ಕ್ಷೇತ್ರದ ಅಭಿವೃದ್ಧಿಗಾಗಿ ಹೆಬ್ಬಾರ ರಾಜೀನಾಮೆ: ಎಚ್.ಹನುಮಂತಪ್ಪ
ಮುಂಡಗೋಡ: ಶಿವರಾಮ ಹೆಬ್ಬಾರ ಮತ್ತು ಉಳಿದ ಶಾಸಕರು ತಮ್ಮ ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿಲ್ಲ. ಬದಲಾಗಿ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದಾರೆ ಎಂದು ರಾಜ್ಯ ಎಸ್.ಸಿ.ಮೋಚರ್ಾ ಪ್ರಧಾನ ಕಾರ್ಯದಶರ್ಿ ಎಚ್. ಹನುಮಂತಪ್ಪ ಹೇಳಿದರು.
ಪಟ್ಟಣದ ಹೋಸ ಓಣಿಯ ಬಸವಣ್ಣ ದೇವಸ್ಥಾನದ ಹತ್ತಿರ ಇರುವ ಬಿಜೆಪಿ ಕಾಯರ್ಾಲಯದಲ್ಲಿ ಎಸ್.ಸಿ.ಮೋಚರ್ಾದಿಂದ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
70 ವರ್ಷ ದೇಶದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿದ್ದು ಕಾಂಗ್ರೆಸ್ನಲ್ಲಿ ದೊಡ್ಡದೊಡ್ಡ ನಾಯಕರಿದ್ದರು. ಆದರೆ ಬಾಬಾಸಾಬ ಅಂಬೇಡ್ಕರ ಅವರಿಗೆ ಭಾರತರತ್ನ ಪ್ರಶಸ್ತಿ ಭಾಜಪಾದ ಮಾಜಿ ಪ್ರಧಾನಿ ವಾಜಪೇಯಿವರ ಅವಧಿಯಲ್ಲಿ ನೀಡಲಾಯಿತು. ಬಿಜೆಪಿಯು ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿ ಮುಸ್ಲಿಂ ಪರವಾಗಿ ಇದ್ದೇವೆ ಎಂದು ತೋರಿಸಿಕೊಟ್ಟಿದೆ.
ಕುಮಾರಸ್ವಾಮಿಅವರು ಹುಸಿ ಭರವಸೆಗಳನ್ನು ನೀಡಿ ಬ್ರಷ್ಟಾಚಾರದ ತಾಂಡವವಾಡಿಬಿಟ್ಟರು. ಕಾಂಗ್ರೆಸ್ ಪಕ್ಷದಲಿತರಿಗೆ ಅನ್ಯಾಯ ಮಾಡಿದೆ ಸಮ್ಮಿಶ್ರ ಸಕರ್ಾರ ಕ್ಷೇತ್ರದ, ರಾಜ್ಯದ ಸಮಸ್ಯೆ ಸ್ಪಂದಿಸುತ್ತಿಲ್ಲವೆಂದು ರೈತ, ಜನಪರವಿರುವ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸಕರ್ಾರ ಬಂದರೆ ಮಾತ್ರ ರಾಜ್ಯದಲಿ ್ಲಉತ್ತಮ ಆಡಳಿತ ನಡೆಯುವುದು ಎನ್ನುವ ದೃಷ್ಟಿಯಿಂದ ಶಾಸಕರು ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜ್ಯದಲ್ಲಿ ಉತ್ತಮ ಸಕರ್ಾರವಿರಬೇಕು ಬಿಜೆಪಿ ಸಕರ್ಾರ ರಾಜ್ಯದಲ್ಲಿ ಇನ್ನೂ ಮೂರು ವರ್ಷ ಆಡಳಿತ ನಡೆಸಲಿದ್ದು ಜನಸಾಮಾನ್ಯರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಲು ಈ ಉಪಚುನಾವಣೆಯನ್ನು ನಾವು ಎದುರಿಸಬೇಕಾಗಿದೆ. ಯಲ್ಲಾಪುರ ಕ್ಷೇತ್ರದಲ್ಲಿ 21ಸಾವಿರ ಎಸ್.ಸಿ.ಮತಗಳಿದ್ದು ಇದರಲ್ಲಿ ಶೇ.80ರಷ್ಟು ಬಿಜೆಪಿ ಪರ ಮತಚಲಾಯಿಸುತ್ತಾರೆ ಎಂದರು.
ಬಿಜೆಪಿ ಎಸ್.ಸಿ.ಮೋಚರ್ಾ ಜಿಲ್ಲಾಧ್ಯಕ್ಷ ಅಶೋಕ ಚಲವಾದಿ ಮಾತನಾಡಿದರು. ಯಲ್ಲಾಪುರ ವಿಧಾನಸಭಾ ಕ್ಷೇತ್ರಒಟ್ಟು 231 ಭೂತ್ಗಳನ್ನು ಒಳಗೊಂಡಿದ್ದು ನಮ್ಮ ಶಕ್ತಿ ದ್ವಿಗುಣವಾಗಲಿದೆ ಮತ್ತು ಈ ಬಾರಿ ಬೇರೆ ಬೇರೆ ತಂತ್ರಗಳನ್ನು ಬಳಸಿ ಚುನಾವಣೆಯಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದಶರ್ಿ ಬಸವರಾಜ ಹರಿಜನ, ವಿನಾಯಕರಾಯ್ಕರ, ರವಿ ಹಾವೇರಿ,ಪ.ಪಂ. ಸದಸ್ಯ ಶೇಖರ ಲಮಾಣಿ, ರೇಣುಕಾ ಹಾವೇರಿ, ಶಕುಂತಾಲಾ ನಾಯಕ, ಜಯಸುಧಾ ವಡ್ಡರ, ಭರತರಾಜ ಹದಳಗಿ. ಚಂದ್ರಣ್ಣಾ ಮುಂತಾದವರಿದ್ದರು.