜಕ ಡಿ.ಸಿ.ಚೌಗಲಾ ಅವರು ಮಾತನಾಡಿ ರೈತರು ಕಾಲ ಕಾಲಕ್ಕೆ ತಮ್ಮ ಜಮೀನಿನ ಮಣ್ಣು ಪರೀಕ್ಷೆಯನ್ನು ಕೈಗೊಂಡು ಮಣ್ಣಿನ ಆರೋಗ್ಯವನ್ನು ಕಾಪಾಡಿ ಹಾಗೂ ಅತಿಯಾದ ರಾಸಾಯನಿಕಗಳಿಂದ ಮಣ್ಣು ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದೆ ಮಿತಿಮೀರಿದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ನಾಶ ತಪ್ಪಿಸಿ ವಿಷ ಮುಕ್ತ ಆಹಾರ ನೀಡಿ ಎಂದು ರೈತರಿಗೆ ಸಲಹೆ ನೀಡಿದರು.

       ಕೃಷಿ ಅಧಿಕಾರಿ ಲೀಲಾ ಕೌಜಗೇರಿ ಅವರು ಮಾತನಾಡಿ ಮಣ್ಣು ನೈಸಗರ್ಿಕ ಪರಿಸರದ ಒಂದು ಘಟಕ. ಅತಿಯಾದ ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಒಳಸುರಿಗಳನ್ನು ಅಳವಡಿಸಿ ಆರೋಗ್ಯಯುತವಾದ ಬೆಳೆ ಬೆಳೆಯಬಹುದು. ಮಣ್ಣು ಪ್ರದéೂಷಣೆ  ಪರಿಸರ  ಮಾಲಿನ್ಯ ತಡೆಯುವ ಕಾರ್ಯ ನಮ್ಮ ಮನೆ ಕಛೇರಿ ಹಾಗೂ ಸುತ್ತ ಮುತ್ತಲಿನ ಪರಿಸರ ಸ್ವಚ್ಛತೆಯಿಂದ ಆರಂಭಗೊಳ್ಳಲಿ. ಇದನ್ನು ಡಿಸೆಂಬರ 5ಕ್ಕೆ ಅಷ್ಟೆ ಸೀಮಿತಗೊಳಿಸದೆ ದಿನ ನಿತ್ಯ ಅಳವಡಿಸಿದಲ್ಲಿ ಪರಿಸರಕ್ಕೆ ಒಂದು ಕೊಡುಗೆ ನೀಡಿದಂತೆ ಎಂದರು.  

ಕೃಷಿ ವಿಜ್ಞಾನ ಕೇಂದ್ರದ ಎನ್.ಆರ್.ಸಾಲಿಮಠ ವಿಜ್ಞಾನಿಗಳು  ಮಣ್ಣು ಆರೋಗ್ಯ ಪರೀಕ್ಷೆ  ಹಾಗೂ  ಮಣ್ಣು ಮಾದರಿಗಳ ಸಂಗ್ರಹಣೆ, ಕೇಂದ್ರ ಸಕರ್ಾರದ ಮಣ್ಣು ಆರೋಗ್ಯ ಚೀಟಿ ಯೋಜನೆ ಕುರಿತು ಉಪನ್ಯಾಸ ನೀಡಿದರು ಮತ್ತು ಎಮ್.ಎನ್.ಮಳವಡೆ ಸಮಗ್ರ ಬೆಳೆ ಹಾಗೂ ಸಾವಯವ ಕೃಷಿ ಅಳವಡಿಕೆ ಕುರಿತು ಉಪನ್ಯಾಸ ನೀಡಿದರು.

      ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳು, ಆತ್ಮ ಸಿಬ್ಬಂದಿ ಹಾಜರಿದ್ದರು.  

      ರೇಖಾ ಕಾರಭಾರಿ ಸ್ವಾಗತಿಸಿದರು.  ಛಾಯಾ  ಪಾಟೀಲ ನಿರೂಪಿಸಿದರು. ಎಚ್.ಕೆ.ಜಮಾದಾರ  ವಂದಿಸಿದರು.