ಘಟಪ್ರಭಾ 01: ಪೌರ ಕಾಮರ್ಿಕರ ಪ್ರತಿಭಟನೆೆಗೆ ಮಣಿದ ಸಕರ್ಾರ ಹೊಸದಾಗಿ ಮೇಲ್ದೇಜರ್ೆಗೆರಿಸಿದ 17 ಪಟ್ಟಣ ಪಂಚಾಯತಿಗಳಲ್ಲಿ ಕೆಲಸ ನಿರ್ವಸುತ್ತಿರುವ ಪೌರ ಕಾಮರ್ಿಕರ ಹಿಂದಿನ ಬಾಕಿ ಉಳಿದ ವೇತನವನ್ನು ನೀಡುವದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ.
ಇದರಿಂದ ಕಳೆದ 10 ದಿನಗಳಿಂದ ಮಲ್ಲಾಪೂರ ಪಿ.ಜಿ ಪ.ಪಂ ಕಾಯರ್ಾಲಯದ ಎದುರು ಕ್ಲಾರ್ಕ, ವಸೂಲಿ, ಕ್ಲಾರ್ಕ ಕಂಪ್ಯೂಟರ್, ಅಪರೇಟರ್, ವಾಟರಮನ್, ವಾಯರಮನ್ ಸೇರಿದಂತೆ 30 ಕ್ಕೂ ಹೆಚ್ಚು ಪೌರ ಕಾಮರ್ಿಕರು ಕಳೆದ 14 ತಿಂಗಳ ಬಾಕಿ ವೇತನ ಹಾಗೂ ಸೇವಾ ಭದ್ರತೆಗಾಗಿ ಅನಿದರ್ಿಷ್ಟ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ದಿ.29ರಂದು ಸದರಿ ಸಿಬ್ಬಂದಿಗಳ ಪೈಕಿ 23 ಪೌರ ಕಾಮರ್ಿಕರ ವೇತನ ಪಾವತಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಅಲ್ಲದೆ ಇನ್ನೂಳಿದ 7 ಜನ ನೌಕರರ ಬಗ್ಗೆ ಮುಂದೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರಿಂದ ಕಳೆದು 10 ದಿನಗಳಿಂದ ನಡೆಯುತ್ತಿರುವ ಧರಣಿಯನ್ನು ಮುಕ್ತಾಯಗೊಳಿಸಿದ ಪೌರ ಕಾಮರ್ಿಕರು ತಮ್ಮ ಕೆಲಸಗಳಿಗೆ ತೆರಳಿದ್ದಾರೆ.
ಸಕರ್ಾರ ಪೌರ ಕಾಮರ್ಿಕರ ಬೇಡಿಕೆಗಳಿಗೆ ಸ್ಪಂದಿಸಿ 23 ಜನ ನೌಕರರ ವೇತನ ಮಂಜೂರ ಮಾಡಿದ್ದು, ಸಂತಸ ತಂದಿದೆ. ಆದರೆ ಮೇಲಾಧಿಕಾರಿಗಳು ಮುಂದಿನ ದಿನಗಳಲ್ಲಿ ಇನ್ನೂಳಿದ 7 ಜನ ನೌಕರರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮತ್ತೇ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಪೌರ ಕಾಮರ್ಿಕರ ಸಂಘಟನೆಯವರು ಎಚ್ಚರಿಸಿದ್ದಾರೆ.