ಲೋಕದರ್ಶನ ವರದಿ
ಚಿಕ್ಕೋಡಿ 14: ಯುವಜನತೆ ನವಭಾರತ ನಿಮರ್ಾಣದ ಮಹಾನ ಕಾರ್ಯದಲ್ಲಿ ಕಟಬದ್ಧರಾಗಿ ಟೊಂಕ ಕಟ್ಟಿದಲ್ಲಿ ಮಾತ್ರ ಆ ವೀರ ಸನ್ಯಾಸಿಗೆ ಅದು ನಾವು ಅಪರ್ಿಸುವ ಪುಷ್ಪಾಂಜಲಿಯಾಗುತ್ತದೆ ಸ್ವಾಮಿ ವಿವೇಕಾನಂದರ ಅಮೃತವಾಣಿಯನ್ನು ಅರ್ಥ ಮಾಡಿಕೂಂಡಲ್ಲಿ ಖಂಡಿತ ನಮ್ಮ ಯುವಶಕ್ತಿ ಎದ್ದು ನಿಂತು ಗುರಿ ಮುಟ್ಟುವ ತನಕ ನಿಲ್ಲದೆ ಇಡೀ ಜಗತ್ತನ್ನೆ ಗೆಲ್ಲುವಂತಹ ಶಕ್ತಿ ನಮಗೆ ದೊರೆಯುತ್ತದೆ ರಾಷ್ಟ್ರ ನಿಮರ್ಾಣದಲ್ಲಿ ಯುವ ಜನತೆ ಪಾತ್ರ ಬಹು ಮುಖ್ಯವಾಗಿದೆ ಯುವಕರು ಒಳ್ಳ್ಳೆಯ ಶಿಕ್ಷಣ ಪಡೆದು ಸಮಾಜ ಮುಖಿಯಾಗಿ ಕಾರ್ಯ ಮಾಡಬೇಕೆದು ರಾಷ್ಟ್ರಪ್ರಶಸ್ತಿ ವಿಜೇತ ಭರತ ಕಲಾಚಂದ್ರ ಯುವಕರಿಗೆ ಕರೆ ನೀಡಿದರು.
ಅವರು ಕಳೆದ ದಿ. 12 ರಂದು ಚಿಕ್ಕೋಡಿಯಲ್ಲಿ ಭಾರತ ಸರಕಾರದ ನೆಹರು ಯುವ ಕೇಂದ್ರ ಬೆಳಗಾವಿ ಅಂಬೇಡ್ಕರ ಕಲಾ ಮತ್ತು ಕ್ರೀಡಾ ಯುವಕ ಮಂಡಳ ಮಾಂಜರಿ ರಾಜ್ಯ ಯುವ ಸಂಘಗಳ ಒಕ್ಕೂಟ ಚಿಕ್ಕೋಡಿ ಘಟಕ ಚಿಕ್ಕೋಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ ಸಿಟಿಇ ಸಂಸ್ಥೆಯ ಕಲಾ ವಾಣಿಜ್ಯ ಪದವಿ ಮಹಾವಿದ್ಯಾಲಯ ಹಾಗೂ ವಿವಿಧ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಂಡಿದ ದಿವ್ಯ ಚೇತನ ಸ್ವಾಮಿ ವಿವೇಕಾನಂದರ 156ನೇ ಜನ್ಮ ದಿನಾಚಾರಣೆ ಅಂಗವಾಗಿ ರಾಷ್ಟೀಯ ಯುವದಿನ ಹಾಗೂ ಯುವ ಸಪ್ತಾಹ ಸಸಿಗೆ ನೀರು ಹಾಕುವ ಮುಲಕ ಉದ್ಘಾಟಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರ ಆದರ್ಶ ಹಾಗೂ ತತ್ವಗಳನ ಇವತ್ತಿನ ಯುವ ಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ನೆಹರು ಯುವ ಕೇಂದ್ರದ ಕಾರ್ಯಕ್ರಮ ಯೋಜನಾಧಿಕಾರಿಗಳಾದ ಎಮ್ ವಿಕಾಸ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಆರ್ ಎಸ್ ಕೋಕಣಿ ವಹಿಸಿದ್ದರು. ವೇದಿಕೆ ಮೇಲೆ ಎಸ್ ಎಮ್ ಪಾಟೀಲ ಯುವ ಪರಿರ್ವತಕರಾದ ಅಜರ್ುರುದ್ದಿ ಶೇಖ ರಾಜ್ಯ ಯುವ ಸಂಘಗಳ ಒಕ್ಕೂಟದ ತಾಲೂಕಾ ಘಟಕದ ಅಧ್ಯಕ್ಷ ರಾಘವೇಂದ್ರ ಲಂಬುಗೋಳ ಪ್ರಕಾಶ ಪೂಜಾರಿ ಹಾಗೂ ಉಪನ್ಯಾಸಕ/ ಉಪನ್ಯಾಸಕಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸತ್ಯವಾ ಶಿರಗನ್ನವರ ಪ್ರಗತಿ ಕಾಂಬಳೆ ಪ್ರಾಥನಾ ಗೀತೆಯನ್ನು ಹಾಡಿದರು. ಕಾರ್ಯಕ್ರಮವನ್ನು ದೀಪಾಲಿ ದಡ್ಡೆ ನಿರೂಪಿಸಿ ಅಶ್ವೀನಿ ಮಾಳಿ ಸ್ವಾಗತಿಸಿ ರಾಕೇಶ ಹೀರಿಕೂಡಿ ವಂದಿಸಿದರು.