ಕವಿಗೋಷ್ಠಿ, ವಿಚಾರಗೋಷ್ಠಿ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ

ರಾಮದುರ್ಗ 08: ನಾವು ಪಾಂಡಿತ್ಯವುಳ್ಳವರಾದರೂ ನಮ್ಮ ತನವನ್ನು, ಕನ್ನಡ ನಾಡಿನ ಸಂಸ್ಕೃತಿಯನ್ನು ನಾವು ಎಂದಿಗೂ ಮರೆಯಬಾರದು. ಅಂದಾಗ ನಾಡಿನ ಸಂಸ್ಕೃತಿಯ ರಕ್ಷಣೆ ಸಾಧ್ಯ. ಕನ್ನಡ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ ಎಂದು ಮಾಜಿ ಶಾಸಕ ಅಶೋಕ ಪಟ್ಟಣ ಹೇಳಿದರು.

ತಾಲೂಕಿನ ಕಟಕೋಳ ಗ್ರಾಮದಲ್ಲಿ ಗುರುವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ 7 ನೇ ತಾಲೂಕಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾವು ಏಷ್ಠೆ ಪಾಂಡಿತ್ಯವುಳ್ಳವರಾಗಿದ್ದರೂ ನಮ್ಮತನವನ್ನು ನಾವು ಮರೆಯಬಾರದು. ಇಂದಿನ ವ್ಯವಸ್ಥೆಯಲ್ಲಿ ಎಲ್ಲ ಭಾಷೆಗಳೂ ಅವಶ್ಯಕ. ಆದರೇ ಅದು ನಮ್ಮ ಇನ್ನಿತರ ಕೆಲಸಗಳಿಗಾಗಿ ಮಾತ್ರ ಸಿಮಿತವಾಗಬೇಕೆ ವಿನಹ ಅದೆ ನಮ್ಮ ಭಾಷೆಯಂತಾಗಬಾರದು ಎಂದು ಹೇಳಿದರು.

ಎಸ್.ಎನ್.ಶಿಂಗಾರಗೊಪ್ಪ, ಎಲ್.ವಿ. ದೇಸಾಯಿ, ಎನ್.ಬಿ. ದಂಡಿನದುಗರ್ಿ, ಬಿ.ಎ. ದೇಸಾಯಿ, ಮಲ್ಲನಗೌಡ ಸುರಗ, ಶಿವಪ್ಪ ಮುನವಳ್ಳಿ, ಅಜ್ಜಪ್ಪ ಪಾನಿ, ಸಿದ್ದಪ್ಪ ಹಲಗಿ, ಕಸಾಪ ಅಧ್ಯಕ್ಷ ಪಾಂಡುರಂಗ ಜಟಗನ್ನವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಕವಿಗೋಷ್ಠಿಃ

ಬರಹಗಳು ಓದುಗನ ಮನಸ್ಸು ಅರಳಿಸುವಂತಿರಬೇಕು. ಅಂತಹ ಕೌಶಲ್ಯಗಳನ್ನು ಆಧುನಿಕ ಕವಿಗಳು ಮೈಗೂಡಿಸಿಕೊಂಡು ಕನ್ನಡ ಭಾಷೆಯ ಪೋಷಣೆ ಮಾಡಲು ಮುಂದಾಗಬೇಕೆಂದು ಸಾಹಿತಿ ಕೆ.ವೈ. ಹುಣಸಿಕಟ್ಟಿ ಹೇಳಿದರು.

ತಾಲೂಕಿನ ಕಟಕೋಳದ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ 7ನೇ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಥಮ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಕವಿಗಳು ರಚಿಸಿದ ಕವಿತೆಗಳಿಂದ ಓದು ಬಲ್ಲವರು ಸಹ ಕಾವ್ಯ ವಿಮಶರ್ೆ ಮಾಡಬಲ್ಲ ಕಾಲಘಟ್ಟವಿಂದು ಬಂದೊದಗಿದೆ ಎಂದರು.

ಕವಿಯಿತ್ರಿ ವಿದ್ಯಾ ಕುಂದರಗಿ ಆಶಯ ನುಡಿ ವ್ಯಕ್ತಪಡಿಸಿದರು. 30ಕ್ಕೂ ಅಧಿಕ ಯುವ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.

