ಮಕ್ಕಳ ಹಕ್ಕುಗಳ ಅನುಷ್ಠಾನಕ್ಕೆ ವಸತಿ ನಿಲಯ ವಾರ್ಡನಗಳ ಪಾತ್ರ ಪ್ರಮುಖ: ಶ್ರೀನಿವಾಸ್

ಕೊಪ್ಪಳ 12: ಕೊಪ್ಪಳ ಮಕ್ಕಳ ಹಕ್ಕುಗಳ ಅನುಷ್ಠಾನಕ್ಕೆ ವಸತಿ ನಿಲಯಗಳ ವಾರ್ಡನಗಳ ಹಾಗೂ ಪಾಲನಾ ಕೇಂದ್ರಗಳ ಮುಖ್ಯಸ್ಥರ ಪಾತ್ರ ಪ್ರಮುಖವಾದದ್ದು ಎಂದು ಕೊಪ್ಪಳ ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಟಿ. ಶ್ರೀನಿವಾಸ ಅವರು ಹೇಳಿದರು.   

ಕನರ್ಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಕೊಪ್ಪಳ ಜಿಲ್ಲಾಡಳಿತ,  ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಇವರ ಸಹಯೋಗದಲ್ಲಿ "ಮಕ್ಕಳ ಸುರಕ್ಷತೆ ಮತ್ತು ರಕ್ಷಣಾ ನೀತಿ"ಯ ಅನುಷ್ಠಾನ ಕುರಿತು ವಸತಿ ನಿಲಯಗಳ ವಾರ್ಡನ್ಗಳಿಗೆ ಪಾಲನಾ ಕೇಂದ್ರಗಳ ಮುಖ್ಯಸ್ಥರುಗಳಿಗೆ ಜಿ.ಪಂ. ಜೆ.ಎಚ್. ಪಟೇಲ್, ಸಭಾಂಗಣದಲ್ಲಿ ಮಂಗಳವಾರದಂದು ಆಯೋಜಿಸಲಾದ ಒಂದು ದಿನದ  ಕಾಯರ್ಾಗಾರ ಉದ್ಘಾಟಿಸಿ ಅವರು ಮಾತನಾಡಿದರು.  

