ಪ್ರತಿ ಹಳ್ಳಿಗೆ ಕುಡಿಯುವ ನೀರು ಪೂರೈಸುವ ನೂತನ ಜಲಧಾರೆ ಯೋಜನೆ ಜಾರಿಗೆ ಉದ್ದೇಶ: ಸಚಿವ ಕೃಷ್ಣಭೈರೇಗೌಡ

ಲೋಕದರ್ಶನ ವರದಿ

ವಿಜಯಪುರ 30: ರಾಜ್ಯದ ಪ್ರತಿ ವಸತಿಯುಳ್ಳ ಗ್ರಾಮಗಳಿಗೆ ಪೈಪಲೈನ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವ ನೂತನ ಜಲಧಾರೆ ಯೋಜನೆ ಜಾರಿಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್, ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಕೃಷ್ಣ ಭೈರೇಗೌಡ ಅವರು ತಿಳಿಸಿದರು. 

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಪಂಚಾಯತ್ ರಾಜ್ ಇಲಾಖೆ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದ ಪ್ರತಿ ವಸತಿಯುಳ್ಳ ಗ್ರಾಮಕ್ಕೆ ಪೈಪಲೈನ್ ಮೂಲಕ ಕುಡಿಯುವ ನೀರು ಪೂರೈಸುವ ಉದ್ದೇಶ ಹೊಂದಲಾಗಿದ್ದು, ನೂತನ ಜಲಧಾರೆ ಯೋಜನೆ ಜಾರಿಗೆಗೆ ಸಂಬಂಧಪಟ್ಟಂತೆ ಮುಂಬರುವ ತಿಂಗಳ ಸಚಿವ ಸಂಪುಟದಲ್ಲಿ ಈ ಕುರಿತು ತೀಮರ್ಾನ ಕೈಗೊಳ್ಳಲಾಗುವುದೆಂದು ತಿಳಿಸಿದರು. 

ಈ ಯೋಜನೆಯಡಿ ಜಲಸಂಪನ್ಮೂಲ ಲಭ್ಯತೆ ಮತ್ತು ತೀರ ಅವಶ್ಯಕತೆಯುಳ್ಳ ಗ್ರಾಮಗಳಿಗೆ ಪ್ರಥಮಾದ್ಯತೆ ನೀಡಲಾಗುವುದು. ಈ ಯೋಜನೆಯಿಂದ ವಿಶೇಷವಾಗಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಜಿಲ್ಲೆಗಳಿಗೆ ಪ್ರಥಮ ಪ್ರಾಶ್ಯಸ್ತ ಸಹ ನೀಡಲಾಗುವುದೆಂದು ಹೇಳಿದ ಅವರು, ವಿಜಯಪುರ ಜಿಲ್ಲೆಗೆ ಸಂಬಂಧಪಟ್ಟಂತೆ ನೀಲನಕ್ಷೆಯನ್ನು ಸಿದ್ದಪಡಿಸುವ ಜೊತೆಗೆ ಪ್ರಾಥಮಿಕ ಯೋಜನಾ ವರದಿಯನ್ನು ಆಯಾ ಶಾಸಕರು, ಸಚಿವರು, ಮತ್ತು ಹಿರಿಯ ಅಧಿಕಾರಿಗಳ ಸಮಾಲೋಚನೆಯೊಂದಿಗೆ ಸಿದ್ಧಪಡಿಸಬೇಕು. ಮುಂದಿನ ವರ್ಷದಲ್ಲಿ ಈ ಯೋಜನೆ ಕುರಿತಂತೆ ಟೆಂಡರ್ ಆಹ್ವಾನಕ್ಕೂ ಪ್ರಯತ್ನಿಸಲಾಗುವುದೆಂದು ಹೇಳಿದರು. 

ಜಿಲ್ಲೆಯಲ್ಲಿ ಅಲ್ಪಾವಧಿಯಲ್ಲಿ ಜನರಿಗೆ ನೀರು ಕಲ್ಪಿಸುವ ಯೋಜನೆಗಳಿಗೆ ಪ್ರಥಮ ಪ್ರಾಶ್ಯಸ್ತ ನೀಡಬೇಕು. ವಿಶೇಷವಾಗಿ ಪ್ರಗತಿಯಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಗಮನ ನೀಡಬೇಕು. ಪೀರಾಪುರ ಯೋಜನೆಗೆ ಹೆಚ್ಚುವರಿ 5 ಕೋಟಿ ರೂ. ಅನುದಾನ ಹೆಚ್ಚಿಸುವ ಕುರಿತಂತೆ ಸಚಿವ ಸಂಪುಟದಲ್ಲಿ ಕೋರಲಾಗುವುದು. ಅಸ್ಕಿ, ಕಲಕೇರಿ ಯೋಜನೆಗೆ ಸಂಬಂಧಪಟ್ಟಂತೆ ವಂದಾಲ ಕೆರೆಯಿಂದ ನೀರು ಪಡೆಯುವ ಕುರಿತಂತೆ ಖಚರ್ು-ವೆಚ್ಚದ ವರದಿ ಸಹ ಸಲ್ಲಿಸಬೇಕು. ತಿಕೋಟಾ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಈ ಹಿಂದಿನ ಗುತ್ತಿಗೆದಾರರಿಗೆ ನೀಡಬೇಕಾದ ಬಾಕಿ ಹಣವನ್ನು ಟಾಸ್ಕಪೋಸರ್್ ಅಥವಾ ಎಸ್ಡಿಪಿನಲ್ಲಿ ಅನುದಾನ ಲಭ್ಯತೆಯಾಧಾರದ ಮೇಲೆ ಒದಗಿಸಲು ಪ್ರಯತ್ನಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ರಾಜ್ಯ ಹಾಗೂ ಜಿಲ್ಲೆಯಲ್ಲಿ ತೀವ್ರ ಬರ ಇರುವ ಹಿನ್ನಲೆಯಲ್ಲಿ ಜನರಿಗೆ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹನಾಧಿಕಾರಿಗಳು, ಆಯಾ ತಹಶೀಲ್ದಾರ, ತಾಲೂಕಾ ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿಗಳು ಮತ್ತು ಪಿಡಿಓಗಳೊಂದಿಗೆ ಜಂಟಿ ಸಭೆ ನಡೆಸಿ, ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು. ಸಧ್ಯಕ್ಕೆ 90 ದಿನಗಳ ನಂತರ ಟ್ಯಾಂಕರ್ ಮೂಲಕ ನೀರು ಸರಬರಾಜುವಿಗೆ ಅವಕಾಶ ನೀಡಿರುವುದರಿಂದ ತ್ವರಿತವಾಗಿ ಅವಶ್ಯಕತೆ ಇರುವ ಗ್ರಾಮಗಳಿಗೆ 90 ದಿನಗಳ ನಂತರವೂ ಸಹ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ನೀರಿನ ಸಮಸ್ಯೆ ಬಗೆಹರಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು. 

