ಲೋಕದರ್ಶನ ವರದಿ
ಹರಪನಹಳ್ಳಿ 13: ಭಾರತದ ಸಂವಿಧಾನದ ಬದ್ದವಾಗಿ ಕಾಯರ್ಾಂಗ, ನ್ಯಾಯಾಂಗ, ಶಾಸಕಾಂಗ ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ, ಪ್ರಜಾಪ್ರಭುತ್ವ ಭಾರತದಲ್ಲಿ ಮೊದಲು ಪ್ರಜೆಗಳ ಪಾತ್ರವನ್ನು ತಿಳಿಯಬೇಕಾಗುತ್ತದೆ, ದೇಶದ ಯುವ ಪೀಳಿಗೆ ರಾಹುಲ್ ಗಾಂಧಿಯ ಕನಸಿನ ಭಾರತದ ನಿಮರ್ಾಣಕ್ಕಾಗಿ ಯುವ ಜನತೆ, ಕಾಂಗ್ರೇಸ್ ಪಕ್ಷಕ್ಕೆ ಸದಸ್ಯತ್ವ ಮಾಡಿಸಿಕೊಳ್ಳಿ ಎಂದು ಕಾಂಗ್ರೇಸ್ ಪಕ್ಷದ ನಾಯಕಿ ಎಂ.ಪಿ. ಲತಾ ಮಲ್ಲಿಕಾಜರ್ುನಯ್ಯ ತಿಳಿಸಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ, ಎನ್.ಎಸ್.ಯು.ಐ ನ ಸಹಯೋಗದಲ್ಲಿ ಆಯೋಜಿಸಿದ್ದ ಉತ್ತಮ ಭಾರತ್, ವಿದ್ಯಾಥರ್ಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶಾಂತಿದೂತ ಬುದ್ಧನ ಪ್ರತಿಮೆಯನ್ನು ಅನಾವರಣ ಮಾಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಉತ್ತಮ ಭಾರತದ ನಿಮರ್ಾಣಕ್ಕಾಗಿ ವಿದ್ಯಾಥರ್ಿಗಳಲ್ಲಿ ಜಾಗೃತಿ ಮೂಡಿಸು ನಿಟ್ಟಿನಲ್ಲಿ ನಾವು ಪದವಿ ಕಾಲೇಜಿಗೆ ಬಂದಿದ್ದೇವೆ. ಹರಪನಹಳ್ಳಿ ರಾಜಕೀಯ ಕ್ಷೇತ್ರದಲ್ಲಿ ಯುವ ಮಹಿಳೆಯರ ಸಂಖ್ಯೆ ಕಡಿಮೆ ಇದೆ, ಆಗಾಗಿ ವಿದ್ಯಾಥರ್ಿನಿಯರು ರಾಜಕೀಯ ಇಚ್ಚೆ ಇದ್ರೆ ನಮ್ಮ ಪಕ್ಷಕ್ಕೆ ಬನ್ನಿ ಎಂದು ಪದವಿ ಕಾಲೇಜಿನ ಯುವತಿಯರಿಗೆ ಕರೆ ಕೊಟ್ಟರು. ಯುವ ಪೀಳಿಗೆ ರಾಹುಲ್ ಗಾಂಧಿ ಆಸೆಯಂತೆ ಉತ್ತಮ ಭಾರತ ನಿಮರ್ಾಣ, ಬೆಹತರ್ ಭಾರತ್, ಎಂಬ ಪರಿಕಲ್ಪನೆಯೊಂದಿಗೆ, ಪಕ್ಷ ಸಂಘಟಿಸಲು ಹರಪನಹಳ್ಳಿಯಲ್ಲಿ "ರವಿ ಯುವ ಶಕ್ತಿ" ಎಂಬ ನೂತನ ಸಂಘಟನೆ ಮೂಲಕ ಯುವಕರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಮೂಲಕ ರವಿ ಯುವ ಶಕ್ತಿಗೆ ಕಾರಣಿಬೂತರಾಗಿ ಎಂದು ಕಾಲೇಜಿನ ವಿದ್ಯಾಥರ್ಿಗಳಿಗೆ ಸಲಹೆ ನೀಡಿದರು.
ಎನ್.ಎಸ್.ಯು.ಐ ನ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಸಿದ್ದು ಹಳ್ಳೇಗೌಡ್ರು ಮಾತನಾಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯುವ ಸಮೂಹ ಭಾರತ ನಿಮರ್ಾಣಕ್ಕಾಗಿ ಕೈಜೋಡಿಸಿ ಯುವ ಶಕ್ತಿ ಮಹನೀಯರ ಸಾಧನೆಗಳಿಂದ ಪ್ರೇರಣೆಗೊಂಡು ನವ ಭಾರತ ನಿಮರ್ಾಣಕ್ಕೆ ತಮ್ಮನ್ನು ತಾವು ಸಮಪರ್ಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಜಿಲ್ಲಾ ಕಾರ್ಯದಶರ್ಿಯಾದ ಎಂ.ವಿ. ಅಂಜಿನಪ್ಪ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಎನ್.ಎಸ್.ಯು.ಐ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದಶರ್ಿಯಾದ ಎಂ.ಡಿ. ಜೀಶಾನ್, ತಾಲ್ಲೂಕು ಅಧ್ಯಕ್ಷ ಎಂ.ಡಿ. ಶ್ರೀಕಾಂತ್, ಪುರಸಭೆ ಸದಸ್ಯರು ಹಾಗೂ ಸ.ಪ್ರ.ಕಾಲೇಜಿನ ಆಡಳಿತ ಮಂಡಳಿಯ ನಿದರ್ೇಶಕರಾದ ಅರುಣ್ ಪೂಜಾರ್, ಇನ್ನೊಬ್ಬ ನಿದರ್ೇಶಕರಾದ ಸಖರ್ಾವಾಸ್, ಎಲ್. ಮಂಜನಾಯ್ಕ, ಹರಪನಹಳ್ಳಿ ವಾಗೀಶ್, ಸೆಮಿವುಲ್ಲಾ, ನೀಲಗುಂದದ ಬಿ. ವಾಗೀಶ್, ಬೋವಿ ಮಂಜುನಾಥ್, ಕೆ.ಬಸವರಾಜು, ಮತ್ತಿತರರು ಇದ್ದರು.