ದೇಶದ ಜನತೆಯ ಭಾವನೆಗೆ ಧಕ್ಕೆಯಾಗಿದೆ ಅವರು ಈ ದೇಶದ ಜನತೆಗೆ ಖರ್ಗೆ ಕ್ಷಮೆ ಕೇಳಲಿ: ವಿಶ್ವೇಶ್ವರ ಹೆಗಡೆ ಕಾಗೇರಿ
ಮುಂಡಗೋಡ 29 : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರ ಅಹವಾಲು ಆಲಿಸಿ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಉತ್ತರ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅದ್ಭುತವಾದ ವ್ಯವಸ್ಥೆಯನ್ನು ಮಾಡಿದ್ದಾರೆ. ಭಾರತದ ಸನಾತನ ಧರ್ಮದ ಯಾವೂದೆ ಬೇಧಬಾವ ತಾರತಮ್ಯವಿಲ್ಲದೆ ಎಲ್ಲರು ಒಂದಾಗಿ ಜೀವನದ ಪುಣ್ಯಗಳಿಗೆ ಎಂದು ನದಿಯಲ್ಲಿ ಸ್ನಾನ ಮಾಡುತ್ತಿದ್ದಾರೆ. ಮಹಾಕುಂಭ ಮೇಳದ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿರುವುದನ್ನು ನಾನು ಖಂಡಿಸುತ್ತೇನೆ. ಖರ್ಗೆಯವರು ಭಾರತೀಯರ ಕ್ಷಮೆ ಕೇಳಬೇಕು ಎಂದು ಆಗ್ರಹಿಸುತ್ತೇನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ್ದರು. ಕೇವಲ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮತಗಳಿಕೆಗಾಗಿ ಈ ದೇಶದ ಬಹುಸಂಖ್ಯಾತ ಹಿಂದೂಗಳ ಭಾವನೆ ದಿಕ್ಕರಿಸುವುದು ಕಾಂಗ್ರೇಸ್ ರಾಜಕಾರಣದ ಕುತಂತ್ರಗಾರಿಕೆ,ಖರ್ಗೆಯವರು ಮಹಾಕುಂಭಮೇಳದ ಬಗ್ಗೆ ಮಾತನಾಡಿರುವುದು ಈ ದೇಶದ ಜನತೆಯ ಭಾವನೆಗೆ ಧಕ್ಕೆಯಾಗಿದೆ. ಅವರು ಈ ದೇಶದ ಜನತೆಯ ಕ್ಷಮೆ ಕೇಳಬೇಕು ಎಂದು ನಾನು ಆಗ್ರಹಿಸುತ್ತೇನೆ ಎಂದರು. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಅನ್ನುವ ಶಬ್ದವೆ ಮರೆತು ಹೋಗಿದೆ. ಕೆವಲ ಜಗಳವನ್ನು ಹಾಗೂ ಜನರಲ್ಲಿ ಗೊಂದಲ ಹಾಗೂ ಬೇಧ ಭಾವವನ್ನು ನಿರ್ಮಿಸಿ ತಮ್ಮ ಸ್ವಾರ್ಥದ ರಾಜಕಾರಣ ನಡೆಸುತ್ತಿದ್ದಾರೆ. ರಾಜ್ಯದ ಮಾನ ಮರ್ಯಾದೆಯನ್ನು ಸಿದ್ದರಾಮಯ್ಯನವರು ಹಾಗೂ ಕಾಂಗ್ರೆಸ್ನವರು ದೇಶಮಟ್ಟದಲ್ಲಿ ಮರ್ಯಾದೆ ಕಳೆಯುತ್ತಿದ್ದಾರೆ.ಈ ಯಶಸ್ಸನ್ನು ಕಂಡ ಕಾಂಗ್ರೆಸ್ ಪಕ್ಷದವರು ಇಲ್ಲ ಸಲ್ಲದ ಮಾತುಗಳನ್ನು ಹಗುರವಾಗಿ ಬೇಜಬ್ದಾರಿಯಿಂದ ಮಾತನಾಡುವುದನ್ನು ನಾನು ಸಂಸದನಾಗಿ ಖಂಡಿಸುತ್ತೇನೆ. ಕಾಂಗ್ರೆಸ್ಗೆ ಯಾವತ್ತು ಭಾರತ ದೇಶದ ಬಹುಸಂಖ್ಯಾತ ಹಿಂದುಗಳ ಭಾವನೆಯನ್ನು ಗೌರವಿಸ ಗೊತ್ತಿಲ್ಲ ಅದಕ್ಕಾಗಿ ರಾಮಮಂದಿರ ನಿರ್ಮಾಣಕ್ಕೆ ಮೋದಿ ಬರಬೇಕಾಯಿತು. ಭಾರತವೂ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವುದು ಕಾಂಗ್ರೆಸ್ಗೆ ಬೇಕಾಗಿಲ್ಲ, ಭಾರತವೂ ಬಡತನದಲ್ಲಿಯೆ ಮುಂದುವರೆಯಬೇಕು, ರೈತರು ಬಡವರು ಹಾಗೆ ಇರಬೇಕು ಎಂದು ಅವರು ಸ್ವಾತಂತ್ರದ ನಂತರ ನಡೆಸಿಕೊಂಡು ಹಲವು ದಶಕಗಳ ಕಾಲ ಬಂದಿದ್ದಾರೆ. ಈ ವೇಳೆ ಬಿಜೆಪಿ ಮಂಡಳ ಅಧ್ಯಕ್ಷ ಮಂಜುನಾಥ ಪಾಟೀಲ, ಮುಖಂಡ ಎಲ್.ಟಿ.ಪಾಟೀಲ, ಸಿ.ಕೆ.ಅಶೋಕ, ಪಿ.ಜಿ.ತಂಗಚ್ಚನ್, ಕೃಷ್ಣ ಭರತ್ನಳ್ಳಿ, ಅಶೋಕ ಚಲವಾದಿ, ವಿನಾಯಕ ರಾಯ್ಕರ, ಮಂಜುನಾಥ್ ಹೋತನಳ್ಳಿ ಶ್ರೀಕಾಂತ ಸಾನು, ಡಿ.ಎಫ್. ಮಡ್ಡಿ, ಮಹೇಶ ಹೊಸಕೊಪ್ಪ, ಗುರು ಕಾಮತ್, ದೇವೇಂದ್ರ ಕೆಂಜೋಣ್ಣವರ, ಮಂಜುನಾಥ ನಡಗೇರಿ ಸೇರಿದಂತೆ ಉಪಸ್ಥಿತರಿದ್ದರು.