ಮಾಂಜರಿ: ನೂತನವಾಗಿ ನಿರ್ಮಿಸಿರುವ ಹನುಮಾನ, ಗಣೇಶ ಮೂರ್ತಿ ಪ್ರತಿಷ್ಠಾಪನೆ

ಲೋಕದರ್ಶನ ವರದಿ

ಮಾಂಜರಿ 13:  ಚಿಕ್ಕೋಡಿ ತಾಲೂಕಿನ ಹಳೆ ಯಡೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ  ಹನುಮಾನ ಮತ್ತು ಗಣೇಶ ಮಂದಿರದಲ್ಲಿ ನಾಳೆ ಪ್ರತಿಷ್ಠಾಪಣೆಗೊಳ್ಳಲಿರುವ ಹನುಮಾನ ಮತ್ತು ಗಣೇಶ ಮೂತರ್ಿಯನ್ನು ಇಂದು ಸುಮಂಗಲೆಯರ ಕುಂಭಮೇಳದೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು. 

ಶ್ರೀಕ್ಷೇತ್ರ ಯಡೂರಿನ ಕಾಡಸಿದ್ದೇಶ್ವರ ಕಲ್ಯಾಣ ಮಠದಲ್ಲಿ ಶ್ರೀಶೈಲ ಜಗದ್ಗುರುಗಳಾದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳ ಹಸ್ತದಿಂದ ಪ್ರತಿಷ್ಟಾಪನೆಗೊಳ್ಳಲಿರುವ ಮೂತರ್ಿಗಳಿಗೆ ಪೂಜೆಯನ್ನು ನೆರವೆರಿಸಿದರು ತದನಂತರ ಹೊಸ ಯಡುರ ಮತ್ತು ಹಳೆಯಡೂರ ಗ್ರಾಮದ ಪ್ರಮುಖ ರಸ್ತೆಯ ಮುಖಾಂತರ ವಾದ್ಯ ಮೇಳದೊಂದಿಗೆ ಹೊಸದಾಗಿ ನಿಮರ್ಿಸಿರುವ ಮಂದಿರದವರೆಗೆ ಭವ್ಯ ಮೆರವಣಿಗೆಯನ್ನು ನೆರವೆರಿಸಲಾಯಿತು ಈ ವೇಳೆ ಧೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾಖರ್ಾನೆಯ ನಿದರ್ೆಶಕ ಅಜಿತರಾವ ದೇಸಾಯಿ, ಸಂತೋಷ ಭಾವಿದಂಡಿ, ಶ್ರೀಕಾಂತ ಉಮರಾಣೆ, ರಾಜು ಹಕಾರೆ, ಅಮರ ಬೊರಗಾಂವೆ, ಈರಗೌಡಾ ಪಾಟೀಲ, ಈರಗೌಡಾ ಚೌಗಲೆ, ಸಚೀನ ಪಾಟೀಲ, ನರಸಗೌಡಾ ಕಮತೆ, ಈರಣ್ಣಾ ಕೋಳಿ, ರಾವಸಾಹೇಬ ಪೋಲಿಸ್, ಅಣ್ಣಾಪ್ಪಾ ಬೋರಗಾಂವೆ, ಬಾಬಾಸಾಹೇಬ ಬೊರಗಾಂವೆ ಹಾಗೂ ಮಹಿಳೆಯರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

ಶುಕ್ರವಾರ ಮೂತರ್ಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಶುಕ್ರವಾರ ನಡೆಯಲಿರುವ ಮೂತರ್ಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭದ ದಿವ್ಯ ಸಾನಿಧ್ಯ ಶ್ರೀಶೈಲ ಜಗದ್ಗುರುಗಳು ವಹಿಸಲಿದ್ದು ಅಧ್ಯಕ್ಷತೆಯನ್ನು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ವಹಿಸಲಿದ್ದು ಅತಿಥಿಯಾಗಿ ಅಣ್ಣಾಸಾಹೇಬ ಜೊಲ್ಲೆ, ಶಶಿಕಲಾ ಜೊಲ್ಲೆ, ಲಕ್ಷ್ಮಣ ಸವದಿ, ಮಹಾಂತೇಶ ಕವಟಗಿಮಠ, ಪ್ರಕಾಶ ಹುಕ್ಕೇರಿ, ಕಲ್ಲಪ್ಪಾ ಮಗೇಣ್ಣವರ, ಅಜಿತರಾವ ದೇಸಾಯಿ, ಬಸವರಾಜ ಸಿಂಧೂರ, ಬಸವಪ್ರಸಾದ ಜೊಲ್ಲೆ, ಪಾಂಡುರಂಗ ಕೋಳಿ, ಭಿಮಗೌಡಾ ಪಾಟಿಲ, ಲಕ್ಷ್ಮಣ ಬೋರಗಾಂವೆ ಹಾಜರಿರುವರು.