ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸುವಲ್ಲಿ ಶಾಲೆಗಳ ಪಾತ್ರ ಬಹು ಮುಖ್ಯ: ಡಿಗ್ರಜ

ರಾಯಬಾಗ 10: ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸುವಲ್ಲಿ ಶಾಲೆಗಳ ಪಾತ್ರ ಬಹು ಮುಖ್ಯವಾದದ್ದು, ಮಕ್ಕಳಿಗೆ ಕ್ರೀಡಾಭಿರುಚಿ ತುಂಬುವಂತಹ ಕಾರ್ಯಕ್ರಮಗಳನ್ನು ನಡೆಸಬೇಕೆಂದು ತಾಲೂಕು ದೈಹಿಕ ಶಿಕ್ಷಣ ಸಂಯೋಜಕ ಡಿ.ಎಸ್.ಡಿಗ್ರಜ ಹೇಳಿದರು.  

ಇತ್ತಿಚೆಗೆ ಪಟ್ಟಣದ ಮಹಾವೀರ ಆಂಗ್ಲ ಮಾಧ್ಯಮ ವಸತಿ ಶಾಲೆಯ ಮೈದಾನದಲ್ಲಿ ಸಿ. ಬಿ. ಎಸ್. ಇ. ಶಾಲೆಗಳ ಅಂತರ ಶಾಲೆಗಳ ಕ್ರೀಡಾಕೂಟದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

 ಖೋಖೋ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಪಡೆದುಕೊಂಡಿರುವ ತಾಲೂಕಿನ ಮಾವಿನಹೊಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿನಿ ಬಾಗವ್ವಾ ಯರಗಟ್ಟಿ ಇವಳನ್ನು ಮಹಾವೀರ ಆಂಗ್ಲ ಮಾಧ್ಯಮ ವಸತಿ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. 

ಕ್ರೀಡಾಕೂಟದಲ್ಲಿ ಮಹಾವೀರ ಆಂಗ್ಲ ಮಾಧ್ಯಮ ವಸತಿ ಶಾಲೆಯ ವಿದ್ಯಾಥರ್ಿಗಳು ಪ್ರಥಮ ಹಾಗು ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡು ಶಾಲೆಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡರು.  

ಲಕ್ಷ್ಮೀಸೇನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಿ.ಎಮ್.ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯ ವಸುಮತಿ ಶಿಂಧೆ, ದೈಹಿಕ ಶಿಕ್ಷಣ ಶಿಕ್ಷಕ ಬಿ.ಬಿ. ಮುನ್ನೋಳ್ಳಿ, ವಿನೋದ ಪಾಟೀಲ ಇದ್ದರು.