ಗದಗ 25: ದೇಶದ ಅಭಿವೃದ್ಧಿಯಾಗಬೇಕೆಂದರೆ ಮೊದಲು ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಈ ದೇಶದ ಸಂಪತ್ತು ಮಕ್ಕಳು, ಪ್ರತಿಯೊಬ್ಬ ಮಗುವಿಗೂ ಉತ್ತಮ ಶಿಕ್ಷಣವನ್ನು ನೀಡುವ ಜವಾಬ್ಧಾರಿ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ. ಆದ ಕಾರಣ ಮಕ್ಕಳ ಸವರ್ಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮುಖ್ಯವಾದದು ಎಂದು ಜಿಲ್ಲಾಧಿಕಾರಿ ಎಂ. ಜಿ ಹಿರೇಮಠ ಅವರು ಹೇಳಿದರು.
ಅವರು ಗದಗ ಜಿಲ್ಲಾ ಪಂಚಾಯತಿ ಸಭಾಭವನಲ್ಲಿಂದು ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಿಆರ್ಟಿ, ಯುನಿಸೆಫ್ಆಸರೆ ಅಂಗವಿಕಲರ ಕ್ಷೇಮಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಶಿರಹಟ್ಟಿ ಹಾಗೂ ಶ್ರೀ ರಾಮಕೃಷ್ಣ ಸೇವಾ ಫೌಂಡೇಶನ್ ಇವರುಗಳ ಸಂಯುಕ್ತಾಶ್ರಯಲ್ಲಿ ಜರುಗಿದ "ಕಲ್ಪನೆಯಿಂದ ಸಾಧ್ಯತೆಯಡೆಗೆ, ಮಕ್ಕಳ ಹಕ್ಕುಗಳು ತರಬೇತಿ" ಸುಸ್ಥಿರ ಅಭಿವೃದ್ಧಿ ಗುರಿಗಳು 2030 ಕಾರ್ಯಕ್ರಮದಡಿ ಸಾಮಥ್ರ್ಯ ವರ್ಧನಾ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ ಮಾತನಾಡಿ, ಮಕ್ಕಳು ತಳಮಟ್ಟದಿಂದಲೇ ಅಂದರೆ ಮೊದಲು ತಂದೆ, ತಾಯಿ, ಕುಟುಂಬ ಹಾಗೂ ಸಮುದಾಯದ ಮೂಲಕ ಅಲ್ಲದೇ ಶಾಲೆಯಲ್ಲಿ ಶಿಕ್ಷಕರ ಉತ್ತಮ ಮಾರ್ಗದರ್ಶನ, ಗುಣಮಟ್ಟದ ಶಿಕ್ಷಣದ ಮೂಲಕ ಪ್ರತೀಯೊಬ್ಬ ಮಕ್ಕಳ ಭವಿಷ್ಯ ಅಡಗಿದ್ದು, ಕಾರಣ ಪ್ರತೀಯೊಬ್ಬ ಶಿಕ್ಷಕರೂ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮುಂದಾಗಬೇಕು. ಮೊದಲು 14 ವರ್ಷದೊಳಗಿನವರಿಗೆ ಮಾತ್ರ ಮಕ್ಕಳೆಂದು ಪರಿಗಣಿಸಲಾಗುತ್ತಿತ್ತು, ಈಗ 18 ವರ್ಷದೊಳಗಿನ ಮಕ್ಕಳನ್ನೂ ಸಹ ಮಕ್ಕಳೆಂದು ಪರಿಗಣಿಸಲಾಗಿದೆ. ಮಕ್ಕಳ ಹಕ್ಕುಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಯಾವುದೇ ರೀತಿಯ ತಾರತಮ್ಯ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು ಹಾಗೂ ಈ ಕಾಯರ್ಾಗಾರವನ್ನು ಸಂಪೂರ್ಣವಾಗಿ ತಿಳಿದುಕೊಂಡು ಮಕ್ಕಳ ಭವಿಷ್ಯದಡೆಗೆ ಶ್ರಮ ವಹಿಸಬೇಕು ಎಂದು ತಿಳಿಸಿದರು.
ಮಕ್ಕಳ ಕಲ್ಯಾಣ ಸಮಿತಿ ಸದಸ್ಯ, ಪತ್ರಕರ್ತ ಎಂ.ಮಂಜುನಾಥ ಬಮ್ಮನಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ದೇಶದ ಒಟ್ಟು ಜನಸಂಖ್ಯೆಗೆ ಅನುಗುಣವಾಗಿ ಶೇ% 40 ಪ್ರತಿಶತ ಮಕ್ಕಳಿದ್ದಾರೆ, ಆ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಆರೋಗ್ಯ ಹಾಗೂ ಸವರ್ಾಂಗೀಣ ಅಭಿವೃದ್ದಿಯಾಗಬೇಕಾಗಿದೆ. ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾಯರ್ಾಗಾರವನ್ನು ಹಮ್ಮಿಕೊಂಡಿದ್ದು ಇದರ ಸದುಪಯೋಗವನ್ನು ಇಲ್ಲಿ ಹಾಜರಾದ ಪ್ರತಿಯೊಬ್ಬರು ಪಡೆದುಕೊಂಡು, ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಶ್ರಮ ವಹಿಸಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸಿಆರ್ಟಿ ಬೆಂಗಳೂರಿನ ಸತೀಶ್ ಜೆ ಸಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಜೆ.ಎಲ್ ಬಾರಾಟಕ್ಕೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಎಂ.ಡಿ. ಹೊಸಳ್ಳಿ, ಆಸರೆ ಸಂಸ್ಥೆಯ ಕಾರ್ಯದಶರ್ಿ ಶಶಿಧರ ಶಿರಸಂಗಿ ಸ್ವಾಗತಿಸಿದರು. ವಂದನಾರ್ಪಣೆಯನ್ನು ಆಸರೆ ಅಂಗವಿಕಲರ ಸಂಸ್ಥೆಯ ಅಧ್ಯಕ್ಷ ಫಕ್ಕೀರೇಶ ಮ್ಯಾಟಣ್ಣವರ ನೆರವೇರಿಸಿದರು. ತರಬೇತಿಯಲ್ಲಿ ಜಿಲ್ಲೆಯ ಸಕರ್ಾರಿ ಪ್ರೌಢಶಾಲೆಯ 120ಕ್ಕೂ ಹೆಚ್ಚು ಮುಖ್ಯೋಪಾಧ್ಯಯರು ಪಾಲ್ಗೊಂಡಿದ್ದರು.