ತ್ವರಿತವಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಅನುಕೂಲವಾಗುವಂತೆ ಬಾಡಿಗೆಯಾಧಾರಿತ ಕೊಳವೆ ಬಾವಿಗಳನ್ನು ಗುರುತಿಸಬೇಕು. ಅದರಂತೆ ಟಾಸ್ಕಪೋಸರ್್ದಡಿಯಲ್ಲಿ ನೀರಿನ ಸಮಸ್ಯೆ ನಿವಾರಣೆಗಾಗಿ ಹೆಚ್ಚುವರಿಯಾಗಿ 50 ಲಕ್ಷ ರೂ.ಸಹ ಒದಗಿಸಿದ್ದು, ಇದರ ಸಮರ್ಪಕ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಜಿಲ್ಲೆಗೆ ಅವಶ್ಯಕವಿರುವ ಇನ್ನೋರ್ವ ಭೂಗರ್ಭಶಾಸ್ತ್ರಜ್ಞರನ್ನು ನೇಮಿಸಿಕೊಳ್ಳಬೇಕೆಂದು ಸೂಚನೆ ನೀಡಿದರು. 

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ ಗುರಿಗೆ ತಕ್ಕಂತೆ ಕೆಲಸ ಆಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು,  ಜಿಲ್ಲೆಯಲ್ಲಿ ಒಟ್ಟು 40 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಬೇಕು. ಪ್ರತಿ ತಿಂಗಳು ಸಾಧಿಸಿದ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಬೇಕು. ಸಮರ್ಪಕ ಪ್ರಗತಿ ಸಾಧಿಸದ ಅಧಿಕಾರಿಗೆ ಪ್ರತಿ ತಿಂಗಳು ನೋಟಿಸ್ ನೀಡಿ, ಹೀಗೆ ಒಟ್ಟಾರೆ ಮೂರು ನೋಟಿಸ್ ನೀಡಿ, ಯಾವುದೇ ರೀತಿಯ ಪ್ರಗತಿ ಕಾಣದೇ ಇರುವ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ ಅವರು, ಆಯಾ ತಾಲೂಕಾ ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿಗಳು ಮತ್ತು ಪಿಡಿಓಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಎಚ್ಚರಿಕೆ ನೀಡಿದರು. 

ಅದೇ ರೀತಿ ಜಿಲ್ಲೆಯ ಎಲ್ಲ ಸಕರ್ಾರಿ ಶಾಲೆಗಳಿಗೆ ಮುಂಬರುವ ಜೂನ್ರೊಳಗೆ ಕಂಪೌಂಡ್ ಗೋಡೆ ನಿಮರ್ಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಶಿಕ್ಷಣ ಇಲಾಖೆ ಅಧಿಕಾರಿಗಳು, ಮತ್ತು ಆಯಾ ಪಿಡಿಓಗಳೊಂದಿಗೆ ಈ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. 

ರೈತರ ಬೆಳೆ ವಿಮೆ ನೊಂದಣಿ ಪ್ರಮಾಣ ಹೆಚ್ಚಿಸಬೇಕು. ತೋಟಗಾರಿಕಾ ಬೆಳೆ ಅಭಿವೃದ್ದಿಗಾಗಿ ಉದ್ಯೋಗಖಾತ್ರಿ ಯೋಜನೆಯಡಿ ತೋಟಗಾರಿಕಾ ಬೆಳೆ ಉತ್ತೇಜನ ಹಾಗೂ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡಬೇಕು. ಸ್ವಚ್ಛ ಭಾರತ ಮಿಷನ್ ಪ್ರಗತಿ ಸಾಧಿಸಬೇಕು. ಬರುವ ಮಾಚರ್್ ಅಂತ್ಯದೊಳಗೆ ಎಲ್ಲ ಕುಡಿಯುವ ನೀರಿನ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.  

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಶಿವಾನಂದ ಎಸ್.ಪಾಟೀಲ, ಶಾಸಕರಾದ ಎಂ.ಬಿ.ಪಾಟೀಲ, ಯಶವಂತರಾಯಗೌಡ ಪಾಟೀಲ, ದೇವಾನಂದ ಚವ್ಹಾಣ, ಸೋಮನಗೌಡ ಪಾಟೀಲ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನೀಲಮ್ಮ ಮೇಟಿ, ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದಶರ್ಿ ಎಲ್.ಎ.ಅತೀಕ, ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಶ ಕಿಶೋರ ಸುರಳಕರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.