ಸಕರ್ಾರವು ರಾಜ್ಯದ ಪ್ರತಿ ಮಗುವು ಸುರಕ್ಷಿತ, ರಕ್ಷಣಾತ್ಮಾಕ ಮತ್ತು ಸಶಕ್ತ ಪರಿಸರದಲ್ಲಿ ಬೆಳೆಯುವದರೊಂದಿಗೆ, ಮಗುವಿನ ಸವರ್ಾಂಗೀಣ ಅಭಿವೃದ್ಧಿಗೆ ಹಾಗೂ ಮಗುವು ತನ್ನ ಸಾಮಥ್ರ್ಯವನ್ನು ತಲುಪಲು ಅವಕಾಶಗಳನ್ನು ಒದಗಿಸುತ್ತಿದೆ.  ಮಕ್ಕಳು ತಮ್ಮ ಹಕ್ಕುಗಳನ್ನು ಅನುಭವಿಸಲು ಮತ್ತು ಆನಂದಿಸಲು ಅನುಕೂಲಕರವಾದ ಪರಿಸರವನ್ನು ನಿಮರ್ಿಸಲು ರಾಜ್ಯದಲ್ಲಿನ ಎಲ್ಲಾ ಭಾಗೀದಾರರು ಅಂದರೆ, ಪೋಷಕರು, ಆರೈಕೆ ಸೇವೆಗಳನ್ನು ನೀಡುವವರು ಮತ್ತು ಸಮುದಾಯ ಒಟ್ಟುಗೂಡಿ ಕೆಲಸ ಮಾಡುವದರೊಂದಿಗೆ ಮಕ್ಕಳ ಕುರಿತಾದ ತಾರತಮ್ಯಗಳನ್ನು ನಿವಾರಿಸುವ ಹಾಗೂ ಮಕ್ಕಳ ಭಾಗವಹಿಸುವಿಕೆ ಸಂಭಾಷಣೆ ಮತ್ತು ಅಭಿಪ್ರಾಯಗಳನ್ನು ಗೌರವಿಸುವದರೊಂದಿಗೆ ಮಗುವಿನ ಘನತೆಯನ್ನು ಎತ್ತಿ ಹಿಡಿಯುವದಕ್ಕಾಗಿ, ಮಕ್ಕಳ ಹಕ್ಕುಗಳ ಅನುಷ್ಠಾನಾಧಿಕಾರಿಗಳಲ್ಲಿ ಒಬ್ಬರಾದ ವಸತಿ ನಿಲಯಗಳ ವಾರ್ಡನಗಳಿಗೆ ಹಾಗೂ ಪಾಲನಾ ಕೇಂದ್ರಗಳ ಮುಖ್ಯಸ್ಥರುಗಳಿಗೆ ಈ ತರಬೇತಿ ಕಾಯರ್ಾಗಾರವನ್ನು ಆಯೋಜಿಸಿದೆ.  ತಮ್ಮ ವಸತಿ ನಿಲಯಗಳನ್ನು ಮಕ್ಕಳ ಸ್ನೇಹಿವಸತಿ ನಿಲಯಗಳನ್ನಾಗಿಸುವ ಮತ್ತು ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ, ವಸತಿ ನಿಲಯಗಳ ವಾರ್ಡನಗಳಿಗೆ ಸಂವೇದನಶೀಲರನ್ನಾಗಿಸಲು ಈ ತರಬೇತಿ ಕಾಯರ್ಾಗಾರವನ್ನು ಆಯೋಜಿಸಿದ್ದು, ಈ ಕಾಯರ್ಾಗಾರದ ಸದುಪಯೋಗವನ್ನು ಪಡೆದುಕೊಂಡು ಕಾರ್ಯನಿರ್ವಹಿಸಬೇಕು ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಟಿ. ಶ್ರೀನಿವಾಸ ಅವರು ಹೇಳಿದರು.   

ಕಾಯರ್ಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿದರ್ೇಶಕರಾದ ಈರಣ್ಣಾ ಪಾಂಚಾಳ್ ಅವರು ಮಾತನಾಡಿ, ಮಕ್ಕಳ ಮೇಲಿನ ದೌರ್ಜನ್ಯ ಅಥವಾ ಹಲ್ಲೆಗಳನ್ನು ಸಕರ್ಾರವು ಗಂಭೀರವಾಗಿ ಪರಿಗಣಿಸಿದ್ದು,  ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012ಗೆ ತಿದ್ದುಪಡಿ ಮಾಡಿ, ಅಪರಾಧ ತಿದ್ದುಪಡಿ ಕಾಯ್ದೆ-2016ನ್ನು ಜಾರಿಗೊಳಿಸಿದೆ.  ಈ ಕಾಯ್ದೆ ಅನ್ವಯ 12 ವರ್ಷದೊಳಗಿನ ವಯೋಮಾನದ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯ ಅಥವಾ ಹಲ್ಲೆ ಮಾಡುವುದು ತೀವ್ರತರ ಶಿಕ್ಷಾರ್ಹ ಅಪರಾಧವಾಗಿದೆ.  ಭಾರತೀಯ ದಂಡ ಸಂಹಿತೆ 376ಎಬಿ ಪ್ರಕಾರ ಈ ಕೃತ್ಯಕ್ಕೆ ಕನಿಷ್ಠ 20ವರ್ಷದಿಂದ ಜೀವಾವಧಿ ಜೈಲು ಶಿಕ್ಷೆ ಮತ್ತು ದಂಡ ಅಥವಾ ಮರಣ ದಂಡನೆ ಶಿಕ್ಷೆಯನ್ನು ವಿಧಿಸಬಹುದಾಗಿದೆ.  

