ಸೇವೆಯೆಂದರೆ ಬರಿ ವೇತನಕ್ಕಾಗಿ ಕೆಲಸಮಾಡುವುದಲ್ಲ: ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಶಿವಪ್ಪ

ಲೋಕದರ್ಶನ ವರದಿ 

ಕಾರಟಗಿ 18:    ಗ್ರಾಹಕರೇ ನಮ್ಮ ಬಂಧು ಬಳಗ  ನಾವು ಕಾರ್ಯ ನಿರ್ವಹಿಸುವ ಸಂಸ್ಥೆಯೆ  ನಮ್ಮ ಜೀವನೊಪಾಯಕ್ಕೆ ಅನ್ನ ನೀಡುವ  ದೇವರು ಎಂದು ವರ್ಗಾವಣೆಗೊಂಡ  ಮರ್ಲಾನಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಕೆ. ಶಿವಪ್ಪ ಹೇಳಿದರು.  

ಸಮೀಪದ ಮರ್ಲಾನಹಳ್ಳಿ ಶಾಖೆಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಇಲ್ಲಿಂದ ವರ್ಗಾ ವಣೆಗೊಂಡ ಹಿನ್ನೆಲೆಯಲ್ಲಿ ಶಾಖೆವತಿಯಿಂದ ಹಮ್ಮಿಕೊಂಡ ಬೀಳ್ಕೊಡುವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಶಾಖೆಯ ಸಿಬ್ಬಂದಿ ಹಾಗೂ ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿದ ಅವರು   ಸೇವೆಯೆಂದರೆ ಬರಿ ವೇತನಕ್ಕಾಗಿ  ಕೇಲಸಮಾಡುವುದಲ್ಲ. ಮತ್ತು ನಮ್ಮ ಜೀವನೊಪಾಯಕ್ಕಾಗಿ  ಕೆಲಸಮಾಡುವುದಲ್ಲ ಅದರ ಬದಲಾಗಿ  ಸಂಸ್ಥೆಯ ಅಭಿವೃದ್ಧಿ ಗ್ರಾಹಕರ  ಅನುಕೂಲಕ್ಕೆ ಅನುಗೂಣವಾಗಿ  ಸೇವೆ ಮಾಡಿದಾಗ ನಾವು ವೇತನ ಪಡೆದದ್ದು ಸಾರ್ಥಕವಾಗುತ್ತದೆ. ಮಲರ್ಾನಹಳ್ಳಿ ಶಾಕೆಗೆ  ವರ್ಗಾವಣೆಗೊಂಡು ಬಂದು 3 ವರ್ಷ ಕಾರ್ಯ ನಿರ್ವಹಿಸಿದ್ದೆನೆ ಗ್ರಾಮದ ಸಾರ್ವಜನಿಕರು, ಮುಖಂಡರು, ಶಾಖೆಯ ಗ್ರಾಹಕರು, ಸಿಬ್ಬಂದಿ ಒಳ್ಳೆಯ ಸಹಕಾರ ನೀಡಿದ್ದಾರೆ ಅದೇರೀತಿಯಾಗಿ ಮುಂದೆ ಬರುವ ಅಧಿಕಾರಿಗಳಿಗೂ ಕೂಡ ಇದೇ ಸಹಾಯ ಸಹಕಾರ ನೀಡಿ ಸಂಸ್ಥೆಯ ಪ್ರಗತಿಗೆ ಕಾರಣಿಭೂತರಾಗಬೇಕು ಎಂದರು.  ವಲಯ ಅಧಿಕಾರಿ ವಿಕ್ರಮ್ ಮಾತನಾಡಿ  ವರ್ಗಾವಣೆಗೊಂಡಿರುವ ನಮ್ಮ ವ್ಯವಸ್ಥಾಪಕರಾದ ಶಿವಪ್ಪನವರು ಇಲ್ಲಿಂದ ವಗರ್ಾವಣೆಗೊಂಡಿರುವುದು ನಮಗೆಲ್ಲ ಸ್ವಲ್ಪ ಬೇಸರ ತಂದಿದೆ  ವರ್ಗಾವಣೆ  ಅನಿವಾರ್ಯ ಅದರೆ ಇಲಾಖೆಯ ಆದೇಶ ಪಾಲಿಸಬೇಕು ಶಿವಪ್ಪನವರು ಯಾವುದೆ ಶಾಖೆಯಲ್ಲಿ ಕೆಲಸ ನಿರ್ವಹಿಸದರು ಒಳ್ಳೆಯ ಕೆಲಸಮಾಡುವ ಮೂಲಕ ಜನಮನ್ನಣೆ ಪಡೆದವರು.  ಶಾಖೆಯ ನಮ್ಮೆಲ್ಲ ಸಿಬ್ಬಂದಿ ವರ್ಗಕ್ಕೆ ಹಿರಿಯರಾಗಿ ಒಳ್ಳೆಯ ಮಾರ್ಗದರ್ಶಕ ರಾಗಿದ್ದರು ಆದರೆ ಅವರ ವರ್ಗಾ ವಣೆಯಿಂದ  ಹಿರಿಯರ ಮತ್ತು ಮಾರ್ಗದರ್ಶಕರ ಕೊರತೆ ಕಾಣಬಹುದು.  ಶಾಖೆಯ ಅಭಿವೃದ್ದಿಗೆ ಇನ್ನು ಹೆಚ್ಚು ಕಾಲ ಸೇವೆ ಸಲ್ಲಿಸಲಿ ಎಂದರು. 

ಇದಕ್ಕೂ ಮುಂಚೆ ಶಾಖೆಯ ಸಿಬ್ಬಂದಿ ಹಾಗೂ ಗ್ರಾಹಕರು  ವರ್ಗಾವಣೆಗೊಂಡ ವ್ಯವಸ್ಥಾಪಕರಾದ ಕೆ. ಶಿವಪ್ಪನವರಿಗೆ  ಶಾಲು ಹೊದಿಸಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿ ಬಿಳ್ಕೊಟ್ಟರು. ಈ ಸಂದರ್ಭದಲ್ಲಿ  ಸಂಸ್ಥೆಯ ಸಿಬ್ಬಂದಿಗಳಾದ ಸಂತೋಷ್  ವಿಜಯಕುಮಾರ, ಸದಾಶಿವಯ್ಯ ಸ್ವಾಮಿ, ಬ್ಯಾಂಕ್ ಮಿತ್ರ ಅಮರಪ್ಪ ಕುರಿ, ಗ್ರಾಮಸ್ಥರಾದ ವಿರೇಶ ಬಡಿಗೇರ, ದುರಗೇಶ ನಾಯಕ, ಸೇರಿದಂತೆ ಮತ್ತಿತರರು ಇದ್ದರು.