ಪ್ರಾಚಾರ್ಯರಾದ ಶಿವಾನಂದ ಹುದ್ದಾರ, ಕಲಾವತಿ ಕುಂದರಗಿ, ವಿ.ಕೆ. ಬನ್ನೂರ, ಎಸ್.ಎಂ.ಶೀಲವಂತ, ಎಂ.ಎನ್.ಕುಂದರಗಿ, ಆರ್.ಸಿ.ಶೀಲವಂತಮಠ, ಎಸ್.ಎಫ್.ಜಕಬಾಳ ಹಾಗೂ ಇತರರಿದ್ದರು.

ವಿಚಾರಗೋಷ್ಠಿಃ

ಖ್ಯಾತ ಸಾಹಿತಿಗಳು ತಮ್ಮ ವಿವಿಧ ಪ್ರಕಾರದ ಸಾಹಿತ್ಯಿಕ ಕೃತಿಗಳ ರಚನೆಯ ಮೂಲಕ ಖ್ಯಾತರಾಗಿದ್ದು, ಕೃಷಿ ಕ್ಷೇತ್ರ, ಸಾಹಿತ್ಯ, ಸಂಗೀತ, ಜಾನಪದ ಕಲಾವಿದರನ್ನು ರಾಮದುರ್ಗ ತಾಲೂಕು ಕನ್ನಡ ನಾಡಿಗೆ ಕೊಡುಗೆಯಾಗಿ ನೀಡಿದೆ ಎಂದು ಡಾ.ಸಿದ್ದಪ್ಪ ಕಟ್ಟೇಕಾರ ಹೇಳಿದರು.

ತಾಲೂಕಿನ ಕಟಕೋಳದಲ್ಲಿ ಏರ್ಪಡಿಸಿದ 7ನೇ ತಾಲೂಕು ಮಟ್ಟದ  ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ನೆಲದ ಪುಲ್ಲೆನೆಗೆ ಪಾವನ ತುಳಿಸಿ ಎಂಬ ವಿಚಾರಗೋಷ್ಠಿಯಲ್ಲಿ ರಾಮದುರ್ಗ ತಾಲೂಕಿನ ವಿದ್ವತ್ ಪರಂಪರೆ ಕುರಿತು ವಿಷಯ ಮಂಡಿಸುತ್ತಾ ಅವರು ಮಾತನಾಡಿದರು.

ಸಮೀರವಾಡಿಯ ಗೋದಾವರಿ ಬೈಯೋರಿಪೈನರಿಯ ಸಹಾಯಕ ವ್ಯವಸ್ಥಾಪಕ ಡಾ.ವಿಜಯಕುಮಾರ ಕಣವಿ ಇಸ್ರೇಲ್ ಮಾದರಿ ಕೃಷಿ ಪದ್ದತಿ ಕುರಿತು ಉಪನ್ಯಾಸ ನೀಡಿದರು. ಹಂಪಿ ವಿವಿ ಸ್ನಾತಕೋತ್ತರ ಕೇಂದ್ರದ ನಿದರ್ೇಶಕ ಡಾ. ಎಸ್.ಎಸ್.ಅಂಗಡಿ  ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಾಪ ನಿಟಕಪೂರ್ವ ಅಧ್ಯಕ್ಷ ಎಸ್.ಎಂ.ಸಕ್ರಿ ಆಶಯ ನುಡಿ ವ್ಯಕ್ತಪಡಿಸಿದರು.

ಬಸನಗೌಡ ಕರಿದ್ಯಾಮನ್ನವರ ವಿಚಾರಗೋಷ್ಠಿಯ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಜಿ.ಪಂ.ಸದಸ್ಯ ಮಾರುತಿ ತುಪ್ಪದ, ಟಿ.ಪಿ.ಮುನವಳ್ಳಿ, ಪ್ರಾಚಾರ್ಯ ಕಲಾವತಿ ಕುಂದರಗಿ, ಎ.ಕೆ.ತೊರಣಗಟ್ಟಿ, ಶಿವಪ್ಪ ನವರಕ್ಕಿ, ಲಿಂಗರಾಜ ದೇಸಾಯಿ, ಬಾಳನಗೌಡ ಹೊಸಮನಿ, ಮಲ್ಲನಗೌಡ ಸುರಗ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಅತಿ ಹೆಚ್ಚು ಅಂಕಪಡೆದ ವಿಧ್ಯಾಥರ್ಿಗಳನ್ನು ಸತ್ಕರಿಸಿ ಗೌರವಿಸಲಾಯಿತು. ಬಿ.ಆರ್.ದ್ಯಾಮನಗೌಡ್ರ ಸ್ವಾಗತಿಸಿದರು. ಎಂ.ಐ.ಕುರಬೇಟ ಹಾಗೂ ಪಿ.ಎಂ.ಸತ್ತಿಗೇರಿ ನಿರೂಪಿಸಿದರು. ಆರ್.ಎಂ.ಬಡಿಗೇರ ವಂದಿಸಿದರು. 

