ಬಾಗಲಕೋಟೆ 05: ಜಿಲ್ಲೆಯ ಹಿರಿಯ ನಾಗರಿಕರು ಹೊತ್ತು ತಂದ ಸಮಸ್ಯೆಗಳನ್ನು ಆಲಿಸುವ ಮೂಲಕ ಅವುಗಳಿಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜರುಗಿದ ಹಿರಿಯ ನಾಗರಿಕರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹಿರಿಯ ನಾಗರಿಕರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು ಈ ಸಭೆಯನ್ನು ನಡೆಸಲಾಗುತ್ತಿದ್ದು, ಈ ಸಭೆಯಲ್ಲಿ ತಮಗೆ ಆಗುವ ತೊಂದರೆ ಹಾಗೂ ಸಮಸ್ಯೆಗಳನ್ನು ತಿಳಿಸಿದಲ್ಲಿ ಅದಕ್ಕೆ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು.
ಸರಕಾರ ಹಿರಿಯ ನಾಗರಿಕರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಆ ಯೋಜನೆಗಳು ಜಿಲ್ಲೆಯ ಹಿರಿಯ ನಾಗರಿಕರಿಗೆ ತಲುಪಿಸುವ ಕೆಲಸ ಮಾಡುವುದಾಗಿ ತಿಳಿಸಿದಿ ಮಾನಕರ ಅವರು ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಜನ ಹಿರಿಯ ನಾಗರಿಕರು ಶಿಕ್ಷಣ ಪಡೆಯದವರು ಇದ್ದಾರೆ. ಅವರಿಗೆ ಶಿಕ್ಷಣ ನೀಡುವ ಸಲುವಾಗಿ ರಾತ್ರಿ ಶಾಲೆ ತೆರೆಯುವುದಾಗಿ ತಿಳಿಸಿದರು. ಶಿಕ್ಷಣದ ಜೊತೆಗೆ ಸ್ವಚ್ಛತೆ ಹಾಗೂ ಶೌಚಾಲಯಗಳ ಬಳಕೆ ಕುರಿತು ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸರಕಾರ ಜಾರಿಗೆ ತಂದ ಯೋಜನೆಗಳು ಜಿಲ್ಲೆಯ ಹಿರಿಯ ನಾಗರಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಹಿರಿಯ ನಾಗರಿಕರ ಸಂಪೂರ್ಣ ಮಾಹಿತಿ ದಾಖಲಿಸುವ ಸಲುವಾಗಿ ಸವರ್ೆ ಕಾರ್ಯ ನಡೆಸಲಾಗುವುದೆಂದರು. ಸರಕಾರ ಹಿರಿಯ ನಾಗರಿಕರಿಗಾಗಿ ವೃದ್ದಾಶ್ರಮ, ಹಗಲು ಯೋಗಕ್ಷೇಮ ಕೇಂದ್ರ, ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಬಸ್ ಪ್ರಯಾಣದಲ್ಲಿ ರಿಯಾಯಿತಿ ಸೇರಿದಂತೆ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ 2007ನ್ನು ಸಹ ಜಾರಿಗೆ ತಂದಿದೆ ಎಂದರು. ಸಭೆಯಲ್ಲಿ ಮುಖ್ಯವಾಗಿ ವೃದ್ದಾಪ್ಯ ವೇತನ ಹಾಗೂ ಇನ್ಸೂರನ್ಸ್ಗಳ ಸಮಸ್ಯೆಗಳನ್ನು ಮುಂದಿಟ್ಟರು.
ಕುಂದುಕೊರತೆ ಸಭೆಯಲ್ಲಿ ಆಸ್ತಿ ತೇರಿಗೆ ಮೇಲೆ ರಿಯಾಯಿತಿ, ಉಚಿತ ಸಹಾಯವಾಣಿ ಚುರುಕುಗೊಳಿಸುವುದು, ವಾಷರ್ಿಕ 5 ಲಕ್ಷ ಉತ್ಪನ್ನಗಳ ಮೇಲು ತೆರಿಗೆ ವಿನಾಯಿತಿ, ಪ್ರಾಥಮಿಕ ಪಠ್ಯ ಪುಸ್ತಕದಲ್ಲಿ ಹಿರಿಯ ಪ್ರೀತಿ, ವಾಸ್ತವ್ಯ ಹಾಗೂ ಗೌರವ ನೀಡುವ ಪಾಠ ಬೋದನೆ, ಉದ್ಯಾನವನ, ವಿದ್ಯುತ್, ದೂರವಾಣಿ ಸೇರಿದಂತೆ ಇತರೆ ಬಿಲ್ಲುಗಳನ್ನು ಮನೆ ಮನೆಗೆ ಬಂದು ತುಂಬಿಸಿಕೊಳ್ಳುವ ವ್ಯವಸ್ಥೆ, ವಿವಿಧ ಇಲಾಖೆಯ ಕಚೇರಿಗಳಲ್ಲಿ ಹಿರಿಯ ನಾಗರಿಕರ ಕಡತಗಳ ತುತರ್ು ವಿಲೇವಾರಿ ಸೇರಿದಂತೆ ಇತರೆ ಬೇಟಿಕೆಗಳನ್ನು ಬೀಳಗಿಯ ಕುಲಕಣರ್ಿ ಮುಂದಿಟ್ಟರೆ, ಬೆಳಗಲಿಯವರು ಜಿಲ್ಲೆಗೆ ಒಂದರಂತೆ ವೃದ್ದಾಶ್ರಮ ತೆರೆದ ಹಾಗೆ ತಾಲೂಕಾ ಕೇಂದ್ರಗಳಲ್ಲಿ ತಲಾ ಒಂದು ವೃದ್ದಾಶ್ರಮ ತೆರೆಯುವಂತೆ ಬೇಡಿಕೆಗಳನ್ನು ಇಟ್ಟರು.
ಸಾಮಾಜಿಕ ಆರೋಗ್ಯ ಮತ್ತು ಸಾಮಾಜಿಕ ಮೌಲ್ಯ ಕಾಪಾಡುವ ನಿಟ್ಟಿನಲ್ಲಿ ಹಿರಿಯ ನಾಗರಿಕರ ವೇದಿಕೆ ಮೂಲಕ ಮಾಡಲಾಗುತ್ತಿದೆ. ವ್ಯಸನಮುಕ್ತ ಸಮಾಜ ನಿಮರ್ಾಣದಂತಹ ಕಾರ್ಯ ಮಾಡಿ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ಮುಧೋಳ ತಾಲೂಕಿನ ಶಿರೋಳ ಗ್ರಾಮದ ಹಿರಿಯ ನಾಗರಿಕರು ಸಭೆಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರ ಭವನ ನಿಮರ್ಾಣದ ಬೇಡಿಕೆಯನ್ನು ಇಟ್ಟರು. ಸಭೆಯಲ್ಲಿ ಜಿಲ್ಲಾ ಅಂಕವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ ಸೇರಿದಂತೆ ವಿವಿಧ ತಾಲೂಕಿನಿಂದ ಆಗಮಿಸಿದ ಹಿರಿಯ ನಾಗರಿಕರು ಉಪಸ್ಥಿತರಿದ್ದರು.