ಅಥಣಿ 26: ಕರ್ನಾ ಟಕ ವ್ಯಾಪ್ತಿಯ ಕೃಷ್ಣಾ ನದಿಗೆ 4ಟಿಎಂಸಿ ನೀರು ಹರಿಸಬೇಕೆಂದು ಕನರ್ಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಸಾಂಗಲಿ ಜಿಲ್ಲಾಧಿಕಾರಿ ಅಭಿಜೀತ ಚೌಧರಿ ಮೂಲಕ ಮಹಾರಾಷ್ಟ್ರ ಸರಕಾರಕ್ಕೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಕಳೆದ ಒಂದು ತಿಂಗಳಿನಿಂದ ಕೃಷ್ಣಾ ನದಿಗೆ ನೀರು ಇರದೆ ಇದ್ದುದರಿಂದ ಕೃಷ್ಣಾ ನದಿ ದಡದ ಸುಮಾರ 8 ತಾಲೂಕುಗಳ ಸಾವಿರಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಇದರಿಂದ ಜನ ಜಾನುವಾರುಗಳು ನೀರಿಗಾಗಿ ಪರದಾಡುವ ಸ್ಥಿತಿ ಬಂದೊದಗಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬು ಹಾಗೂ ಇನ್ನಿತರ ವಾಣಿಜ್ಯ ಬೆಳೆಗಳು ಒಣಗುವ ಹಂತ ತಲುಪಿರುವುದರಿಂದ ರೈತರಿಗೆ ನೂರಾರು ಕೋಟಿ ರೂಪಾಯಿ ಹಾನಿಯಾಗುತ್ತಿದೆ. ಇಂತಹ ಸಂಕಷ್ಟದ ಸ್ಥಿತಿಯನ್ನು ಮಹಾರಾಷ್ಟ್ರ ಸರಕಾರದ ಮುಖ್ಯಮಂತ್ರಿಗಳಿಗೆ ಮತ್ತು ಮುಖ್ಯ ಕಾರ್ಯದಶರ್ಿಗಳಿಗೆ ಮನವರಿಕೆ ಮಾಡಿಕೊಡುವ ಮೂಲಕ ಅತಿ ಶೀಘ್ರದಲ್ಲಿಯೇ ಕೃಷ್ಣಾ ನದಿಗೆ ಕೋಯ್ನಾ ಹಾಗೂ ವಿವಿಧ ಜಲಾಶಯಗಳಿಂದ 4 ಟಿಎಂಸಿ ನೀರು ಹರಿಸಲು ಒಪ್ಪಿಗೆ ಪಡೆಯಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಕನರ್ಾಟಕ ರಕ್ಷಣಾ ವೇದಿಕೆಯ ತಾಲೂಕಾ ಅಧ್ಯಕ್ಷ ಬಸನಗೌಡ ಪಾಟೀಲ (ಬೊಮ್ನಾಳ), ಕಾಯರ್ಾಧ್ಯಕ್ಷ ಅನೀಲ ಸೌದಾಗರ ಮಂಜುನಾಥ ಹೋಳಿಕಟ್ಟಿ, ಸುಭಾಷ ಕಾಂಬಳೆ, ರಾಕೇಶ ಮೈಗೂರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.