ಸಮಾರೋಪ ಸಮಾರಂಭಃ

ಕನ್ನಡ ನಾಡಿನ ಸಾಹಿತ್ಯ, ಪರಂಪರೆಯನ್ನು ರಕ್ಷಸಲು ಒಂದುಗೂಡಿ ಕನ್ನಡ ಪರ ಕಾರ್ಯಕ್ರಮಗಳ ಆಯೋಜನೆಗೆ ಮುಂದಾಗಿರುವ ಕನ್ನಡ ಮನಸ್ಸುಗಳ ಕಾರ್ಯ ಶ್ಲಾಘನೀಯ ಎಂದು ಸಮ್ಮೇಳನದ ಸವರ್ಾಧ್ಯಕ್ಷೆ ಡಾ. ಕಲ್ಯಾಣಮ್ಮ ಲಂಗೋಟಿ ಹೇಳಿದರು.

ತಾಲೂಕಿನ ಕಟಕೋಳ ಗ್ರಾಮದಲ್ಲಿ ಗುರುವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ 7 ನೇ ತಾಲೂಕಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

ರೈತ, ಕೆಲಸಗಾರರು ತಮ್ಮ ದೈನದಿಂದ ಕೆಲಸಗಳಿಗೆ ಪ್ರಾಮುಖ್ಯತೆ ನೀಡಿದಷ್ಟು ಸಾಹಿತಿಗಳು ಸಹ ತಮ್ಮ ಕಾರ್ಯಗಳನ್ನು ಮಾಡಿ ಸಮಾಜದಲ್ಲಿ ಜಾಗೃತಿ ಮೂಡಿಸಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಿದೆ ಎಂದರು.

ಜಿ.ಪಂ ಸದಸ್ಯ ಮಾರುತಿ ತುಪ್ಪದ ಮಾತನಾಡಿ, ಯುವ ಪೀಳಿಗೆ ದುಶ್ಟಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಯುವ ಜನತೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಸಾಹಿತ್ಯಿಕ ಕೃತಿಗಳ ರಚನೆ ಅವಶ್ಯಕವಾಗಿದೆ ಎಂದರು.

ಬಸನಗೌಡ ಕರಿದ್ಯಾನ್ನವರ, ಲಿಂಗರಾಜ ದೇಸಾಯಿ, ಎ.ವೈ. ಸುರಗ, ವಿಶ್ವನಾಥ ಹನಮರಟ್ಟಿ, ಬಾಳನಗೌಡ ಹೊಸಮನಿ, ಪ್ರಕಾಶ ಅಸುಂಡಿ ಹಾಗೂ ಇತರರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಲವು ಮಹನೀಯರನ್ನು ಸ್ಥಳೀಯ ಕಸಾಪದಿಂದ ಸತ್ಕರಿಸಲಾಯಿತು.

ಸಮ್ಮೇಳನ ನಿರ್ಣಯ: 

ಕಸಾಪ ತಾಲೂಕಾ ಘಟಕದ ಅಧ್ಯಕ್ಷ ಪಾಂಡುರಂಗ ಜಟಗನ್ನವರ ಸಮ್ಮೇಲನದ ನಿರ್ಣಯಗಳನ್ನು ಮಂಡಿಸಿದರು.ಮಹದಾಯಿ-ಕಳಸಾ ಬಂಡೂರಿ ನದಿಗಳನ್ನು ಮಲಪ್ರಭಾ ನದಿಗೆ ಜೋಡನೆ ಆಗಬೇಕು. ಕಟಕೋಳ ಭಾಗವು ಮಳೆಯಾಶ್ರಿತ ಪ್ರದೇಶ ಆಗಿದ್ದರಿಂದ ಈ ಭಾಗದಲ್ಲಿ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಲು ಸಮ್ಮೇಳನದಲ್ಲಿ ಸರಕಾರವನ್ನು ಒತ್ತಾಯಿಸಲು ನಿರ್ಣಯ ತೆಗೆದುಕೊಳ್ಳಲಾಯಿತು.