ಸಾಹಿತ್ಯಿಕ ಮೂಲಾಧಾರಗಳ ಮಹತ್ವ ಬಹಳಷ್ಟಿದೆ :ಡಾ. ಮೂತರ್ಿ

ಬೆಳಗಾವಿ : ಆಧುನಿಕ ಭಾರತದ ಇತಿಹಾಸವನ್ನು ಅಧ್ಯಯನ ಮಾಡುವಾಗ ಸಾಹಿತ್ಯಿಕ ಮೂಲಾಧಾರಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಎಲ್.ಎನ್.ಮೂತರ್ಿ ತಿಳಿಸಿದರು.

ಸೋಮವಾರ ನಗರದ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಇತಿಹಾಸ ಕೂಟದಿಂದ ಆಯೋಜಿಸಿದ್ದ 'ಆಧುನಿಕ ಭಾರತದ ಇತಿಹಾಸದಲ್ಲಿ ಸಾಹಿತ್ಯಿಕ ಮೂಲಾಧಾರಗಳ ಮಹತ್ವದ' ಕುರಿತು ಆಯೋಜಿಸಿದ್ದ ಅತಿಥಿ ಉಪನ್ಯಾಸದಲ್ಲಿ ಅವರು ಮಾತನಾಡಿ. ಆಧುನಿಕ ಭಾರತದ ಸಾಹಿತ್ಯಿಕ ಮೂಲಾಧಾರಗಳ ಆಕರಗಳು ಹಾಗೂ ಆಂಗ್ಲ ಭಾಷೆಯಲ್ಲಿರುವ ಮೂಲ ಆಕರಗಳ ವಸ್ತುನಿಷ್ಠವಾಗಿ ಪರಿಚಯಿಸಿದರು ಹಾಗೂ ಪ್ರಸ್ತೂತ ಕನ್ನಡ ಮಾದ್ಯಮ ಇತಿಹಾಸ ಗ್ರಂಥಗಳ ಅಪರಿಪೂರ್ಣತೆಯನ್ನು ವಿಶ್ಲೇಷಿಸಿದರು.

ಈ ಸಂದರ್ಭದಲ್ಲಿ ಅಪೂವರ್ಾ ಹೂಗಾರ ಸ್ವಾಗತಿಸಿದರು, ಡಾ.ಸಿ.ಬಿ.ಕಮತಿ ಅತಿಥಿಗಳನ್ನು ಪರಿಚಯಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು ಶ್ರೀಧರ ಬಾಳೇಕುಂದರಗಿ ವಂದಿಸಿದರು. ಪ್ರೊ.ರಾಜೇಂದ್ರ ಮಾಳಿ ಹಾಗೂ ಪ್ರೊ.ಪ್ರಶಾಂತ ಕೊನ್ನುರ ಕಾರ್ಯಕ್ರಮವನ್ನು ಸಂಘಟಿಸಿದರು.