16ವರ್ಷದೊಳಗಿನ ವಯೋಮಾನದ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯ ಅಥವಾ ಹಲ್ಲೆ ಮಾಡುವುದು ತೀವ್ರತರ ಶಿಕ್ಷಾರ್ಹ ಅಪರಾಧವಾಗಿದೆ.  ಭಾರತೀಯ ದಂಡ ಸಂಹಿತೆ 376ಡಿಎ ಪ್ರಕಾರ ಈ ಕೃತ್ಯಕ್ಕೆ ಕನಿಷ್ಠ 20 ವರ್ಷದಿಂದ ಜೀವಾವಧಿ ಜೈಲು ಶಿಕ್ಷೆ ಮತ್ತು ದಂಡ ಶಿಕ್ಷೆಯನ್ನು ವಿಧಿಸಬಹುದಾಗಿದೆ.  ಅಪ್ರಾಪ್ತ ವಯಸ್ಸಿನ ಪತ್ನಿಯೊಂದಿಗಿನ ಲೈಂಗಿಕ ಸಂಪರ್ಕವೂ ಸಹ ಅತ್ಯಾಚಾರವೆಂದು ಘನ ಸವರ್ೋಚ್ಛ ನ್ಯಾಯಾಲಯ ಆದೇಶಿಸಿದ್ದು, ಬಾಲ್ಯವಿವಾಹವಾಗಿ ಪತ್ನಿಯೊಂದಿಗೆ ಲೈಂಗಿಕ ಚಟುವಟಿಕೆ ನಡೆಸಿದರೆ ಅದೂ ಸಹ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012ರನ್ವಯ ಅಪರಾಧವೆಂದು ಪರಿಗಣಿಸಿ ಶಿಕ್ಷೆ ವಿಧಿಸಬಹುದಾಗಿದೆ.  ಯಾವದೇ ಕಾರಣಕ್ಕೂ ನಿಮ್ಮ ವಸತಿ ನಿಲಯಗಳಲ್ಲಿ ಮಕ್ಕಳ ಮೇಲೆ ಯಾವುದೇ ರೀತಿಯ ಹಲ್ಲೆ, ದೌರ್ಜನ್ಯಗಳಾಗದಂತೆ, ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.  ಅಲ್ಲದೇ ಮಕ್ಕಳ ಹಕ್ಕುಗಳ ಕುರಿತು ವಸತಿ ನಿಲಯಗಳಲ್ಲಿ ಪ್ರಚಾರವನ್ನು ಕೈಗೊಳ್ಳಬೇಕು ಎಂದರು.  

ಕಾಯರ್ಾಗಾರದಲ್ಲಿ ಯುನಿಸೆಫ್ನ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ರಾಘವೇಂದ್ರ ಭಟ್ ಮಕ್ಕಳ ಹಕ್ಕುಗಳ ಕುರಿತು ಮತ್ತು ಹರೀಶ ಜೋಗಿ, ಅವರು ಮಕ್ಕಳ ಹಕ್ಕುಗಳ ಸಂರಕ್ಷಣೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012ರ ಕುರಿತು, ರವಿಕುಮಾರ ಪವಾರ "ಸಮಗ್ರ ಮಕ್ಕಳ ರಕ್ಷಣಾ ಯೋಜನೆ"ಯ ಕುರಿತು ವಿಶೇಷ ತರಬೇತಿಯನ್ನು ನೀಡಿದರು.  ಕಾಯರ್ಾಗಾರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಸತಿ ಶಾಲೆಗಳ ವಾರ್ಡನಗಳು ಹಾಗೂ ಮಕ್ಕಳ ಪಾಲನಾ ಕೇಂದ್ರಗಳ ಮುಖ್ಯಸ್ಥರುಗಳು ಭಾಗವಹಿಸಿದ್ದರು.