ಪಂಚಾಯತ್ ಸದಸ್ಯೆಯನ್ನು ಕೊಲೆ ಮಾಡಿದವನಿಗೆ ಜೀವಾವಧಿ ಶಿಕ್ಷೆ ಪ್ರಕಟ

The person who killed the panchayat member was sentenced to life imprisonment

ಪಂಚಾಯತ್ ಸದಸ್ಯೆಯನ್ನು ಕೊಲೆ ಮಾಡಿದವನಿಗೆ ಜೀವಾವಧಿ ಶಿಕ್ಷೆ ಪ್ರಕಟ

ಕಾರವಾರ 07  : ಪಂಚಾಯತ್ ಸದಸ್ಯೆಯನ್ನು ಕೊಲೆ ಮಾಡಿದ್ದ ಅಪರಾಧಿ ಬಸವರಾಜ ಗದಿಗೆಪ್ಪ ಮೇಲಿನಮನಿಗೆಶಿರಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ಆದೇಶ ನೀಡಿದ್ದಾರೆ.ಮುಂಡಗೋಡ ಪಾಳ ಗ್ರಾಮಪಂಚಾಯತ್‌ ಸದಸ್ಯೆ ಅಕ್ಕಮ್ಮಳನ್ನು , ಸಂಶಯ ದಿಂದ ಹಾಗೂ ಅಧ್ಯಕ್ಷರ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಾಳೆಂದು ಆಕೆಯ ಪತಿ ಬಸವರಾಜ ಮೇಲಿನಮನಿ ಕೊಡಲಿಯಿಂದ ಹೊಡೆದು, ಕತ್ತು ಹಿಚುಕಿ 2 ಅಗಸ್ಟ 2022 ರಂದು ಸಂಜೆ ಐದು ಗಂಟೆಗೆ ಕೊಲೆ ಮಾಡಿದ್ದ. ನಂತರ ಶವವನ್ನು ಕೋಣೆಯಲ್ಲಿ ಮುಚ್ಚಿಟ್ಟಿದ್ದ. ರಾತ್ರಿ ಮಕ್ಕಳು ಮಲಗಿದ ಮೇಲೆ ಅಕ್ಕಮ್ ಶವವನ್ನು ಮನೆಯ ಅಂಗಳದಲ್ಲಿಟ್ಟು ,ಕೀಟ ನಾಶಕ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ್ದ. ಸಿಪಿಐ ಸಿದ್ದಪ್ಪ ಸಿಮಾನಿ ,ಕರಿಬಸಪ್ಪ, ತಿರುಪತಿ ತನಿಖೆ ಮಾಡಿ, ಸಾಕ್ಷಿ ಆಧಾರ ಸಹಿತ ಚಾರ್ಜಶೀಟ್ ಹಾಕಿದ್ದರು. ಸರ್ಕಾರಿ ವಕೀಲ ರಾಜೇಶ್ ಎಂ.ಮಳಗೀಕರ್ ಸಮರ್ಥವಾದ ಮಂಡಿಸಿದ್ದರು.ಶಿರಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ್ ಕಿಣಿ, ವಾದ ಆಲಿಸಿ , ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಬಸವರಾಜ ಮೇಲಿಮನಿಗೆ ಜೀವಾವಧಿ ಶಿಕ್ಷೆ ಹಾಗೂ ರೂ. 25000 ದಂಡ ವಿಧಿಸಿದ್ದಾರೆ. ಅಲ್ಲದೇ ರೂ.50000 ಕೊಲೆಯಾದವಳ ಮಕ್ಕಳಿಗೆ ಪರಿಹಾರ ಕೊಡಬೇಕೆಂದು ಇಂದುತೀರ​‍್ು ನೀಡಿದ್ದಾರೆ.