ಚಿಕ್ಕೋಡಿ 22: ಬರುವಂತಹ ದಿನಗಳಲ್ಲಿ ಚಿಕ್ಕೋಡಿಯು ಜಿಲ್ಲೆಯಾಗುವದರಿಂದ ಜಿಲ್ಲಾ ಮಟ್ಟದ ಸಕರ್ಾರಿ ಕಚೇರಿಗಳು ಚಿಕ್ಕೋಡಿಯಲ್ಲಿ ಆರಂಭವಾಗುತ್ತಿದ್ದು, ಕೇಂದ್ರ ಸಕರ್ಾರವು ಅಂಚೆ ಕಚೇರಿ ಮೂಲಕ ಚಿಕ್ಕೋಡಿಯಲ್ಲಿ ಪಾಸಪೋರ್ಟ ಕಚೇರಿ ಆರಂಭ ಮಾಡಿರುವುದು ಗಡಿ ಭಾಗದ ಜನರಿಗೆ ಅನುಕೂಲ ಕಲ್ಪಿಸಿದೆ ಎಂದು ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು.
ಶುಕ್ರವಾರ ನಗರದ ಪ್ರಾದೇಶಿಕ ಅಂಚೆ ಕಚೇರಿಯಲ್ಲಿ ಆರಂಭವಾದ ಪಾಸಪೋರ್ಟ ಸೇವಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ ಪಾಸಪೋರ್ಟ ಸೇವಾ ಕೇಂದ್ರ ಬೆಳಗಾವಿಯಲ್ಲಿ ಆರಂಭವಾದಾಗ ನಾನು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಚಿಕ್ಕೋಡಿಯಲ್ಲಿ ಪಾಸಪೋರ್ಟ ಕಚೇರಿ ಪ್ರಾರಂಭವಾಗಬೇಕೆಂದು ಮನವಿ ಮಾಡಿದಾಗ ಅಧಿಕಾರಿಗಳು ಸ್ಪಂಧಿಸಿ ಚಿಕ್ಕೋಡಿಯಲ್ಲಿ ನೂತನ ಪಾಸಪೋರ್ಟ ಸೇವಾ ಕೇಂದ್ರ ಪ್ರಾರಂಭಿಸಿದೆ. ಚಿಕ್ಕೋಡಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲ ತಾಲೂಕಿನ ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪಾಸಪೋರ್ಟ ಸೇವಾ ಕೇಂದ್ರ ಮಂಜೂರಾಗಲು ನನ್ನ ಜೊತೆ ವಿರೋಧ ಪಕ್ಷದ ನಾಯಕರು ಸಹ ಸಹಕರಿಸಿದ್ದಾರೆ. ಈ ವಿಷಯದಲ್ಲಿ ರಾಜಕಾರಣ ಮಾಡೋದು ಬೇಡ, ಯಾರು ಕೆಲಸ ಮಾಡಿದ್ದಾರೆ ಅಂತವರ ಹೆಸರು ಹೇಳಬೇಕಾಗುತ್ತದೆ. ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ, ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮತ್ತು ಇನ್ನಿತರು ಶಾಸಕರು ಸಹ ಸಹಕಾರ ಮಾಡಿದ್ದಾರೆ ಎಂದರು.
ದಕ್ಷಿಣ ಭಾರತದಲ್ಲಿ ಪ್ರತಿಯೊಂದು ದೊಡ್ಡ ದೊಡ್ಡ ನಗರಗಳಲ್ಲಿ ಪಾಸಪೋರ್ಟ ಸೇವಾ ಕೇಂದ್ರ ಇವೆ. ಆದರೆ ವಿಸಾ ಕಚೇರಿ ಮಾತ್ರ ಮುಂಬೈ ಮತ್ತು ಚೆನೈ ನಗರದಲ್ಲಿದ್ದು, ಬೆಂಗಳೂರಿನಲ್ಲಿ ವಿಸಾ ಕಚೇರಿ ಆರಂಭ ಮಾಡಬೇಕೆಂದು ಕೇಂದ್ರ ಸಕರ್ಾರದ ಮೇಲೆ ಒತ್ತಡ ಹಾಕಲಾಗುತ್ತದೆ. ಶೀಘ್ರವಾಗಿ ಬೆಂಗಳೂರಿನಲ್ಲಿ ವಿಸಾ ಕಚೇರಿ ಆರಂಭ ಮಾಡಲಾಗುತ್ತದೆ ಎಂದರು.
ಶೀಘ್ರವಾಗಿ 139 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಸಮ್ಮಿಶ್ರ ಸಕರ್ಾರ ರಚನೆಯಾದ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಬಜೆಟ್ದಲ್ಲಿ ಚಿಕ್ಕೋಡಿ ಬ್ರಾಂಚ್ ಕೆನಾಲ ನಿಮರ್ಾಣಕ್ಕೆ 100 ಕೋಟಿ ರೂ ಒದಗಿಸಿದ್ದರು. ಆದರೆ ಕ್ರಿಯಾ ಯೋಜನೆ ರೂಪಿಸಿದಾಗ ಅದು 139 ಕೋಟಿ ರೂ ವೆಚ್ಚವಾಗಿದ್ದು, ಫೆಬ್ರುವರಿ ಕೊನೆ ವಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಚಿಕ್ಕೋಡಿಗೆ ಆಗಮೀಸಿ 139 ಕೋಟಿ ರೂ ವೆಚ್ಚದ ಚಿಕ್ಕೋಡಿ ಬ್ರಾಂಚ್ ಕೆನಾಲ್ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಲಿದ್ದಾರೆ ಎಂದರು.
ಅಂಚೆ ಕಚೇರಿ ಅಧಿಕಾರಿಗಳಾದ ಹರ್ಷವರ್ಧನ, ಭರತಕುಮಾರ ಕುಟ್ಟಟ್ಟಿ, ಸನಾ ನಾಯಿಕ, ಎಸ್.ಡಿ.ಕುಲಕಣರ್ಿ, ದರ್ಶನ ಉಪಾಧ್ಯ, ಎಸ್.ಬಿ.ಕುಲಕಣರ್ಿ, ರವಿ ಮಿಜರ್ೆ, ಸಾಭೀರ ಜಮಾದಾರ, ಮುದ್ದಸರ ಜಮಾದಾರ, ಮಹಾವೀರ ಮೋಹಿತೆ, ನರೇಂದ್ರ ನೇಲರ್ೆಕರ, ಪ್ರಕಾಶ ವಂಟಮುತ್ತೆ, ಪ್ರಭಾಕರ ಈ ಕೋರೆ, ರವಿ ಮಾಳಿ, ಸತೀಶ ಕುಲಕಣರ್ಿ, ಗುಲಾಬ ಬಾಗವಾನ, ಪಿರೋಜ ಕಲಾವಂತ, ಎಸ್.ಎಸ್.ಕವಲಾಪೂರೆ, ಸತೀಶ ಪಾಟೀಲ ಮುಂತಾದವರು ಇದ್ದರು.